
ನಂದೀಶ್ ಭದ್ರಾವತಿ, ದಾವಣಗೆರೆ
ದಾವಣಗೆರೆಯಲ್ಲಿ ಮಾವ-ಅಳಿಯ ಟಾಕ್ ವಾರ್ ಮುಂದುವರೆದಿದ್ದು, ಶಾಸಕ ಶಾಮನೂರು ವಿರುದ್ಧ ಮಾಜಿ ಸಂಸದ ಸಿದ್ದೇಶ್ವರ ಗುಡುಗಿದ್ದಾರೆ.
ದಾವಣಗೆರೆಯಲ್ಲಿ ಸದಾಮುನ್ನಲೆಯಲ್ಲಿರುವ ಇವರಿಬ್ಬರ ಜುಗಲ್ ಬಂಧಿ ಎಲೆಕ್ಷನ್ ನಂತರವೂ ಮುಂದುವರೆದಿದ್ದು, ಹಿರಿಯರಿಗೆ ಗೌರವ ಕೊಡಿ ಎಂದು ಮಾಜಿ ಸಂಸದ ಸಿದ್ದೇಶ್ವರಿಗೆ ಮಾತಿನ ಪೆಟ್ಟು ನೀಡಿದ್ದ ಶಾಸಕ ಶಾಮನೂರು ಮಾತಿಗೆ ಅಳಿಯ ಸಿದ್ದೇಶ್ವರ್ ಇನ್ನೊಂದು ರೀತಿಯಲ್ಲಿ ಟಾಂಗ್ ನೀಡಿದ್ದಾರೆ.

ಭದ್ರಾ ಜಲಾಶಯದಲ್ಲಿ ಬಾಗಿನ ಅರ್ಪಿಸಿದ ನಂತರ ಮಾತನಾಡಿದ ಮಾಜಿ ಸಂಸದ ಜಿಎಂ ಸಿದ್ದೇಶ್ವರ ಶಾಸಕ ಶಾಮನೂರು ಶಿವಶಂಕರಪ್ಪರಿಗೆ ಕೊಂಡಿ ಮಂಚಣ್ಣ ಕೆಲಸ ಮಾಡಬೇಡಿ ಎಂದು ಚಿವುಟಿದ್ದಾರೆ.
ನಾನು ದಾವಣಗೆರೆಯಲ್ಲಿ ಮಾತನಾಡುವಾಗ ಎಲ್ಲಿಯೂ ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೆಸರನ್ನು ನಾನು ಎಲ್ಲಿಯೂ ಪ್ರಸ್ತಾಪಿಸಿಲ್ಲ. ನನ್ನ ಪತ್ನಿ ಸೋಲಲು ಜಿಲ್ಲಾ ನಾಯಕರು, ರಾಜ್ಯ ನಾಯಕರು ಕಾರಣ ಅಂತ ಹೇಳಿದ್ದೇನೆ. ಆ ಮಾತಿಗೆ ಈಗಲೂ ಬದ್ದನಾಗಿದ್ದೇನೆ ಹೊರತು ಯಾರ ಹೆಸರನ್ನು ನಾನು ಪ್ರಸ್ತಾಪಿಸಿಲ್ಲ.
ಶಿವಶಂಕರಪ್ಪರೇ ಯಡಿಯೂರಪ್ಪ ರಾಷ್ಟ್ರ ನಾಯಕರು. ರಾಜ್ಯ ನಾಯಕರಲ್ಲ. ನೀವು ಹೇಗೆ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರಾಧ್ಯಕ್ಷರಾಗಿದ್ದರಿಯೋ ಹಾಗೆಯೇ ಯಡಿಯೂರಪ್ಪ ರಾಷ್ಟ್ರ ನಾಯಕ. ರಾಜ್ಯ ನಾಯಕರು ಎಂದು ಸ್ಪಷ್ಟನೆ ನೀಡಿದರು.
ಶಿವಶಂಕರಪ್ಪರು ನನಗೊಂದು ಆಪಾದನೆ ಮಾಡಿದ್ದಾರೆ. ಇವತ್ತು. ಯಡಿಯೂರಪ್ಪರನ್ನು ಬೈದಿದ್ದಾರೆ, ಚುನಾವಣೆಯಲ್ಲಿ ಕೆಲಸ ಮಾಡಿಲ್ಲ ಅಂತ ಯಡಿಯೂರಪ್ಪರನ್ನು ಬೈದಿದ್ದಾರೆ ಎಂದಿದ್ದಾರೆ. ನಾನು ಅವರಿಗೆ ಹೇಳೋದಕ್ಕೆ ಇಷ್ಟಪಡುತ್ತೇನೆ. ನನ್ನ ವಾಟ್ಸ್ ಅಪ್ ತೆಗೆದುನೋಡಲಿ. ಎಲ್ಲಿಯೂ ನಾನು ಯಾರ ಹೆಸರನ್ನು ಹೇಳಿಲ್ಲ.
