
ದಾವಣಗೆರೆ : ನಿನ್ನ ಸಾಹುಕಾರಿಕೆ ಬಹಳ ದಿನ ಉಳಿಯಲ್ಲ, ದಾವಣಗೆರೆಯಲ್ಲಿ ಮೊದಲು ಸಾಹುಕಾರರು ಯಾರು ಗೊತ್ತಾ? ಎಂದು ಶಾಸಕ ಶಾಮನೂರು ಮಾಜಿ ಸಂಸದರ ವಿರುದ್ದ ಗುಡುಗಿದ್ದಾರೆ.
ದಾವಣಗೆರೆ ದೂಡಾ ಕಚೇರಿಯಲ್ಲಿಂದು ದಾವಣಗೆರೆ ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ದಿನೇಶ್ ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ,
ಭೀಮ ಸಮುದ್ರದಿಂದ ನಿಮ್ಮ ಅಪ್ಪನ್ನ ದಾವಣಗೆರೆಗೆ ಕರೆದುಕೊಂಡು ಬಂದಿದ್ದೇ ನಾವು, ಇದನ್ನ ಸಿದ್ದೇಶ್ವರ್ ಮರೆತಿದ್ದಾನೆ, ಇವರ ಅಪ್ಪ ಹೇಗೆ ಗೆದ್ದ ಗೊತ್ತಾ? ಎಂದುಬ ಹಿಂದಿನ ಘಟನೆಗಳ ಬಗ್ಗೆ ನೆನಪು ಮಾಡಿಕೊಂಡರು.

ಅಡಕೆಯಿಂದ ಕಳ್ಳತನ ಮಾಡಿ,ಸುಪಾರಿಯಿಂದ ಸೇಲ್ ಟ್ಯಾಕ್ಸ್ ಕದ್ದು ಸಾಹುಕಾರಿಗೆ ತೋರಿಸುತ್ತಿದ್ದಾರೆ. ಆದರೆ ಆ ಸಾಹುಕಾರಿಕೆ ಬಹಳ ದಿನ ಉಳಿಯುವುದಿಲ್ಲ . ೭೨ ವರ್ಷದವರು ೯೩ ವರ್ಷದ ನನಗೆ ಬುದ್ದಿ ಹೇಳಲು ಬರುತ್ತಾರೆ ಲ. ನನಗೆ ಬುದ್ದಿ ಹೇಳುವಷ್ಟು ಆತ ಬೆಳೆದಿಲ್ಲ ಎಂದರು.
ಭೀಮಸಮುದ್ರದಿಂದ ಆತನನ್ನು ಕರೆತಂದವನು ನಾನು. ಅದನ್ನು ಮರೆತಿರುವಂತೆ ಕಾಣುತ್ತಿದೆ. ಮೊದಲು ನಾವು ಶ್ರೀಮಂತರೋ ಅವರು ಶ್ರೀಮಂತರೋ ಅನ್ನುವುದನ್ನು ಅವರೇ ಹೇಳಲಿ. ಅಡಕೆ ಕದ್ದು ಶ್ರೀಮಂತರಾದವರು ಅವರು ಎಂ.ಪಿ ಯಾಗಿದ್ದಾಗ ಬಸ್ ಶೆಲ್ಟರ್ ಮಾಡಿ ಅದರಲ್ಲೂ ದುಡ್ಡು ಹೊಡೆದಿದ್ದಾರೆ ಎಂದು ಕಿಚಾಯಿಸಿದರು.
ಮಾಜಿ ಸಂಸದರು ಒಂದು ರೀತಿ ಅವರ ಅಪ್ಪನ ಮನೆ ಗಂಟು ಹೊದಂತೆ ಗೋಳಾಡುತ್ತಿದ್ದಾರೆ. ಅಧಿಕಾರ ಇಂದು ಬರುತ್ತದೆ ನಾಳೆ ಹೋಗುತ್ತದೆ ಎಂಬುದನ್ನು ಮರೆತಂತೆ ಕಾಣುತ್ತದೆ.ನನ್ನ ಬಗ್ಗೆ ಮಾತನಾಡುತ್ತಾರೆ ಮಾಜಿ ಸಿಎಂಬೊಮ್ಮಾಯಿ ಬಳಿ ನಾನು ಅಳಲು ತೋಡಿಕೊಂಡಿದ್ದೇನೆ ಎಂದಿದ್ದಾರೆ. ನಾವು ಅಳುವ ಜನ ಅಲ್ಲ ಶಡ್ಡು ಹೊಡೆಯುವ ಜನ. ಅವರು ಎಲ್ಲಾ ವಿಧದ ಕಳ್ಳತನದ ವ್ಯವಹಾರ ಮಾಡಿದ್ದಾರೆ ಎಂದು ಶಾಸಕ ಶಾಮನೂರು ಹೇಳಿದರು
ಬಿಜೆಪಿಯ ಅಂದಿನ ಮಂತ್ರಿ ಭೈರತಿ ಬಸವರಾಜ್ ರಾತ್ರಿ ಬರುವುದು, ಬೆಳಗ್ಗೆ ದುಡ್ಡು ವಸೂಲಿ ಮಾಡಿಕೊಂಡು ಹೋಗುತ್ತಿದ್ದರು.ಇಂತಹ ಬಿಜೆಪಿ ಕೆಲಸ ನಾವು ಮಾಡುವುದಿಲ್ಲ. ನಾನಾಗಲಿ ನಮ್ಮ ಮಕ್ಕಳಗಾಲಿ ಒಳ್ಳೆ ಮಾರ್ಗದಲ್ಲಿ ನಡೆಯುವವರು. ನಾವು ಒಳ್ಳೆ ಹೆಸರು ತೆಗೆದುಕೊಳ್ಳುವವರು ಯಾವುದೇ ಕಾರಣಕ್ಕೂ ಕೆಟ್ಟ ಹೆಸರು ತೆಗೆದುಕೊಳ್ಳುವುದಿಲ್ಲ. ಕೆಲ ಕೆಲಸಗಳನ್ಮು ನಾವು ಪ್ರಚಾರ ಮಾಡುವುದಿಲ್ಲ ಅಷ್ಟೇ.ದಾವಣಗೆರೆ ಸಿಟಿಗೆ ಐನೂರು ಮನೆ ಮಂಜೂರು ಮಾಡಿಸಿದ್ದೇವೆ..ಜಾಗ ಇಲ್ಲದವರಿಗೆ ಮನೆ ಕಟ್ಟಿಸುವ ಕೆಲಸ ಮಾಡಿದ್ದೇವೆ.
