ದಾವಣಗೆರೆ : ಕಾಂಗ್ರೆಸ್ ನವರಿಗೆ ಹೆಚ್ಚು ಆತುರ ಇರುವ ಕಾರಣ ಡಿನ್ನರ್, ಟೀಪಾರ್ಟಿ ನಡೆಯುತ್ತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.ದಾವಣಗೆರೆಯಲ್ಲಿ ನಡೆದ ಗಲಾಟೆಯಲ್ಲಿ ಬಂಧಿತರಾದವರನ್ನು ಜೈಲಿನಲ್ಲಿ ಭೇಟಿ ಮಾಡಿ ಮೈಸೂರಿನಲ್ಲಿ ಕಾಂಗ್ರೇಸ್ ಶಾಸಕರ ಸಚಿವರ ಡಿನ್ನರ್ ಪಾರ್ಟಿ ಹಿನ್ನಲೆಯಲ್ಲಿ ಮಾತನಾಡಿದರು, ಕಾಂಗ್ರೆಸ್ ವರು ಮಿಟಿಂಗ್ ಮೇಲೆ ಮೀಟಿಂಗ್ ನಡೆಸುತ್ತಿದ್ದಾರೆ ಎಂದರೆ ಸಿದ್ದರಾಮಯ್ಯ ನವರು ಅಲೋಚನೆ ಮಾಡಬೇಕು.ಸಿದ್ದರಾಮಯ್ಯ ನಾವ್ಯಾರಿಗೂ ಬಗ್ಗಲ್ಲ ಜಗ್ಗಲ್ಲ ಅಂದ್ರೆ ಅದು ಪ್ರಜಾಪ್ರಭುತ್ವ ದಲ್ಲಿ ನಡಿಯೋದಿಲ್ಲ.ಪ್ರಜಾಪ್ರಭುತ್ವ ಕ್ಕೆ ಸಂವಿಧಾನಕ್ಕೆ ತಲೆಬಗ್ಗಿಸಲೇ ಬೇಕು ಜನರಿಗೆ ಹೆದರಲೇ ಬೇಕು.ಕಾಂಗ್ರೆಸ್ ನವರಿಗೆ ಹೆಚ್ಚು ಆತುರ ಇದೆ ಅದ್ದರಿಂದ ಡಿನ್ನರ್ ಟೀಪಾರ್ಟಿ ನಡೆಯುತ್ತಿದೆ. ವಿಶ್ವಾಸ ಇದ್ದಿದ್ದರೆ ಈ ರೀತಿ ಸಭೆಗಳು ಪಾರ್ಟಿಗಳು ನಡೆಯುತ್ತಿರಲಿಲ್ಲ.ಸಿದ್ದರಾಮಯ್ಯಅವರ ಮೇಲೆ ಕಾಂಗ್ರೇಸ್ ನವರಿಗೆ ವಿಶ್ವಾಸ ಇಲ್ಲ .ಭ್ರಷ್ಟಾಚಾರ ವಿರುದ್ಧ ಹೋರಾಟ ನಾವು ಮಾಡುತ್ತಿದ್ದೇವೆನಿಮ್ಮನ್ನು ಇಳಿಸೋ ಪ್ರಯತ್ನ ನಿಮ್ಮ ಪಕ್ಷದಲ್ಲೇ ಹೋರಾಟ ನಡೆಯುತ್ತಿದೆ.ಡಿನ್ನರ್, ಟೀ ಪಾರ್ಟಿಯನ್ಜು ನೋಡಿದಾಗ ನಮ್ಮ ರಾಜ್ಯಾಧ್ಯಕ್ಷರಿಗೆ ಗೊತ್ತಾಗಿರಬಹುದು.ವಿಷಯಾಂತರ ಮಾಡಲು ಜಾತಿ ಗಣತಿ ಮುನ್ನೆಲೆಗೆ ತಂದಿದ್ದಾರೆ . ನೆಹರುರವರು ಮೀಸಲಾತಿ ವಿರೋಧಿಸಿ ಎಂದು ರಾಜ್ಯಗಳಿಗೆ ಪತ್ರ ಬರೆದಿದ್ದರು.ಈಗ ಕಾಂಗ್ರೇಸ್ ಮೀಸಲಾತಿ ಬಗ್ಗೆ ಮಾತನಾಡುತ್ತಿದೆ.