
ದಾವಣಗೆರೆ: ಅಪಾಯಕಾರಿ ಹಾಗೂ ಮಾಲಿನ್ಯಕಾರಕ ಪಟಾಕಿಗಳ ಬದಲು ಹಸಿರು ಪಟಾಕಿಗೆ ಮಾರಾಟಕ್ಕೆ ಜಿಲ್ಲಾಧಿಕಾರಿಗಳು ಆದೇಶ ಮಾಡಬೇಕೆಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎಸ್.ಟಿ.ನವೀನ್ ಕುಮಾರ್ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪರಿಸರ ಮತ್ತು ವನ್ಯಭೂಮಿ ಸಂರಕ್ಷಣಾ ವೇದಿಕೆಯಿಂದ ಅಪಾಯಕಾರಿ ಪಟಾಕಿಗಳನ್ನು ತಡೆಯಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ.ಆದರೂ ಹಳೆಯ ಪಟಾಕಿಗಳನ್ನು ಸ್ಟಾಕ್ ಮಾಡಿ ಸರ್ಕಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ಮಾರಾಟ ಮಾಡಿದರೆ ಅವರ ಮೇಲೆ ಕಾನೂನು ಕ್ರಮ ಕೈಗೊಂಡು ಅಂತಹ ಮಳಿಗೆಯನ್ನು ಸೀಜ್ ಮಾಡಬೇಕು ಎಂದರು. ಅಲ್ಲದೆ ಹಸಿರು ಪಟಾಕಿ ಹೊರತು ಪಡಿಸಿ ಬೇರೆ ಪಟಾಕಿಗಳನ್ನು ಮಾರಾಟ ಮಾಡಿದರೆ ಅವುಗಳನ್ನು ವಶಪಡಿಸಿಕೊಳ್ಳಲು ಪೊಲೀಸ್ ಇಲಾಖೆ, ಮಹಾನಗರಪಾಲಿಕೆ, ಅಗ್ನಿಶಾಮಕ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆಯಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲು ನಿರ್ಧರಿಸಲಾಗಿದೆಂದರು.
ವೇದಿಕೆ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಅರಸ್ ಮಾತನಾಡಿ, ಸಾಮಾನ್ಯ ಪಟಾಕಿಯಿಂದ ಮಾಲಿನ್ಯ ಹೆಚ್ಚಾಗುತ್ತದೆ. ಹಸಿರು ಪಟಾಕಿ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಸಾಮಾನ್ಯ ಪಟಾಕಿಗಿಂತ ಹಸಿರು ಪಟಾಕಿಗಳು ಭಿನ್ನವಾಗಿವೆ. ಹಸಿರು ಪಟಾಕಿಗಳನ್ನು, ನ್ಯಾಷನಲ್ ಎನ್ವಿರಾನ್ಮಂಟಲ್ ಇಂಜಿನಿಯರಿಂಗ್ ರಿಸರ್ಚ್ ಇನ್ಸಿಟ್ಯೂಟ್ ಅವಿಷ್ಕರಿಸಿದೆ. ಆದ್ದರಿಂದ ಪರಿಸರಕ್ಕೆ ಹಾನಿಯಾಗದಂತೆ ಹಸಿರು ಪಟಾಕಿ ಮಾರಾಟ ಮಾಡಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಟಿ.ರುದ್ರಮುನಿ,ಎನ್.ತಿಪ್ಪೇಸ್ವಾಮಿ, ಅಜಯ್ ಕುಮಾರ್,ಎನ್.ಕೆ ಕೊಟ್ರೇಶ್ ಇದ್ದರು.
—-

ಬೆಲೆಕೇರಿ ಅದಿರು ಪ್ರಕರಣವು ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಬಳ್ಳಾರಿ ಚಿತ್ರಮರ್ಗ ಜಿಲ್ಲೆಯ ಅರಣ್ಯ ಪ್ರದೇಶಗಳಿಂದ ಅಕ್ರಮವಾಗಿ ಕಬ್ಬಿಣದ ಅದಿರು ವಿದೇಶಕ್ಕೆ ರಪ್ತಾಗುತ್ತಿತ್ತು. 2009 ಮಾ.20 ರಂದು ಅರಣ್ಯ ಇಲಾಖೆ 350 ಕೋಟಿ ಮೌಲ್ಯದ 8.5 ಲಕ್ಷ ಮೆಟ್ರಿಕ್ ಟನ್ ಅದಿರು ಜಪ್ತಿ ಮಾಡಿತ್ತು 39700 ಮೆಟ್ರಿಕ್ ಟನ್ ಚೀನಾಕ್ಕೆ ರಫ್ತಾಗಿತ್ತು. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನ್ಯಾಯಾಲಯದ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಪರಿಸರದ ಮೇಲೆ ಯಾರೇ ಅತ್ಯಾಚಾರ ಮಾಡಿದರೂ ಅವರಿಗೆ ಕಾನೂನು ತಕ್ಕ ಶಿಕ್ಷೆ ನೀಡುತ್ತದೆ ಎಂಬುದಕ್ಕೆ ಕಾರವಾರ ಶಾಸಕ ಸತೀಶ್ ಶೈಲ್ ಬಂಧನ ಸಾಕ್ಷಿಯಾಗಿದೆ. ಇನ್ನೂ ಅನೇಕ ಭ್ರಷ್ಟ ರಾಜಕಾರಣಿಗಳು ಇದರಲ್ಲಿದ್ದು ನ್ಯಾಯಾಂಗ ಅವನ್ನು ಪರಿಶೀಲಿಸಲು ಎಂದು ಮನವಿ ಮಾಡುತ್ತೇವೆ.ಅಕ್ರಮ ಗಣಿಗಾರಿಕೆಯೂ ಆರಣ್ಯನಾಶವನ್ನು ಮಾಡುತ್ತಿದೆ ಇದರಿಂದ ವನ್ಯಜೀವಿಗಳಿಗೆ ಸಂಚಕಾರ ಬಂದಿದ್ದು ಪ್ರಾಣಿ ಮಾನವ ಸಂಘರ್ಷ ನಿತ್ಯ ನಡೆಯುತ್ತಿದೆ.
– ಎಸ್.ಟಿ ನವೀನ್ ಕುಮಾರ್, ಅಧ್ಯಕ್ಷರು, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ.