ದಾವಣಗೆರೆ : ನೂತನ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಗೆಲುವಿಗಾಗಿ ಹರಕೆ ಹೊತ್ತಿದ್ದ ಅಭಿಮಾನಿ ಚೇತನ್
ಕೊಡದಗುಡ್ಡ ವೀರಭದ್ರಶ್ವರ ದೇವಸ್ಥಾನದಲ್ಲಿ ಹರಕೆ ತೀರಿಸಿದರು. ಪ್ರಭಾ ಮಲ್ಲಿಕಾರ್ಜುನ್ ಗೆದ್ದರೆ 101 ತೆಂಗಿನಕಾಯಿ ಒಡೆಯುತ್ತೇನೆ ಎಂದು ಹರಕೆ ಹೊತ್ತಿದ್ದರು. ಅದರಂತೆ ಇಂದು ಪ್ರಭಾ ಮಲ್ಲಿಕಾರ್ಜುನ ಗೆದ್ದ ಕಾರಣ
101 ತೆಂಗಿನಕಾಯಿ ಒಡೆದರು. ಈ ಸಂದರ್ಭದಲ್ಲಿ ಶಿವರಾಜ್ ಅಂಚಿನ ಮನೆ ಗ್ರಾಮ ಪಂಚಾಯತಿ ಸದಸ್ಯರಾದ ಚೇತನ್ ಕುಮಾರ್, ಹೋಟೆಲ್ ಮಹಾಂತೇಶ್ ಮತ್ತು ನವೀನ್ ಅಂಚಿನಮನಿ ಇತರರು ಇದ್ದರು