ದಾವಣಗೆರೆ: ಆದರೆ ಕೆಲ ಮುಖಂಡರು ಇಬ್ಬರ ನಡುವೆ ಗೊಂದಲ ಸೃಷ್ಠಿ ಮಾಡುತ್ತಾ ಕಾರ್ಯಕರ್ತರಲ್ಲಿ ಬೇಸರ ಉಂಟು ಮಾಡಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಎಸ್ ಟಿ.ಮೋರ್ಚಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿ.ಮಲ್ಲಿಕಾರ್ಜುನಪ್ಪ ಅವರು ದಾವಣಗೆರೆ ಕ್ಷೇತ್ರದಲ್ಲಿ ಸಂಸದರಾಗಲು ಹಾಗೂ ಪಕ್ಷ ಕಟ್ಟಿ ಬೆಳೆಸಲು ಮಾಜಿ ಸಚಿವರಾದ ಎಸ್ ಎ ರವೀಂದ್ರನಾಥ ಅವರು ಕಾರಣ ಹಾಗೂ ಅವರೊಂದಿಗೆ ಜಿಎಂ ಸಿದ್ದೇಶ್ವರ್ ಅವರ ಕೊಡುಗೆಯೂ ಸಾಕಷ್ಟು ಇದೆ ಎಂಬುದನ್ನು ಮರೆಯಬಾರದು.ಜಿ.ಎಂ ಸಿದ್ದೇಶ್ವರ್ ನಾಲ್ಕು ಬಾರಿ ಸಂಸದರಾಗಿದ್ದವರು ಅವರ ಯಾವುದೇ ಕೊಡುಗೆ ಇಲ್ಲದೇ ನಾಲ್ಕು ಬಾರಿ ಆಯ್ಕೆಯಾಗಿದ್ದರೆಯೇ ಎಂದು ಪ್ರಶ್ನಿಸಿದರು.ಎಸ್ ಎಆರ್ ಅವರು ಹಿರಿಯರು ಪಕ್ಷಕಟ್ಟಿ ಬೆಳೆಸಿದವರು ಅವರಜೊತೆ ಜಿಎಂ ಎಸ್ ಕೂಡ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ.ಏನೇ ದೂಷಿಸುವುದಿದ್ದರು ರಾಷ್ಟ್ರ ಹಾಗೂ ರಾಜ್ಯ ನಾಯಕರ ಬಳಿ ಹೇಳಬೇಕು ಅದನ್ನು ಬಿಟ್ಟು ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿ ಮಾಡುವುದು ಬೇಡ ಎಂದರು.ಪಕ್ಷದ ಚೌಕಟ್ಟಿನಲ್ಲೇ ಸಮಸ್ಯೆ ಬಗೆ ಹರಿಸಿಕೊಳ್ಳೋಣ ಎಂದು ಸಲಹೆನೀಡಿದರು.
ದೂಡಾ ಮಾಜಿ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್ ಮಾತನಾಡಿ ಯಾವ ಗೊಂದಲ ಮಾಡುವುದು ಬೇಡ.ಪಕ್ಷದ ಒಳಗಿನ ವಿಚಾರ ಬಹಿರಂಗವಾಗಿ ಮಾತನಾಡುವುದು ಬೇಡ.ಹಿರಿಯರಲ್ಲಿ ಗೊಂದಲ ಇರಬಹುದು ಆದರೆ ವರಿಷ್ಠರ ಬಳಿ ಹೋಗುವುದು ಬಿಟ್ಟು ಮಾಧ್ಯಮದ ಮುಂದೆ ಬರುವುದು ಶಿಸ್ತಿನ ಪಕ್ಷವಾದ ನಮಗೆ ಶೋಭೆ ತರುವುದಿಲ್ಲ ಎಂದರು.ಲೋಕಸಭಾ ಚುನಾವಣೆಯಲ್ಲಿ ಜಿ.