ಹೊನ್ನಾಳಿ : ಕರ್ನಾಟಕ ರಾಜ್ಯ ಕುಂಚಿಟಿಗರ ಒಕ್ಕೂಟದವತಿಯಿಂದ 2 ದಿನಗಳ ಕಾಲ ಕುಂಚಿಟಿಗರ ಭಾವೈಕ್ಯತಾ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದ್ದು ರಾಜ್ಯದ ಎಲ್ಲಾ ಕುಂಚಿಟಿಗರ ಸಂಘ-ಸಂಸ್ಥೆಗಳು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು ಎಂದು ದಾವಣಗೆರೆ ಜಿಲ್ಲಾ ಕುಂಚಿಟಿಗರ ಸಂಘದ ಅಧ್ಯಕ್ಷ ನಿಲೋಗಲ್ ರಂಗನಗೌಡರು ಹೇಳಿದರು.
ತಾಲೂಕಿನ ಸಾಸ್ವೆಹಳ್ಳಿಯಲ್ಲಿ ಕುಂಚಿಟಿಗರ ಸಮಾಜದವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಜುಲೈ 27ರ ಶನಿವಾರದಂದು ಬಯಲುಸೀಮೆ ಮಲೆನಾಡು ಕರಾವಳಿ ಸಂಗಮದ ಭಾವೈಕ್ಯತಾ ಪ್ರವಾಸವು ಹಿರಿಯೂರು ತಾಲ್ಲೂಕು ಮಾರ್ಗವಾಗಿ ಪ್ರಾರಂಭವಾಗಿ ಶಾಂತಿಸಾಗರ-ನಿಲೋಗಲ್-ಗುಡ್ಡದ ಕೊಮಾರನಹಳ್ಳಿ-ಕುಳಗಟ್ಟೆ ಗ್ರಾಮಗಳಲ್ಲಿ ಸಂಚರಿಸಿ ಗೊಲ್ಲರಹಳ್ಳಿಯ ನಳಂದ ವಿದ್ಯಾಸಂಸ್ಥೆಗೆ ಭೇಟಿ ನೀಡಲಾಯಿತು. ಬಳಿಕ ಮಾಸಡಿ ನರಸಗೊಂಡನಹಳ್ಳಿ-ಸುಂಕದಕಟ್ಟೆ-ಕುಂಕುವ-ಸೂರಗೊಂಡನಕೊಪ್ಪಕ್ಕೆ ಭೇಟಿ ನೀಡಿ ರಾತ್ರಿ ಶಿಕಾರಿಪುರದಲ್ಲಿ ವಾಸ್ತವ್ಯ ಹೂಡಲಾಗಿತ್ತು ಎಂದು ಮಾಹಿತಿ ನೀಡಿದರು.
ಭಾನುವಾರ ಬೆಳಿಗ್ಗೆ ಶಿಕಾರಿಪುರದ ಮಾರ್ಗವಾಗಿ ಕುಬಟೂರು-ಜಡೆ-ಶಿರಸಿ-ದಾಸನಕೊಪ್ಪ-ಲಕ್ಷ್ಮಿಪುರ-ರಂಗಾಪುರ-ಹಾನಗಲ್ ಮತ್ತು ಅಕ್ಕಿಆಲೂರು ಗ್ರಾಮಗಳ ಸಮಾಜ ಬಾಂಧವರನ್ನು ಸೌಹಾರ್ದಯುತವಾಗಿ ಭೇಟಿಯಾಗುಬ ಉದ್ದೇಶದಿಂದ ಸುಮಾರು 350 ಕಿ.ಮೀ. ದೂರದ ಈ ಯಾತ್ರೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕುಂಚಿಟಿಗರ ಸಂಘದ ಕಾರ್ಯದರ್ಶಿ ಎನ್.ಎಚ್.ರವೀಂದ್ರನಾಥ್, ಕುಂಚಿಟಿಗ ನೌಕರರ ಸಂಘದ ಅಧ್ಯಕ್ಷ ಜಿ.ಎಸ್.ತಿಮ್ಮಪ್ಪ, ಮುಖಂಡರಾದ ಎಂ.ಎಲ್.ಸುರೇಶ್, ನರಸಿಂಹಮೂರ್ತಿ, ರವೀಂದ್ರನಾಥ್ ದೊಡ್ಡಮನಿ, ಜಿ.ಎಚ್.ಪ್ರಹ್ಲಾದ್, ಎಚ್.ಜಿ.ಪುರುಷೋತ್ತಮ್, ಎ.ಪಿ.ಶಾಂತರಾಜ್, ಜಿ.ಕೆ.ಅರುಣ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು