
ದಾವಣಗೆರೆ: ಕೇಂದ್ರ ಸರ್ಕಾರವು ಭರವಸೆಗಳ ಸಮಿತಿಯನ್ನು ರಚನೆ ಮಾಡಿದ್ದು ಈ ಸಮಿತಿಗೆ ಸದಸ್ಯರನ್ನಾಗಿ ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಲೋಕಸಭಾ ಸ್ಪೀಕರಾದ ಓಂ ಬಿರ್ಲಾ ಅವರು ನೇಮಕಮಾಡಿದ್ದಾರೆ.
ಈ ಸಮಿತಿಗೆ ಸಂಸದರಾದ ಹರೇಂದ್ರ ಸಿಂಗ್ ಮಲ್ಲಿಕ್
ಅಧ್ಯಕ್ಷರಾಗಿದ್ದಾರೆ ಹಾಗೂ ಸಮಿತಿಯಲ್ಲಿ 15 ಸಂಸದರು ಸದಸ್ಯರಾಗಿದ್ದಾರೆ. ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಆರೋಗ್ಯ ಸಮಿತಿ, ಶಿಕ್ಷಣ ಸಲಹಾ ಸಮಿತಿ ಹಾಗೂ ನಿಮಾನ್ಸ್ ಸಂಸ್ಥೆಯ ಸದಸ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇದೀಗ ಭರವಸೆ ಸಮಿತಿಗೂ ಸದಸ್ಯರಾಗಿದ್ದಾರೆ. ಈ ಕಮಿಟಿಯು ಸಚಿವರು ನೀಡಿದ ಭರವಸೆಗಳು ಮತ್ತು ಬದ್ಧತೆಗಳನ್ನು ಪರಿಶೀಲಿಸುತ್ತದೆ.ಜೊತೆಗೆ
ಭರವಸೆಗಳನ್ನು ಎಷ್ಟು ಕಾರ್ಯಗತಗೊಳಿಸಲಾಗಿದೆ ಎಂಬುದರ ಕುರಿತು ವರದಿ ಮಾಡಲಿದೆ.
ಅನುಷ್ಠಾನ ಅಗತ್ಯ ಸಮಯದಲ್ಲಿ ನಡೆದಿದೆ ಎಂಬುದರ ಬಗ್ಗೆ ವರದಿ ಹಾಗೂ ಅನುಷ್ಠಾನಗೊಳ್ಳದ ಬಗ್ಗೆ ಬಂದ ದೂರುಗಳನ್ನು ಪರಿಶೀಲಿಸಲಿದೆ ಎಂದು ಸಂಸದರ ಆಪ್ತ ಸಹಾಯಕರಾದ ಕೆ.ಎಲ್ ಹರೀಶ್ ಬಸಾಪುರ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

