ದಾವಣಗೆರೆ : ಚನ್ನಗಿರಿಯಲ್ಲಿ ಪೊಲೀಸ್ ಠಾಣೆ ಮೇಲಿನ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ಪ್ರಶಾಂತ್ ಮನೋಳಿ ಹಾಗೂ ಸಿಪಿಐ ನಿರಂಜನವರನ್ನು ಸಿಎಂ ಅಮಾನತು ಮಾಡುವುದಾಗಿ ಹೇಳಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಇಸ್ಟೀಟ್ ಹಾಗೂ ಮಟ್ಕಾ ದಂಧೆ ಜೋರಾಗಿದ್ದು, ಎಸ್ಪಿ ಉಮಾಪ್ರಶಾಂತ್ ಇವುಗಳನ್ನು ಮಟ್ಟ ಹಾಕೋದಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಅದರಂತೆ ಚನ್ನಗಿರಿಯಲ್ಲಿಯೂ ಸಹ ಇಸ್ಪೀಟ್ ಹಾಗೂ ಓಸಿ ದಂಧೆ ಜೋರಾಗಿದ್ದು, ಪೊಲೀಸರು ಅವುಗಳನ್ನು ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಹೀಗಿರುವಾಗ ಪೊಲೀಸರನ್ನು ಅಮಾನತು ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಮೊದಲು ಠಾಣೆ ಮೇಲೆ ದಾಳಿ ಮಾಡಿದ ಆರೋಪಿಗಳನ್ನು ಬಂಧಿಸಬೇಕು. ಅದು ಬಿಟ್ಟು ಪೊಲೀಸರನ್ನು ಅಮಾನತು ಮಾಡಿದರೆ ಅವರು ಕೆಲಸ ಮಾಡುವ ಆತ್ಮಸ್ಥೆöÊರ್ಯ ಕಳೆದುಕೊಳ್ಳುತ್ತಾರೆ. ಇದು ಪರೋಕ್ಷವಾಗಿ ಕ್ರೆöÊಂನ್ನು ಹೆಚ್ಚಲು ಸಹಾಯ ಮಾಡುತ್ತದೆ. ಒಂದು ವೇಳೆ ಪೊಲೀಸರು ನಮಗೇನೂ ಗೊತ್ತಿಲ್ಲದಂತೆ ಸುಮ್ಮನೇ ಇದ್ದರೇ ದೋ ನಂಬರ್ ದಂಧೆಗಳು ಹೆಚ್ಚಾಗುತ್ತದೆ. ಕೂಲಿಮಾಡಿದ ಹಣ ಮನೆಗೆ ಹೋಗುವ ಬದಲು ಜೂಜಾಟದ ಚಟಕ್ಕೆ ಹೋಗುತ್ತದೆ. ಇಲ್ಲಿ ಹಣವಂತರಿಗಿಂತ ಬಡ ವರ್ಗದ ಜನರೇ ಹಾಳಾಗುತ್ತಾರೆ. ಆದ್ದರಿಂದ ಪೊಲೀಸರ ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಚನ್ನಗಿರಿ ಉಪವಿಭಾಗ ಮೊದಲಿನಿಂದಲೂ ಸೂಕ್ಷö್ಮ ನಗರ ಆದರೆ ಇಲ್ಲಿ ಕಡಿಮೆ ಸಿಬ್ಬಂದಿ ಇದ್ದಾರೆ. ಘಟನೆ ಸಂಬAಧ ತನಿಖೆ ನಡೆಯಲಿ, ಪೊಲೀಸರು ತಪ್ಪು ಮಾಡಿದರೆ ಶಿಕ್ಷೆಯಾಗಲಿ. ಆದರೆ ಅವರ ಮನೋಸ್ಥೈರ್ಯ ಕುಂದುವ ಕೆಲಸ ಮಾಡಬಾರದು ಎಂಬುದು ಜನರ ಒತ್ತಾಯ.ಲಾಕಪ್ ಡೆತ್ ಆರೋಪ ಎಂಬುದು ಸುಳ್ಳು, ಪೋಸ್ಟ್ ಮಾಟಂ ವರದಿ ಬಂದ ನಂತರ ಎಲ್ಲವೂ ಗೊತ್ತಾಗುತ್ತದೆ. ಆದರೆ ಅದಕ್ಕಿಂತ ಮೊದಲೇ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಎಸ್ಪಿ, ಸಿಪಿಐ ಒಳ್ಳೆಯ ಅಧಿಕಾರಿಗಳು
