ಮಾಯಕೊಂಡ : ಆನಗೋಡಿನ ಮಾತೃಶ್ರೀ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ.) ವತಿಯಿಂದ ಶ್ರೀ ಮರುಳಸಿದ್ದೇಶ್ವರ ಪ್ರೌಢಶಾಲೆ .ಜಿ ಚೆನ್ನಪ್ಪ ಪದವಿಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳರವರ 32ನೇ ಶ್ರದ್ಧಾಂಜಲಿ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು .
ಈ ಕಾರ್ಯಕ್ರಮದಲ್ಲಿ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಅಂದಿನ ಕಾಲದ ಶ್ರೀ ಅನುಭವ ಮಂಟಪ ಬಸವಕಲ್ಯಾಣ ಬಸವ ನಾಟಕ ನಡೆದಾಡುವ ದೇವರು ಎಂದು ಪ್ರಸಿದ್ಧಿ ಆಗಿರುವಂತಹ ಶಿವಕುಮಾರ ಶಿವಸ್ವಾಮಿಗಳವರ ಸಾಧನೆಗಳು ವಚನಗಳು ಕೀರ್ತನೆಗಳು, ಸಾಮೂಹಿಕ ಕಾರ್ಯಕ್ರಮಗಳು ಕೃತಿಗಳ ಕುರಿತು ಪ್ರೌಢಶಾಲಾ ಶಿಕ್ಷಕ ನಾಗರಾಜ್ ಹೇಳಿದರು.
ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ರವಿಕುಮಾರ್ ಕಾರ್ಯಕ್ರಮದ ಕುರಿತು ಪ್ರಾಸ್ತವಿಕ ನುಡಿಗಳನ್ನು ತಿಳಿಸಿದರು ಮತ್ತು ಕಾಲೇಜಿನ ಪ್ರಾಂಶುಪಾಲ ಶ್ರೀಮತಿ ಕಾವೇರಿ ಗೌಡರವರು ಆರೋಗ್ಯವು ನಮ್ಮೆಲ್ಲರ ಭಾಗ್ಯವಾಗಿದೆ. ಈ ಉತ್ತಮ ಆರೋಗ್ಯವನ್ನು ಪಡೆಯಲು ನಾವೆಲ್ಲರೂ ಉತ್ತಮವಾದ ಪೌಷ್ಟಿಕಾಂಶಯುಕ್ತವಾದಂತ ಆಹಾರವನ್ನು ಸೇವನೆ ಮಾಡಬೇಕು ಮತ್ತು ಪರಿಸರ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದಂತಹ ಎಸ್ ಎಸ್ ನಾರಾಯಣ ಹೃದಯಾಲಯದ ವೈದ್ಯ ಡಾ. ಗುರುರಾಜ್ ಮಾತನಾಡಿ , ಹೃದಯ ಸಂಬಂಧಿ ಕಾಯಿಲೆ ಇಂದಿನ ದಿನಮಾನಗಳಲ್ಲಿ ಎಲ್ಲರಲ್ಲೂ ಸಾಮಾನ್ಯವಾಗಿ ಕಾಣಬಹುದಾಗಿದೆ. ಇದನ್ನ ತಡೆಯಲು ಉತ್ತಮ ಪೌಷ್ಟಿಕಾಂಶಯುಕ್ತ ಪದಾರ್ಥಗಳನ್ನು ಸೇವನೆ ಮಾಡಬೇಕು ದುಷ್ಟಗಳಿಂದ ದೂರವಿರಬೇಕು ಆಧುನಿಕತೆಯ ಒತ್ತಡ ಜೀವನ ಶೈಲಿಯಿಂದ ಮುಕ್ತರಾಗಬೇಕು ಎಂದು ಕಾರ್ಯಕ್ರಮದಲ್ಲಿ ತಿಳಿಸಿದರು.
ವಾಸನ್ ಕಣ್ಣಿನ ಆಸ್ಪತ್ರೆಯ ವತಿಯಿಂದ ನಾಗರಾಜ್ ಕಣ್ಣಿನ ಕುರಿತು ಕಣ್ಣಿನ ರಕ್ಷಣೆಯ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು ಹಾಗೆಯೇ ಮಾತೃಶ್ರೀ ಸಂಸ್ಥೆಯ ವತಿಯಿಂದಆರೋಗ್ಯದ ಸೇವೆಗಳಾದ ಕೆಮ್ಮು ಜ್ವರ ಶೀತ ಕಣ್ಣಿನ ಪರೀಕ್ಷೆ ಹೃದಯ ಸಂಬಂಧಿ ಕಾಯಿಲೆ ಪರೀಕ್ಷೆ ಇಸಿಜಿ ಎಕೋ ಇತ್ಯಾದಿ ಪರೀಕ್ಷೆಗಳ ಕುರಿತು ಜಾಗೃತಿ ಹಾಗೂ ಪರೀಕ್ಷೆಯನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗದವರು ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ, ಮತ್ತು ಇತರರು ಮಾತೃಶ್ರೀ ಸಂಸ್ಥೆಯ ಅಧ್ಯಕ್ಷ ಕಿರಣ್ ಎ ಎಲ್ ಉಪಾಧ್ಯಕ್ಷ ಕುಮಾರಸ್ವಾಮಿ ಕಾರ್ಯದರ್ಶಿ ಯೋಗೇಶ್ ಮತ್ತು ಸದಸ್ಯರುಗಳಾದ ಲಕ್ಷ್ಮಿ ಆಂಜನೇಯ ,ಶಿವಕುಮಾರ್ ಮುರುಳಿಧರ, ಆನಂದ್ ,ಪ್ರದೀಪ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಊರಿನ ಗ್ರಾಮಸ್ಥರು ಮಹಿಳೆಯರು ಮಕ್ಕಳು ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಗ್ರಾಮ ಪಂಚಾಯತಿಯ ಸದಸ್ಯರು ಮತ್ತು ಇತರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.