ಎಂ ಸಿದ್ದೇಶ್ವರ್ ಅಥವಾ ಗಾಯತ್ರಿ ಸಿದ್ದೇಶ್ವರ್ ಮಾತ್ರ ಸೋಲುಕಂಡಿಲ್ಲ ಇಡೀ ಕಾರ್ಯಕರ್ತರ ಜೊತೆಗೆ ಪಕ್ಷದ ಸೋಲು ಎಂಬುದು ಮರೆಯಬಾರದು.ಚುನಾವಣೆ ಘೋಷಣೆಯಾದಾಗಿನಿಂದ ಅಭ್ಯರ್ಥಿ ಬದಲಾವಣೆಗೆ ಪಟ್ಟು ಹಿಡಿದು,ಮಾಧ್ಯಮದ ಮುಂದೆ ಬಂದು ಅಸಮಾಧಾನ ವ್ಯಕ್ತಪಡಿಸಿದ್ದರು ಆದರೆ ಒಂದು ಬಾರಿ ಅಭ್ಯರ್ಥಿ ಘೋಷಣೆಯದರೆ ಬದಲಾಯಿಸಲು ಸಾಧ್ಯವಿಲ್ಲ ಎಂಬುದನ್ನು ಮರೆತಿದ್ದಾರೆ.ಮಾಧ್ಯಮದ ಮುಂದೆ ಬಂದು ನಾಟಕವಾಡುವುದು ಬೇಡ ವರಿಷ್ಠರ ಮುಂದೆ ಬನ್ನಿ ನಿಜವಾಗಲೂ ಒಂದಾಗುವ ಮನಸ್ಸಿದ್ದರೆ ಎಸ್ ಎ ಆರ್ ಮನೆಗೆ ಬನ್ನಿ ನಾವು ಕೂಡ ಜಿ.ಎಂ ಸಿದ್ದೇಶ್ವರ್ ಅವರನ್ನು ಕರೆತರುತ್ತೇವೆ ಎಲ್ಲವನ್ನೂ ಬಗೆಹರಿಸೋಣ ಎಂದು ಕರೆ ನೀಡಿದರು.
ಯುದ್ದಕ್ಕೆ ಸಜ್ಜಾಗುವ ವೇಳೆ ಗೊಂದಲ ಮಾಡಿದ್ದು ಯಾರು
ಲೋಕಸಭಾ ಚುನಾವಣೆ ಘೋಷಣೆಯಾದಾಗಿನಿಂದ ಅಭ್ಯರ್ಥಿ ವಿಚಾರವಾಗಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿ ಸೋಲಿಗೆ ಕಾರಣರಾದರು.ಪದೇ ಪದೇ ಮಾಧ್ಯಮದ ಮುಂದೆ ಬಂದು ಜನರಲ್ಲಿಗೊಂದಲ ಮೂಡಿಸಿದ್ದಕ್ಕೆ ಪಕ್ಷ ಸೋಲು ಕಾಣಬೇಕಾಯಿತು. ನಮಗೆ ಸೋಲು ಹೊಸದಲ್ಲ.ಸೋಲು ಹಾಗೂ ಗೆಲುವಿಗೆ ಕಾರ್ಯಕರ್ತರು ಎದೆಗುಂದುವುದಿಲ್ಲ.ಮತ್ತೆ ಗೆಲುವುಪಡೆಯುತ್ತೇವೆ ಎಂದು ರಾಜನಹಳ್ಳಿ ಶಿವಕುಮಾರ್ ಹೇಳಿದರು
ಹಿರಿಯರ ಬಗ್ಗೆ ಹಗುರಮಾತುಬೇಡ
ಯಾವುದೇ ಪಕ್ಷದವರಿರಲಿ ಅವರ ಬಗ್ಗೆ ಹಗುರವಾಗಿ ಏಕವಚನ ಬಳಸುವುದು ಬೇಡ.ಹಿರಿಯರಾದ ಶಾಮನೂರು ಶಿವಶಂಕರಪ್ಪ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ ಅವರ ವಯಸ್ಸಿನಷ್ಟು ಅನುಭವ ನಮ್ಮದಲ್ಲ.ರಾಜಕೀಯ ವಿರೋಧ ಬೇರೆ ವೈಯಕ್ತಿಕ ವಿರೋಧ ಬೇರೆ.ಅವರ ಅನುಭವ ಗೌರವಿಸಬೇಕು.ಒಳ್ಳೆಯದನ್ನುಸ್ವೀಕಾರ ಮಾಡಬೇಕು ಎಂದು ರಾಜನಹಳ್ಳಿ ಶಿವಕುಮಾರ್ ಹೇಳಿದರು