ಡಿಎಸ್ಪಿ ಪ್ರಶಾಂತ್ ಮನೋಳಿ ಹಾಗೂ ಸಿಪಿಐ ನಿರಂಜನ್ ಒಳ್ಳೆ ಅಧಿಕಾರಿಗಳಾಗಿದ್ದು, ಚನ್ನಗಿರಿಯಂತಹ ಸೂಕ್ಷ್ಮಪ್ರದೇಶದಲ್ಲಿ ಸಾಕಷ್ಟು ಒಳ್ಳೆ ಕೆಲಸ ಮಾಡಿದ್ದಾರೆ. ಆದ್ದರಿಂದ ಇಲ್ಲಿನ ಜನ ನೆಮ್ಮದಿಯಿಂದ ಮಲಗುವಂತಾಗಿದೆ. ನಲ್ಲೂರು, ಕೆರೆಬಿಳಚಿ, ಚನ್ನಗಿರಿಯಲ್ಲಿ ಸಾಕಷ್ಟು ಕ್ರೈಂಆಗುವುದನ್ನು ತಡೆಗೆಟ್ಟಿದ್ದಾರೆ. ಚನ್ನಗಿರಿ ಸಣ್ಣ ಊರಾದರೂ ಅಡಕೆಯಿಂದ ರಾಷ್ಟçಮಟ್ಟದಲ್ಲಿ ಹೆಸರು ಮಾಡಿದೆ. ಇಲ್ಲಿ ಹಣವಂತರೂ ಇದ್ದಾರೆ, ಓಸಿ,. ಇಸ್ಪೀಟ್ ಆಟಕ್ಕೆ ಬಡ್ಡಿ ಕೊಡುವರು ಇದ್ದಾರೆ. ಅದರಲ್ಲೂ ಹೆಚ್ಚು ಗುಡ್ಡಗಾಡು ಪ್ರದೇಶ ಇರುವುದರಿಂದ ಗಾಂಜಾ, ಇಸ್ಟೀಟ್, ಅಕ್ರಮ ಮದ್ಯ ದಂಧೆ ಜೋರಾಗಿದೆ. ಇಷ್ಟೋಂದು ಕ್ರೈಂ ಇದ್ದರೂ, ಡಿಎಸ್ಪಿ ಪ್ರಶಾಂತ್ ಮನೋಳಿ ತಂಡ ಇವುಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ. ಹೀಗಿರುವಾಗ ತನಿಖೆ ನಡೆಯದೇ ಪೊಲೀಸರನ್ನು ಅಮಾನತು ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕರದ್ದು.
11 ಪೊಲೀಸರದ್ದು ಪ್ರಾಣ ಅಲ್ವ?
ಮಟ್ಕಾ ಜೂಜಾಟ ಪ್ರಕರಣದ ವಿಚಾರಣೆಗೆಂದು ಕರೆ ತಂದಿದ್ದ ವ್ಯಕ್ತಿಯೊಬ್ಬ ಪೊಲೀಸ್ ವಶದಲ್ಲಿದ್ದಾಗಲೇ ಮೃತಪಟ್ಟ ಹಿನ್ನೆಲೆ ಪೊಲೀಸರೇ ಹೊಡೆದು ಕೊಂದಿದ್ದಾರೆಂದು ಆರೋಪಿಸಿ ದುಷ್ಕರ್ಮಿಗಳು ಪೊಲೀಸ್ ಠಾಣೆಯ ಮೇಲೆಯೇ ಕಲ್ಲು ತೂರಿ ಪೊಲೀಸ್ ವಾಹನಗಳನ್ನು ಜಖಂಗೊಳಿಸಿದ್ದರು. ಹೀಗಿರುವಾಗ 11 ಪೊಲೀಸರಿಗೆ ಗಾಯವಾಗಿದೆ. ಹಾಗಿದ್ದರೇ ಅವರದ್ದು ಪ್ರಾಣ ಅಲ್ಲವೇ ಅವರಿಗೆ ಏನಾದರೂ ಆಗಿದ್ದರೇ ಅವರ ಕುಟುಂಬಕ್ಕೆ ಯಾರು ಹೊಣೆ? ಎಂಬ ಪ್ರಶ್ನೆ ವ್ಯಕ್ತವಾಗಿದೆ. ಇಂತಹ ಗಲಭೆಗಳು ನಡೆದಾಗ ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಅವರನ್ನು ಹೇಗೆ ನಿಯಂತ್ರಣ ಮಾಡಬೇಕು. ಸರಕಾರಕ್ಕೆ ಪೊಲೀಸರ ಬಗ್ಗೆ ಕಾಳಜಿ ಇಲ್ಲವೇ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಸುಮಾರು 3 ಸಾವಿರ ಜನ ಉದ್ರಿಕ್ತರು
