ಶಿವಮೊಗ್ಗ : ಪರಿಸರದಿಂದ ಉತ್ತಮ ಆಮ್ಲಜನಕ ಸಿಗುವುದರ ಜೊತೆಗೆ ವಾಯುಮಾಲಿನ್ಯ ಕಡಿಮೆ ಆಗುತ್ತದೆ. ಆದ್ದರಿಂದ ನಾವು ಹೆಚ್ಚುಹೆಚ್ಚು ಗಿಡ ಮರಗಳನ್ನು ಬೆಳೆಸುವುದರ ಮುಖಾಂತರ ಪರಿಸರವನ್ನು ಸಂರಕ್ಷಿಸುವುದು ಅನಿವಾರ್ಯವಾಗಿದೆ ಎಂದು ರೋಟರಿ ಕಿರಣ್ ಕುಮಾರ್.ಜಿ ಅಭಿಮತ ವ್ಯಕ್ತಪಡಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನಿಂದ ರೋಟರಿ ಬಯೋ ಡೈವರ್ಸಿಟಿ ಪಾರ್ಕ್ ನಲ್ಲಿ ಭಾನುವಾರ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಿಡ ನೆಡುವುದರ ಮೂಲಕ ಪರಿಸರವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಂಡರೆ ನಮಗೆ ಉತ್ತಮ ಆರೋಗ್ಯ ಕೂಡ ಲಭಿಸುತ್ತದೆ. ಆದರೆ ಇಂದು ಗ್ಲೋಬಲ್ ವಾರ್ಮಿಂಗ್ ನಿಂದ ಪರಿಸರ ವಿನಾಶ ಆಗುತ್ತಿದೆ ಎಂದರು.
ಮಾಜಿ ಜಿಲ್ಲಾ ಗವರ್ನರ್ ಜಿ.ಎನ್.ಪ್ರಕಾಶ್ ಮಾತನಾಡಿ, ನಗರೀಕರಣ ಹೆಚ್ಚಾದಂತೆ ಗಿಡಮರಗಳ ಕಡಿತ ಜಾಸ್ತಿ ಆಗುತ್ತಿದೆ ಎಂದ ಅವರು, ನಮ್ಮ ನಮ್ಮ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ನೆನಪಿಗೋಸ್ಕರ ಗಿಡ ಮರಗಳನ್ನು ಬೆಳೆಸುವುದರ ಮುಖಾಂತರ ಪರಿಸರಕ್ಕೆ ಒಂದು ಕೊಡುಗೆಯನ್ನು ಕೊಡೋಣ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಬಯೋ ಡೈವರ್ಸಿಟಿ ಪಾರ್ಕ್ 3 ವರ್ಷಗಳಿಂದ ನಡೆದು ಬಂದ ದಾರಿಯನ್ನು ಸಭೆಗೆ ತಿಳಿಸಿದರು. ಅಧ್ಯಕ್ಷ ಕಿರಣ್ ಕುಮಾರ್ ಅವರು ರೂ.5,000 ಗಳನ್ನು ದೇಣಿಗೆಯಾಗಿ ನೀಡಿದರು.
ಈ ವೇಳೆ ಗಿಡ ನೆಡುವ ಕಾರ್ಯಕ್ರಮಕ್ಕೆ ಬಂದ ಸದಸ್ಯರಿಂದ ಸುಮಾರು 50 ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಕ್ಲಬ್ ನ ಅಧ್ಯಕ್ಷ ಕಿರಣ್ ಕುಮಾರ್.ಜಿ, ಕಾರ್ಯದರ್ಶಿ ಈಶ್ವರ್, ಆನ್ಸ್ ಕ್ಲಬ್ ನ ಅಧ್ಯಕ್ಷೆ ಗೀತಾ ಜಗದೀಶ್, ಕಾರ್ಯದರ್ಶಿ ಶುಭಾ ಚಿದಾನಂದ್, ರೋಟರಿ ಬಯೋ ಡೈವರ್ಸಿಟಿ ಪಾರ್ಕ್ ನ ಖಜಾಂಚಿ ಉಮೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೊ ಪಿಡಿಜಿ ಪ್ರಕಾಶ್.ಜಿ.ಎನ್ ಮತ್ತು ಕ್ಲಬ್ ನ ರೋಟೆರಿಯನ್ಸ್ ಗಳು ಆನ್ಸ್ ಗಳು ಹಾಗೂ ಮಕ್ಕಳು ಭಾಗವಹಿಸಿದ್ದರು.
=============