ಗ್ರಾಮೀಣ ಭಾಗಕ್ಕೆ ಸಾವಿರ ಮನೆ ಮಂಜೂರು ಮಾಡಿಸಲಾಗಿದೆ. ನಾನಾ ವಿಧದಲ್ಲಿ ಸರ್ಕಾರಿ ಸೌಲಭ್ಯ ನೀಡಲಾಗುತ್ತಿದೆ ಇದನ್ನು ನೋಡಿ ಖುಷಿ ಪಡಬೇಕು ಎಂದು ನಾನು ನನ್ನ ಅಳಿಯನಿಗೆ ಬುದ್ದಿವಾದ ಹೇಳುವೆ ಎಂದು ಪರೋಕ್ಷವಾಗಿ ಮಾಜಿ ಸಂಸದ ಜಿ.ಎಂ ಸಿದ್ದೇಶ್ವರ್ ಗೆ ಟಾಂಗ್ ನೀಡಿದರು.
ನನ್ನ ಬಗ್ಗೆ ಮಾತನಾಡಬೇಕು ಎಂದರೆ ಎದುರಬದುರು ಮಾತನಾಡುವುದಕ್ಕೆ ನಾನು ಸಿದ್ದ.ಅದನ್ನು ಬಿಟ್ಟು ಗುಂಡಾಗಳು, ಪೈಲ್ವಾನರನ್ನು ಕರೆದುಕೊಂಡು ಮಾಜಿ ಸಂಸದರು ಓಡಾಡುತ್ತಿದ್ದಾರೆ. ಅಂತಹ ಗೂಂಡಾಗಳನ್ನು ಸಾಕಿಕೊಂಡಿದ್ದಾರೆ ಎಂದರು. ಇನ್ನು ಹೆಗಡೆ ನಗರದ ನಿವಾಸಿಗಳಿಗೆ ಜಾಗ ನೀಡಿ ಮನೆ ಕಟ್ಟಿಸಿದ್ದೇವೆ..ಸರ್ಕಾರದಿಂದ ಯಾವುದೇ ಕೆಲಸ ಮಾಡಲು ಸಿದ್ದ ಎಂದರು.
ಸೋತಮೇಲೆ ಮನೆಯಲ್ಲಿ ಸುಮ್ಮನೆ ಕುಳಿತು ಕೊಳ್ಳಬೇಕು ಅದನ್ನು ಬಿಟ್ಟು ಇಲ್ಲಸಲ್ಲದ ಮಾತು ಬೇಡ. ಚುನಾವಣೆಯ ಸೋಲು ಗೆಲುವು ಸಹಜ ಆಗೆಂದ ಮಾತ್ರಕ್ಕೆ ನಾಯಕರನ್ನು ತೆಗಳುವುದಲ್ಲ. ಬಿಎಸ್ ವೈ ವಿಜಯೇಂದ್ರರನ್ನು ಬೈಯಬಾರದು ಎಂದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಮಾತನಾಡುವುದು ಸರಿಯಲ್ಲ.ಈ ಬಗ್ಗೆ ಕೇಸ್ ಹಾಕಿಸಿದ್ದಾರೆ ಅದು ನಡೆಯುವುದಿಲ್ಲ. ಇದರಿಂದ ಜಾಸ್ತಿ ಜನ ಅವರ ವಿರುದ್ದ ವಾಗುತ್ತಾರೆ. ದಾವಣಗೆರೆಯಲ್ಲಿ ಬಿಜೆಪಿ ಎರಡು ಹೋಳಾಗಿದೆ. ಈಗ ನಾಲ್ಕು ಆಗುತ್ತದೆ.
ಜನಕ್ಕೆ ಎಲ್ಲವೂ ಗೊತ್ತಿದೆ .ಮಾಜಿ ಸಂಸದರು ಮೂರು ದಿನ ಮಾತ್ರ ದಾವಣಗೆರೆ ಇರುತ್ತಾರೆ ಆದ್ದರಿಂದ ಬಾಯಿ ಮುಚ್ಚಿಕೊಂಡಿರಬೇಕು ಎಂದರು.
ಬೈಯ್ಯೋ ತನಕ ಬೈಯ್ದು ಹೀಗ ಯಡಿಯೂರಪ್ಪಗೆ ಬೈದಿಲ್ಲ ಅಂತಾ ಹೇಳ್ತಾನೆ, ದುಡ್ಡು ಇಲ್ಲ ಅಂತಾ ಐದು ಕೋಟಿ ಇಸ್ಕೊಂಡು ಬಂದಿದ್ದಾನೆ ಎಂದು ಆರೋಪಿಸಿದರು.