
ಶಿವಮೊಗ್ಗ : ಇಂದಿನ ಯುವಕ ಯುವತಿಯರಲ್ಲಿ ಸಾಕಷ್ಟು ಪ್ರತಿಭೆ ಗಳಿವೆ. ಈ ಪ್ರತಿಭೆಗಳು ಅನಾವರಣ ಗೊಳ್ಳಲು ಉತ್ತಮ ವೇದಿಕೆ ಅಗತ್ಯ. ಅದನ್ನು ಉತ್ಥಾನ ಎಲ್ಲರಿಗೂ ನೀಡಿದೆ ಎಂದು ಖ್ಯಾತ ಸಿನಿಮಾ ತಾರೆ ನಿಧಿ ಸುಬ್ಬಯ್ಯ ಅವರು ಹೇಳಿದರು.
ಜೆಎನ್‌ಎನ್‌ಸಿಇ ಎಂಬಿಎ ವಿಭಾಗ ದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆಗಳ ಉತ್ಥಾನ ಕಾರ್ಯ ಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ಮೇಲಿನಂತೆ ನುಡಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಅವರು ಮಾತನಾಡಿ, ಇಂದಿನ ವಿದ್ಯಾರ್ಥಿ ಗಳಲ್ಲಿ ನೈತಿಕ ಶಿಕ್ಷಣ ದ ಅಗತ್ಯತೆಯನ್ನು ತಿಳಿಸಿ ವಿದ್ಯಾರ್ಥಿಗಳು ಸಮಯಪಾಲನೆ ಪಾಲಿಸಿದಾಗ ಮಾತ್ರ ಬದುಕಿನಲ್ಲಿ ಸಾಧನೆ ಮಾಡಲು ಸಾಧ್ಯ ಆ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗಬೇಕೆಂದರು.


ಶಿವಮೊಗ್ಗ ಹಾಲು ಉತ್ಪಾದಕ ಸಂಘದ (ಶಿಮೂಲ್) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖರ್ ಅವರು ಮಾತನಾಡಿ, ಎಂಬಿಎ ವಿಭಾಗದ ಉತ್ಥಾನ ಕಾರ್ಯಕ್ರಮ ಈ ನಾಡಿನ ಸಾಂಸ್ಕೃತಿಕ. ರಾಯಬಾರಿಯಾ ಗಿದೆ ಎಂದರು.
ಸಮಾರಂಭದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ಎನ್. ನಾಗರಾಜ, ಖಜಂಚಿ ಡಿ.ಜೆ. ರಮೇಶ್, ನಿರ್ದೇಶಕರುಗಳಾದ ಟಿ.ಆರ್. ಅಶ್ವಥ್ ನಾರಾಯಣ ಶೆಟ್ಟಿ, ಶಿವಕುಮಾರ್ ಉಪಸ್ಥಿತರಿದ್ದರು.
ಜೆಎನ್‌ಎನ್‌ಸಿಇ ಕಾಲೇಜ್ ಪ್ರಾಂಶುಪಾಲ ಡಾ. ವೈ ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು, ಎಂಬಿಎ ವಿಭಾಗದ ನಿರ್ದೇಶಕ ಡಾ. ಸಿ. ಶ್ರೀಕಾಂತ ಅವರು ಮಾತನಾಡಿ ಕಾರ್ಯಕ್ರಮದ ಯಶಸ್ವಿಯಾಗಿ ಆಯೋಜಿಸಲು ಕಾರಣರಾದ ಶ್ರೀಮತಿ ಅನುರಾಧ, ಡಾ. ಸಂತೋಷ, ಡಾ. ಪ್ರವೀಣ್ ಕುಮಾರ್ ಹಾಗೂ ಸಹೋದ್ಯೋಗಿ ಗಳಿಗೆ ಅಭಿನಂದನೆಸಲ್ಲಿಸಿದರು. ಸುಮಾರು ೩೦ಪದವಿ ಕಾಲೇಜ್‌ಗಳಿಂದ ೮೫೦ಕ್ಕೂ ಅ?ಕ ವಿದ್ಯಾರ್ಥಿಗಳು, ಸಮೂಹ ನೃತ್ಯ, ರಸಪ್ರಶ್ನೆ, ಸಮೂಹ ಗಾನ ಪೇಸ್ ಪೈಟಿಂಗ್ ಟ್ರಜರ ಹಂಟ್ ಪೇಪರ್ ಪ್ರಸೆಂಟೇಶನ್, ವಾಲಿಬಾಲ್ ಮುಂತಾದ ಸ್ಪರ್ಧೆಯಲ್ಲಿ ಭಾಗವಹಿಸಿ ದ್ದರು ಎಂ ಬಿ ಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬಿ.ವಿ. ಶ್ರೀನಿವಾಸ್ ಮೂರ್ತಿ ಇನ್ನಿತರರಿದ್ದರು.

