
ಭದ್ರಾವತಿ: ಜನ್ನಾಪುರ ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘ, ನ್ಯೂಟೌನ್ ಮಿತ್ರ ಕಲಾ ಮಂಡಳಿ ಹಾಗು ಹಳೇಸೀಗೆಬಾಗಿ ರಾಜೀವ್ಗಾಂಧಿ ಶಿಕ್ಷಣ ಮಹಾವಿದ್ಯಾಲಯ(ಬಿ.ಇಡಿ) ವತಿಯಿಂದ ನಗರದ ರಂಗಪ್ಪ ವೃತ್ತದಲ್ಲಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಆಯೋಜಿಸ ಲಾಗಿದ್ದ ಬೀದಿ ನಾಟಕದ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಕೆ.ಆರ್ ನಾಗರಾಜು ಚಾಲನೆ ನೀಡಿದರು.
ಮತದಾನ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಬೀದಿ ನಾಟಕ ಯಶಸ್ವಿಯಾಗಲು ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬರು ಚಲಾಯಿಸಬೇಕು,ಈ ಮೂಲಕ ಭದ್ರಾವತಿ ತಾಲೂಕಿನಲ್ಲಿ ಶೇ.100 ರಷ್ಟು ಮತದಾನ ನಡೆಯಬೇಕೆಂದು ಆಶಿಸಿದರು.
ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ)ದ ಪ್ರಾಂಶುಪಾಲ ಹನುಮಂತಪ್ಪ ಮಾತನಾಡಿ, ಸಂವಿಧಾನ ನೀಡಿರುವ ಹಕ್ಕನ್ನು ಪ್ರತಿಯೊಬ್ಬರು ಚಲಾಯಿಸಬೇಕು. ಈ ಮೂಲಕ ಸಮರ್ಥ ನಾಯಕರನ್ನು ಆಯ್ಕೆ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.


ಉಪತಹಸೀಲ್ದಾರ್ ಮಂಜಾನಾಯ್ಕ, ಕಲಾವಿದರಾದ ತಮಟೆ ಜಗದೀಶ್, ವೈ.ಕೆ ಹನುಮಂತಯ್ಯ, ದಿವಾಕರ್, ಚಿದಾನಂದ ಸೇರಿದಂತೆ ಇನ್ನಿತರ ಕಲಾವಿದರು ಹಾಜರಿದ್ದರು.