
ದಾವಣಗೆರೆ.:ಉಡುಪಿ ಜಿಲ್ಲೆಯ ಶ್ರೀ ಸಿದ್ದಿ ವಿನಾಯಕ ರೆಸಿಡೆನ್ಸಿಯಲ್ ಶಾಲೆಯ ವಿದ್ಯಾರ್ಥಿಯಾದ ಆರ್.ಗುರುಕಿರಣ್ ತಮ್ಮ ಶಾಲೆಯಲ್ಲಿ ನಡೆದ ರೂಬಿಕ್ ಕ್ಯೂಬಿಕ್ ಮೊಸಾಯಿಕ್ ಆಟದಲ್ಲಿ ಗಿನ್ನಿಸ್ ವಲ್ಡ್೯ ರೆಕಾರ್ಡ ಅವಾರ್ಡ ಪಡೆದಿದ್ದು ಅವರ ಈ ಸಾಧನೆಗೆ ಅಖಿಲ ಕರ್ನಾಟಕ ಸರ್ವಜ್ಞ ಸಾಂಸ್ಕೃತಿಕ ಕಲಾವೇದಿಕೆ ಅಭಿನಂದನೆ ಸಲ್ಲಿಸಿದೆ.
ಸುದ್ದಿಗೋಷ್ಠಿಯಲ್ಲಿ ವೇದಿಕೆ ರಾಜ್ಯಾಧ್ಯಕ್ಷ ಕೆ.ವೈ.ತಿಪ್ಪೇಸ್ವಾಮಿ ಮಾತನಾಡಿ, ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಟ್ಟಿ ಅಂಗಡಿಯ ಶ್ರೀ ಸಿದ್ದಿ ವಿನಾಯಕ ರೆಸಿಡೆನ್ಸಿಯಲ್ ಶಾಲೆಯಲ್ಲಿ ಅ.೧ ರಂದು ರೂಬಿಕ್ ಕ್ಯೂಬಿಕ್ ಮೊಸಯಿಕ್ ಆಯೋಜಿಸಲಾಗಿ ೨೦ ಜನ ಆಟದಲ್ಲಿ ಭಾಗವಹಿಸಿದ್ದರು. ಈ ವೇಳೆ ಗುರುಕಿರಣ್ ಕೇವಲ ೪೫ ಸೆಕೆಂಡ್ ನಲ್ಲಿ ಆಟ ಮುಗಿಸಿ ಗಿನ್ನಿಸ್ ವಲ್ಡ್೯ ರೆಕಾಡ್೯ ಅವಾರ್ಡ ಬಂದಿದೆ. ಗಿನ್ನಿಸ್ ವಲ್ಡ್೯ ರೆಕಾಡ್೯ ಸಂಸ್ಥೆಯವರು ಶಾಲೆಗೆ ಬಂದು ಮೆಡಲ್ ಮತ್ತು ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿ ಗಿನ್ನಿಸ್ ವಲ್ಡ್೯ ಬುಕ್ ನಲ್ಲಿ ಹೆಸರು ನೊಂದಯಿಸಿದ್ದಾರೆ ಎಂದರು.
ಆರ್.ಗುರುಕಿರಣ್ ಅವರು ಮೂಲತಃ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ವಾಸನ ಗ್ರಾಮದವರಾಗಿದ್ದು ಇವರ ತಂದೆ ರಾಜು ಕೆ. ಪೊಲೀಸ್ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಾಧಕ ಆರ್.ಗುರುಕಿರಣ್,ತಂದೆ ರಾಜಪ್ಪ, ಕೆ.ಆರ್.ಬಸವರಾಜ್, ಚೌಡಮ್ಮ ಇದ್ದರು.