ನಿಮ್ಮ ಕುರ್ಚಿ ಉಳಿಸಿಕೊಳ್ಳಲು ಈಗ ಜಾತಿಗಣತಿ ನೆನಪಾಗುತ್ತದೆ. ಇದಕ್ಕೆ ಕಾಂಗ್ರೆಸ್ ನವರಿಗೆ ಮೀಸಲಾತಿ ಬಗ್ಗೆ ಬದ್ದತೆ ಇಲ್ಲ. ಮೀಸಲಾತಿ ವಿರೋಧಿಗಳು ಕಾಂಗ್ರೆಸ್ ನವರ. ಈ ಹಿಂದೆ ವೀರಶೈವ ಲಿಂಗಾಯತ ರನ್ನು ಹೊಡೆಯಲು ಬಳಕೆ ಮಾಡಿಕೊಂಡಿದ್ದವರು ಕಾಂಗ್ರೆಸ್ ನವರು. ಸಾಮಾಜಿಕ ನ್ಯಾಯ ಕೊಡಿಸಲು ಬಿಜೆಪಿ ಯಾವಾಗಲೂ ಬದ್ದ ಮಂಡಲ ಆಯೋಗವನ್ನೇ ಹಿಂದೆ ಹಾಕಿಕೊಂಡವರು ಕಾಂಗ್ರೇಸ್ ನವರು. ಜಾತಿಗಣತಿ ಗೆ ನಮ್ಮದು ಯಾವುದೇ ವಿರೋಧ ಇಲ್ಲ ಆದರೆ ಇದನ್ನು ದುರ್ಬಳಕೆ ಮಾಡಿಕೊಳ್ಳಬೇಡಿ. ನ್ಯಾಯಕೊಡಿಸಲು ಬಳಕೆ ಮಾಡಿಕೊಂಡರೆ ನಮ್ಮದು ಬೆಂಬಲ ಇದೆ.ನಿಮ್ಮ ಕುರ್ಚಿ ಉಳಿಸಿಕೊಳ್ಳಲು ಇದನ್ನು ದುರ್ಬಳಕೆ ಮಾಡಿಕೊಂಡರೆ ಸಹಿಸುವುದಿಲ್ಲ. ಯಾವ ಯಾವ ಹಗರಣದಲ್ಲಿ ಇದ್ದಾರೋ ತನಿಖೆ ನಡೆಸಿ ಬಂಧನ ಮಾಡಲಿ.ಆದರೆ ಆತ್ಮಸಾಕ್ಷೀ ಅಂತ ಹೇಳಿ ಸುಳ್ಳನೇ ಅತ್ಮಸಾಕ್ಷೀ ಮಾಡಿಕೊಂಡಿದ್ದಾರೆ ಸಿದ್ದರಾಮಯ್ಯ ನವರು.ದಿನನಿತ್ಯ ಸುಳ್ಳು ಹೇಳುವುದು ಆತ್ಮಸಾಕ್ಷೀ ಎಂದುಕೊಂಡಿದ್ದಾರೆ. ಆದರೆ ಸುಳ್ಳನ್ಙೇ ಆತ್ಮಸಾಕ್ಷೀ ಮಾಡಿಕೊಂಡರೆ ಅಲ್ಲಿ ದೇವರು ಇರೋದಿಲ್ಲ. ದೆವ್ವ ಇರುತ್ತೆ.ಮುನಿರತ್ನರನ್ನು ಕೇಸ್ ಆಗಿ ಎಂಟು ಗಂಟೆಯೊಳಗೆ ಬಂಧನ ಮಾಡಿದ್ರು.ಈಗ ವಿನಯ್ ಕುಲಕರ್ಣಿ ವಿಷಯದಲ್ಲಿ ಏನೂ ಮಾಡುತ್ತಾರೆ ನೋಡೋಣ ಎಂದರು.ಹರಿಯಾಣ ದಲ್ಲಿ ಮೋಸದಿಂದ ಬಿಜೆಪಿ ಗೆದ್ದಿದೆ ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ಉತ್ತರ ನೀಡಿದ ಅವರು, ಕಾಂಗ್ರೆಸ್ ನವರಿಗೆ ಒಂದು ಮನೋ ರೋಗ ಇದೆ.ಕಾಂಗ್ರೆಸ್ ಗೆದ್ದರೆ ಅದು ಜನಾದೇಶ ಎಂದು ಹೇಳುತ್ತಾರೆ ಬಿಜೆಪಿ ಗೆದ್ದರೆ ಇವಿಎಂ ತೊಂದರೆ ಅಂತ ಹೇಳ್ತಾರೆ.