ಚನ್ನಗಿರಿ ಪೊಲೀಸ್ ಠಾಣೆ ಮುಂದೆ ಅಂದಾಜು ಮೂರು ಸಾವಿರ ಜನ ಮೃತ ಆದಿಲ್ ಶವದ ಸಮೇತ ಪ್ರತಿಭಟನೆಗೆ ಮುಂದಾಗಿದ್ದರು. ಇಡೀ ಠಾಣೆಯಲ್ಲಿ ಯಾವೊಬ್ಬ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಹ ಠಾಣೆಯಲ್ಲಿ ಇರಲಿಲ್ಲ. ಕೆಲವರಂತೂ ಠಾಣೆ ಬಾಗಿಲನ್ನು ಹಾಕಿ, ಠಾಣೆ ಮುಂದೆ ಪ್ರತಿಭಟಿಸುವ ಜೊತೆಗೆ ಆದಿಲ್ ಸಾವಿಗೆ ಕಾರಣರಾದ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎಸ್ಪಿ, ಐಜಿಪಿ ಸ್ಥಳಕ್ಕೆ ಧಾವಿಸಬೇಕು ಎಂಬುದಾಗಿ ಪಟ್ಟುಹಿಡಿದಿದ್ದರು. ಅಂತಿಮವಾಗಿ ಆಕ್ರೋಶಗೊಂಡ ಉದ್ರಿಕ್ತರು ಠಾಣೆ ಮೇಲೆ ದಾಳಿ ಮಾಡಿದರು. ಕಾರುಗಳ ಮೇಲೆ ಸೈಜ್ಗಲ್ಲನ್ನು ಎತ್ತಿ ಹಾಕಿದರು. ಈ ಸಂದರ್ಭದಲ್ಲಿ 11 ಜನ ಪೊಲೀಸರಿಗೆ ಗಾಯಗಳಾಗಿದೆ. ಹೀಗಾದ್ರೆ ಕಾನೂನು ಕಾಪಾಡುವ ಆರಕ್ಷರ ಪರ ಸರಕಾರ ನಿಲ್ಲಬೇಕು. ಆದರೆ ಇಲ್ಲಿ ಪೊಲೀಸರನ್ನೇ ಅಮಾನತು ಮಾಡಲಾಗಿದೆ.
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಸಂಚು
ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳು ಐದು ಪೊಲೀಸ್ ಜೀಪ್, ಎರಡು ಖಾಸಗಿ ವಾಹನ ಜಖಂಗೊಳಿಸಿದ್ದಾರೆ. ಅಲ್ಲದೇ ಪೊಲೀಸ್ ಜೀಪ್ ಉರುಳಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿರುವ ಆರೋಪಿಗಳು. ಅಷ್ಟರಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ.ಹತ್ತಾರು ಗುಂಪುಗಳಲ್ಲಿ ದಾಳಿ ಮಾಡಿ ಪೊಲೀಸ್ ಜೀಪ್ಗಳನ್ನು ಎತ್ತಿ ಬಿಸಾಕುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಗುಂಪು ಚದುರಿಸಲು ಲಾಠಿ ಚಾರ್ಜ್ ಮಾಡಿದ ಪೊಲೀಸರು. ಬಳಿಕ ಇಡೀ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಗಲಭೆಕೋರರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ನಡುವೆ ರಾಜಕೀಯ ದೊಂಬರಾಟವೂ ಶುರುವಾಗಿದೆ. ಒಟ್ಟಾರೆ ಪ್ರಾಣ ಒತ್ತೆಯಿಟ್ಟು ಕೆಲಸ ಮಾಡುವ ಪೊಲೀಸರಿಗೆ ಸೂಕ್ತ ರಕ್ಷಣೆ ಇಲ್ಲಂದತಾಗಿದೆ. ಇನ್ನಾದರೂ ಸರಕಾರ ಅಮಾನತು ಆದೇಶ ವಾಪಸ್ ಪಡೆದು, ಖಾಕಿ ಪಡೆಗೆ ಬೆಂಬಲವಾಗಿ ನಿಲ್ಲಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.