ಬೆಂಗಳೂರು : ಸ್ಥಳೀಯ ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳ ಚುನಾವಣೆ ಆ.25ಕ್ಕೆ
ಮಹಾಸಭಾದ ಕೇಂದ್ರ ಕಚೇರಿಯಲ್ಲಿ ನಡೆಯುತ್ತಿದ್ದು, ಆ.11 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿತ್ತು. ಆದರೆ ಆರಂಭದಲ್ಲಿಯೇ ಗೊಂದಲ ಉಂಟಾಗಿದೆ ಎಂದು ನಾಮಪತ್ರ ಸಲ್ಲಿಸಿರುವ ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಂಗಳೂರಿನಿಂದ ನಾಮಪತ್ರಸಲ್ಲಿಸಿರುವ ಅಭ್ಯರ್ಥಿಗಳಿಂದ ಆರೋಪ ವ್ಯಕ್ತವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಭ್ಯರ್ಥಿಗಳು, ನಾಮಪತ್ರವಾಪಸ್ ಪಡೆದಿರುವ ಅಭ್ಯರ್ಥಿಗಳ ಪಟ್ಟಿಯನ್ನು ರಾತ್ರಿಯಾದರೂ ಪ್ರಕಟಿಸಿಲ್ಲ. ಇದು ಯಾಕಾಗಿ ಅಂತ ಕೇಳಿದ್ರೆ ಉತ್ತರ ನೀಡುತ್ತಿಲ್ಲ. ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದೇವೆ. ಆದರೆ ಚುನಾವಣಾಧಿಕಾರಿ ಉತ್ತರ ನೀಡುತ್ತಿಲ್ಲ.
ಸದ್ಯ ಮಹಾಸಭಾಕ್ಕೆ ರಾಜ್ಯ ಮತ್ತು ರಾಷ್ಟç ಮಟ್ಟದ ಪದಾಧಿಕಾರಿಗಳಿಗೆ ಎಲೆಕ್ಷನ್ ಆಗುತ್ತಿದೆ. ನಾಮಪತ್ರ ವಾಪಸ್ ಪಡೆಯಲು ಮಧ್ಯಾಹ್ನ 3 ಕ್ಕೆ ಸಮಯ ನಿಗದಿಪಡಿಸಲಾಗಿತ್ತು. ಸಮಯ ಮೀರಿದರೂ ನಾಮಪತ್ರ ಪರಿಶೀಲನೆ ನಡೆಸಿಲ್ಲ, ಮತದಾರರ ಪಟ್ಟಿ ಪ್ರಕಟಿಸಿಲ್ಲ. ಅವಿರೋಧವಾಗಿ ಆಯ್ಕೆ ಮಾಡಲು ಮಹಾಸಭಾ ಮುಖಂಡರು ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಚುನಾವಣಾಧಿಕಾರಿಗಳಾದ ಸಿ.ಎಸ್.ವೀರೇಶ್, ಎಂ.ಬಿ. ದ್ಯಾಬೇರಿ ಕ್ರಮ ವಹಿಸಿಲ್ಲ. ಇದರಿಂದ ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶಗೊಂಡಿದ್ದಾರೆ.
ಆ.25ಕ್ಕೆ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಸಮಿತಿ ಸೇರಿ ಒಟ್ಟು 41 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಜತೆಗೆ ಮಹಾಸಭಾದ ಕೇಂದ್ರಕಾರಿ ಸಮಿತಿ ಸದಸ್ಯ ಸ್ಥಾನಗಳಿಗೂ ಚುನಾವಣೆ ನಡೆಯಲಿದೆ. ಕರ್ನಾಟಕ 30, ಕೇರಳ, ಆಂಧ್ರಪದೇಶ, ತಮಿಳುನಾಡು, ಮತ್ತು ಮಹಾರಾಷ್ಟçಗಳಿಂದ ಕೇಂದ್ರ ಕಾರ್ಯಕಾರಿ ಸಮಿತಿಗೆ ಒಬ್ಬ ಮಹಿಳೆ ಸೇರಿ ತಲಾ 5 ಸದಸ್ಯರ ಆಯ್ಕೆ ನಡೆಯಲಿದ್ದು, ಆರಂಭದಲ್ಲಿಯೇ ಗೊಂದಲವಾಗಿದೆ.
—-
ಕೋಟ್
ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳ ಚುನಾವಣೆ ನಾಮಪತ್ರ ವಾಪಸ್ ಪಡೆಯುವ ವೇಳೆ ಯಾವುದೇ ರೀತಿಯ ಗೊಂದಲ ನಡೆದಿಲ್ಲ. ಸುಮ್ಮನೆ ಆರೋಪ ಮಾಡುತ್ತಾರೆ. ಚುನಾವಣೆ ನಿಯಮದ ಪ್ರಕಾರ ನಡೆಯುತ್ತಿದೆ.
-ವೀರೇಶ್, ಚುನಾವಣಾಧಿಕಾರಿ