ಶಿವಮೊಗ್ಗ : ಪೊಲೀಸ್ ಠಾಣೆ ಎದುರೇ ವ್ಯಕ್ತಿಯೊಬ್ಬ ಬ್ಲೇಡ್ ನಿಂದ ಕೈ ಕೊಯ್ದುಕೊಂಡಿದ್ದಾನೆ. ಅಷ್ಟಕ್ಕೂ ನಡೆದಿರುವ ಘಟನೆ ಕೇಳಿದ್ರೆ ಹೀಂಗಾ ಅಂತೀರಾ.
ಹೌದು.. ಈ ಘಟನೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆ ಎದುರು ಜೂ.21 ರಾತ್ರಿ ನಡೆದಿದ್ದು, ಗೌತಮ್ (21)ಎಂಬಾತ ಆತ್ಮಹತ್ಯೆಗೆ ಪ್ರಯತ್ನಿಸಿದವ.
ಈತ ಅಪ್ರಾಪ್ತೆಯೊಬ್ಬರನ್ನು ಹಿಂಬಾಲಿಸುತ್ತಾ ಚುಡಾಯಿಸುತ್ತಿದ್ದ. ಇದಕ್ಕೆ ರೋಸಿ ಹೋದ ಪೋಷಕರು ಗೌತಮ್ ಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ಆತ ಅಪ್ರಾಪ್ತೆಯನ್ನು ಫಾಲೋ ಮಾಡಿ ಚುಡಾಯಿಸುವುದನ್ನ ಬಿಟ್ಟಿರಲಿಲ್ಲ. ಇದರಿಂದ ಪೋಷಕರು ಪೊಲೀಸರಿಗೆ ದೂರು ನೀಡುತ್ತೆನೆ ಅಂದಿದ್ದಾರೆ. ಅಷ್ಟೇ ಗೌತಮ್ ಕೋಟೆ ಪೊಲೀಸ್ ಠಾಣೆ ಎದುರು ಎರಡೂ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ನಾನು ಎಲ್ಲೂ ಹೋಗುವುದಿಲ್ಲ ಠಾಣೆಯ ಎದುರೇ ಹೀಗೆ ರಕ್ತ ಕಾರಿಕೊಂಡು ಸಾಯುತ್ತೇನೆ ಎಂದು ಎರಡೂ ಕೈಗಳನ್ನ ಬ್ಲೇಡ್ ನಿಂದ ಕೊಯ್ದುಕೊಂಡಿದ್ದಾನೆ. ಠಾಣೆಯಲ್ಲಿದ್ದ ಸಿಬ್ಬಂದಿಗಳು ರಕ್ಷಿಸಲು ಮುಂದೆ ಹೋದಾಗ ಠಾಣೆಯ ಕಾಪೌಂಡ್ ನಿಂದಹೊರಗಡೆ ಓಡಿ ಹೋಗಿ ಬೈಕ್ ಹತ್ತಿಕೊಂಡು ಪರಾರಿಯಾಗಿದ್ದಾನೆ.
ಹೀಗೆ ಠಾಣೆಯ ಮುಂದೆ ಬಂದು ಕೈಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿ ಪರಾರಿಯಾದ ಬಗ್ಗೆ ಪೊಲೀಸರು ಸುಮೋಟೋ ದೂರು ದಾಖಲಿಸಿಕೊಂಡಿದ್ದಾರೆ. ಒಟ್ಟಾರೆ ಸಿನಿಮಾದ ಒಂದು ದೃಶ್ಯ ರೀಲ್ ನಿಂದ ರಿಯಲ್ ಆಗಿದ್ದು, ಇಂತಹ ಕೃತ್ಯಕ್ಕೆ ಪೊಲೀಸರು ತಕ್ಕ ಪಾಠ ಕಲಿಸಲಿದ್ದಾರೆ.