ಹಾಗಾದ್ರೆ ಜಮ್ಮು ಕಾಶ್ಮೀರದಲ್ಲಿ ಗೆದ್ದರಿದ್ದು, ಕರ್ನಾಟಕ ದಲ್ಲಿ 136 ಸೀಟ್ ಗೆದ್ದಿದ್ದು ಇವಿಎಂ ತೊಂದರೆ ದಿಂದನಾ.ಕಾಂಗ್ರೆಸ್ ನವರಿಗೆ ಸೋತಾಗಲೆಲ್ಲ ಇದೊಂದು ರೋಗ ಇದ್ದೇ ಇರುತ್ತೆ. ಆದ್ದರಿಂದ ಅವರನ್ನು ಸೋಲಿಸಿ ರೋಗ ಹಾಗೇ ಇರುವ ಹಾಗೇ ಮಾಡಬೇಕು ಎಂದರು.
ನಾಗಮಂಗಲದಲ್ಲಿ ಕೂಡ ಹೆದ್ದಾರಿ ಯಲ್ಲಿ ಗಣೇಶ ಮೆರವಣಿಗೆ ಮೇಲೆ ನಡೆಸಿದ್ದಾರೆ.ಯಾರು ಗಣಪತಿ ಮೇಲೆ ಕಲ್ಲು ತೂರಾಟ ಮಾಡಿದ್ರೋ ಅವರ ಮೇಲೆ ಕೇಸ್ ಹಾಕಬೇಕಿತ್ತು.ಆದರೆ ಹಿಂದೂಗಳನ್ನು ಬಂಧನ ಮಾಡಿ ಈಕಡೆ ಮುಸ್ಲಿಮರನ್ನು ಬಂಧನ ಮಾಡಿ ಖಾಜೀ ನ್ಯಾಯ ಮಾಡುತ್ತಿದ್ದಾರೆ. ಕಾಂಗ್ರೇಸ್ ಬಂದಾಗಿನಿಂದ ಕೋಮುವಾದಿ ಮತಾಂಧರಿಗಳಿಗೆ ಹೆಚ್ಚು ಶಕ್ತಿ ಬಂದಿದೆ. ಕಾಂಗ್ರೇಸ್ ಮತಾಂಧರನ್ನ ಒಟ್ ಬ್ಯಾಂಕ್ ಆಗಿ ಆರಾಧಿಸುತ್ತಿದ್ದಾರೆ. ಮಹಮ್ಮದ್ ಅಲಿ ಜಿನ್ನಾ ಮನಃಸ್ಥಿತಿಯಲ್ಲಿ ಈ ಸರ್ಕಾರ ನಡೆಯುತ್ತಿದೆ. ಇವರಿಗೆಲ್ಲ ಧೈರ್ಯ ತುಂಬಲು ಬಂದಿದ್ದೇವೆ ನ್ಯಾಯಾಲಯದಲ್ಲಿ ವಿಶ್ವಾಸ ಇದೆ ಎಂದರು.