ನೀವು ಕೊಂಡಿ ಮಂಜಣ್ಣ ಕೆಲಸ ಮಾಡುತ್ತೀರಿ. ಈ ಹಿಂದೆ ಅಗಿನ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿ ಲೋಕಾಯುಕ್ತ ರೈಡ್ ಮಾಡಿದಾಗ. ಸಿದ್ದೇಶ್ವರನೇ ರೈಡ್ ಮಾಡಿಸಿದ್ದಾರೆ ಅಂತೀರಿ. ಈ ಟ್ರಾಪ್ ಬಗ್ಗೆ ಈ ಗಂಗೆ ಸತ್ಯವಾಗಲೋ ನನಗೆ ಗೊತ್ತಿಲ್ಲ. ಸಂಬಂಧವೂ ಇಲ್ಲ. ಆದರೆ ಮಾಧ್ಯಮದ ಮುಂದೆ ಹೇಳಿಬಿಟ್ರು ಸಿದ್ದೇಶಣ್ಣ ಮಾಡಿಸಿದ್ದಾರೆ ಅಂತ. ಇದು ಎಲ್ಲ ಕಡೆಯೂ ಪ್ರಚಾರವಾಯಿತು.ಈ ರೀತಿ ಅಪಪ್ರಚಾರ ಮಾಡಿ ಕೊಂಡಿ ಮಂಜಣ್ಣ ಕೆಲಸ ಮಾಡಿದ್ರು. ಈಗ ಯಡಿಯೂರಪ್ಪ ಹೆಸರನ್ನೇ ಹೇಳಿಲ್ಲ. ಅವರ ಹೆಸರು ಹೇಳಿ, ಹಿರಿಯರಿಗೆ ಗೌರವ ಕೊಡೋದಿಲ್ಲ ಅನ್ನುತ್ತಾರೆ. ನಾನು ಹಿರಿಯರಿಗೆ ಯಾವಾಗಲೂ ಗೌರವ ಕೊಟ್ಟಿದ್ದೇನೆ. ನಮ್ಮ ತಂದೆ ತಾಯಿ ಸಂಸ್ಕಾರದಿಂದ ಬೆಳೆಸಿದ್ದಾರೆ. ಇದೇ ಯಡಿಯೂರಪ್ಪ ಹಾಗೂ ಅವರ ಮಗನಿಗೆ ಜೈಲಿಗೆ ಹೋಗುತ್ತಾರೆ ಅಂತ ಹೇಳಿದ್ರಿ. ಅವತ್ತು ಬಹಳ ಚೆನ್ನಾಗಿತ್ತಾ ನೀವು ಹೇಳಿದ್ದು. ಎರಡನೇಯದಾಗಿ ಆಗಿನ ಕೈಗಾರಿಕಾ ಸಚಿವರಾಗಿದ್ದ ಎಂಬಿ ಪಾಟೀಲ್ ರನ್ನು ನೀವು ಅತಿಥಿಯಾಗಿ ಕರೆದ ವೇಳೆ ನಿಮ್ಮ ಮನೆಗೆ ಬಂದಾಗ ಹೇಗೆ ನಡೆದುಕೊಂಡಿದ್ದೀರಿ ಅಂತ ಎಲ್ಲರಿಗೂ ಗೊತ್ತು. ಮೊದಲು ಸಂಸ್ಕಾರವನ್ನು ನೀವು, ನಿಮ್ಮ ಮಕ್ಕಳಿಗೆ ಕಲಿಸಿಕೊಡಿ ಎಂದರು.
ಸಂಸ್ಕಾರವನ್ನು ನಾವು ಕಲಿತುಕೊಳ್ಳುವುದು ಗೊತ್ತು. ನಮಗೆ ಹೇಳುವ ಅವಶ್ಯಕತೆಯಿಲ್ಲ.ನಾವೆಲ್ಲರೂ ಕೂಡ ಸಂಸ್ಕಾರವಂತ ಜನ. ಸಂಸ್ಕಾರ ಕಲಿತಿದ್ದೇವೆ ಎಂದು ಮಾಜಿ ಸಂಸದ ಸಿದ್ದೇಶ್ವರ ಶಾಸಕ ಶಾಮನೂರು ವಿರುದ್ದ ಹರಿಹಾಯ್ದರು.