ದಾವಣಗೆರೆ : ರಾಜಕಾರಣವನ್ನು ಯಾರು ಬೆಕಾದರೂ ಮಾಡಬಹುದು ಆದರೆ ಜನರ ಸೇವೆಯನ್ನ ಕೆಲವರು ಮಾತ್ರ ಮಾಡುತ್ತಾರೆ, ಇದಕ್ಕೆ ಉತ್ತಮ ನಿದರ್ಶನ ಜಿ.ಎಂ ಕುಟುಂಬ. ಸದಾ ಜನರ ನಡುವೆ ಬದುಕು ಜಿ.ಎಂ ಕುಟುಂಬ ಅಂದು ಇಂದು ಎಂದೆಂದಿಗೂ ಜನರ ಪ್ರೀತಿಯಿಂದಲೇ ಇದೆ ಎಂದು ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜು ತಿಳಿಸಿದರು.
ಮಾಜಿ ಕೇಂದ್ರ ಸಚಿವರು ಹಾಗೂ ತಂದೆಯವರಾದ ಜಿ.ಎಂ. ಸಿದ್ದೇಶ್ವರ ಅವರ ಅಭಿಮಾನಿ ಬಳಗಂದಿಂದ ಹಮ್ಮಿಕೊಂಡಿದ್ದ ಜಿ.ಎಸ್. ಅನಿತ್ ಕುಮಾರ್ ಹುಟ್ಟುಹಬ್ಬ ಸಂದರ್ಭದಲ್ಲಿ ಈ ವೇಳೆ ಈ ವಿಷಯ ತಿಳಿಸಿದರು.
ಜಿ. ಮಲ್ಲಿಕಾರ್ಜುನಪ್ಪನವರು ಚಿತ್ರದುರ್ಗದಲ್ಲಿ ಜನ್ಮತಾಳಿದರೂ ಸೇವೆ ಅತೀ ಹೆಚ್ಚು ಸೇವೆ ಮಾಡಿದ್ದು ದಾವಣಗೆರೆಯಲ್ಲಿ ತಂದೆಯಂತೆ ಜಿ.ಎಂ. ಸಿದ್ದೇಶ್ವರ ಅವರು ಸಹ ದಾವಣಗೆರೆ ಜಿಲ್ಲೆಯ ಜನರ ಪ್ರೀತಿಯ ಹೆಮ್ಮೆಯ ನಾಯಕರಾಗಿದ್ದಾರೆ, ಇದೀಗ ಅವರ ಪುತ್ರ ಜಿ.ಎಸ್. ಅನಿತ್ ಕುಮಾರ್ ಸಹ ತಾತ ತಂದೆಯಂತೆ ಬೆಳೆಯುತ್ತಿದ್ದಾರೆ ಎಂದರು.
ಈ ಕಾರಣದಿಂದ ವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಒಡನಾಟವಿಟ್ಟುಕೊಂಡು ಜನ ಪ್ರೀತಿಗೆ ಪಾತ್ರರಾಗಿದ್ದಾರೆ. ಒಬ್ಬ ರಾಜಕಾರಣಿ ಮಗ ಎಂಬ ಆಹಂ, ಅಹಂಕಾರವಿಲ್ಲದೆ ಜನರ ನಡುವೆ ಇದ್ದು ಸೇವೆ ಮಾಡುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಅನಿತ್ ಅವರು ತಮ್ಮದೇಯಾದ ಒಂದು ಘನತೆ ಹೊಂದಿದ್ದಾರೆ, ಚಿತ್ರದುರ್ಗದಲ್ಲಿ ನಿತ್ಯ ನಾವು ನೋಡಬಹುದು ಒಂದಲ್ಲಾ ಒಂದು ಕೆಲಸ ಮಾಡುತ್ತಾ ಜನರ ಸೇವೆ ಮಾಡಿ ಪ್ರೀತಿಗೆ ಪಾತ್ರರಾಗಿದ್ದಾರೆ. ಹಿರಿಯರಾಗಲಿ, ಕಿರಿಯರಾಗಲಿ ಅತ್ಯಂತ ಗೌರವದಿಂದ ಪ್ರೀತಿಯಿಂದ ಮಾತನಾಡಿಸುತ್ತಾ ಕಷ್ಟ ಸುಖಕ್ಕೆ ನೆರವಾಗುತ್ತಿದ್ದಾರೆ.
ದೊಡ್ಡ ಕುಟುಂಬ ಮತ್ತು ರಾಜಕೀಯ ಹಿನ್ನೆಲೆ ಹೊಂದಿದ್ದರು ಸಹ ಹುಟ್ಟುವನ್ನು ಸರಳವಾಗಿ ಆಚರಿಸಿಕೊಂಡು ಯುವ ಜನತೆಗೆ ಮಾದರಿಯಾಗಿದ್ದಾರೆ ಎಂದು ಬಾಡಾದ ಆನಂದರಾಜು ತಿಳಿಸಿದರು.
ಈ ವೇಳೆ ಮಾಜಿ ಸಂದರಾದ ಜಿ.ಎಂ. ಸಿದ್ದೇಶ್ವರ ಉದ್ಯಮಿಗಳಾದ ಜಿ.ಎಂ. ಲಿಂಗರಾಜು, ನಿಕಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷರಾದ ಹನಗವಾಡಿ ವೀರೇಶ್, ಉಶವಂತರಾವ್ .ಪಕ್ಷದ ಮುಖಂಡರಾದ ಬಿ.ಟಿ ಸಿದ್ದಪ್ಪ.ದಾಗಿನಕಟ್ಟೆ ನಾಗರಾಜ್.ಶಿವನಗೌಡ ಪಾಟೇಲ್.ಟಿಂಕರ್ ಮಂಜಣ್ಣ ಶಂಕರಗೌಡ ಬಿರದಾರ್ ಸೇರಿದಂತೆ ಹಲವು ಮುಖಂಡರಿದ್ದರು.