
ದಾವಣಗೆರೆ : ರಾಜ್ಯ BJPಯ ಹಾಲಿ MPಗಳೇ ಕಾಂಗ್ರೆಸ್ ಕದ ತಟ್ಟಿದ್ರಾ..? ಡಿಸಿಎಂ ಡಿಕೆಶಿ ಕೊಟ್ಟ ಆ ಶಾಕಿಂಗ್ ಸ್ಟೇಟ್ಮೆಂಟ್ ಏನು.? ಎಷ್ಟು ಜನ ಹಾಲಿ ಬಿಜೆಪಿ ಎಂಪಿಗಳು ಕಾಂಗ್ರೆಸ್ಗೆ ಬರ್ತಾರೆ.? BJPಯಲ್ಲಿನ ಬಂಡಾಯವೇ ಕೈಗೆ ಬಂಡ್ವಾಳನಾ.? ಏನಿದು ರಾಜ್ಯ ರಾಜಕಾರಣದ ಮೇಜರ್ ಡೆವೆಲ್ಮಪ್ಮೆಂಟ್ ಅಂದ್ರಾ?
20 ಕ್ಷೇತ್ರ.. ಕರ್ನಾಟಕದ 28ರ ಪೈಕಿ ಒಟ್ಟು 20 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನ ಫೈನಲ್ ಮಾಡಿದೆ. ಆದ್ರೆ ಕಾಂಗ್ರೆಸ್ನ ಅಸಲಿ ಲೆಕ್ಕಾಚಾರ ಶುರುವಾಗೋದೇ ಈಗ.. ಯಾಕಂದ್ರೆ ರಾಜ್ಯ ಬಿಜೆಪಿಯಲ್ಲಿ ಲೋಕಸಭಾ ಟಿಕೆಟ್ ಸಿಗದೆ ಮುನಿಸಿಕೊಂಡಿರೋ ಪ್ರಬಲ ಆಕಾಂಕ್ಷಿಗಳು ಈಗ ಕಾಂಗ್ರೆಸ್ ಕದ ತಟ್ಟೊ ಸಾಧ್ಯತೆ ಇದೆ. ಈ ನಡುವೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಟಿಕೆಟ್ ವಂಚಿತ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿಯವರನ್ನ ಸೆಳೆದು ಚುನಾವಣಾ ಲಾಭ ಗಿಟ್ಟಿಸಿದಂತೆ ಈಗ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯಲ್ಲಿ ಟಿಕೆಟ್ ಸಿಗದ ಕೆಲ ಹಾಲಿ ಸಂಸದರಿಗೆ ರಾಜ್ಯ ಕಾಂಗ್ರೆಸ್ ಗಾಳ ಹಾಕಿದೆ ಅನ್ನೋ ಮಾತುಗಳು ದಟ್ಟವಾಗಿ ಕೇಳಿಬರ್ತಾಯಿವೆ. ಅದಕ್ಕೆ ಡಿಕೆಶಿ ಅವರ ಈ ಮಾತುಗಳೇ ಸಾಕ್ಷಿ.
ಡಿಕೆಶಿ ಅವರು ಹೇಳೋ ಪ್ರಕಾರ ನಾವು ಬಿಜೆಪಿಯ ಹಾಲಿ ಸಂಸದರಿಗೆ ಗಾಳ ಹಾಕ್ತಾಯಿಲ್ಲ. ಆದ್ರೆ ಅವರೇ ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ಸೇರೋಕೆ ಮೂವರು ಹಾಲಿ ಸಂಸದರೇ ತುದಿಗಾಲ ಮೇಲೆ ನಿಂತಿದ್ದಾರೆ ಅಂತೇಳಿದ್ದಾರೆ. ಹಾಗಾದ್ರೆ ಯಾರವರು ಮೂವರು ಹಾಲಿ ಬಿಜೆಪಿ ಸಂಸದರು ಅಂದ್ರಾ? ಅದನ್ನ ಡೀಟೇಲಾಗಿ ತೋರಿಸ್ತೀವಿ ನೋಡಿ.


ನಂಬರ್ 1 : ಡಿವಿ ಸದಾನಂದಗೌಡ
ಡಿವಿ ಸದಾನಂದಗೌಡ್ರಿಗೆ ಟಿಕೆಟ್ ಸಿಗಲ್ಲ ಅನ್ನೋದು ಸಾಕಷ್ಟು ತಿಂಗಳುಗಳಿಂದ್ಲೇ ಗೊತ್ತಾಗಿತ್ತು. ಅಷ್ಠೇ ಅಲ್ಲ, ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸುವಂತೆ ಹೈಕಮಾಂಡ್ ಸೂಚಿಸಿತ್ತು. ಹೀಗಿದ್ರೂ ಹೊಸಬರಿಗೆ ಅವಕಾಶ ಮಾಡಿಕೊಡೋ ದೃಷ್ಟಿಯಿಂದ ನಾನಾಗೇ ಸ್ವಯಂ ನಿವೃತ್ತಿ ಘೋಷಿಸುತ್ತಿದ್ದೇನೆ ಅಂತೇಳಿದ್ದ ಸದಾನಂದಗೌಡ್ರು. ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ರು. ಆದ್ರೆ ಆನಂತರ ತಮ್ಮ ಕ್ಷೇತ್ರದ ಮೇಲೆ ಸಿಟಿ ರವಿ ಮತ್ತು ಶೋಭಾ ಕರಂದ್ಲಾಜೆ ಅವರ ಹೆಸರುಗಳು ಕೇಳಿಬರ್ತಿದ್ದಂತೆ ಉಲ್ಟಾ ಹೊಡೆದ ಸದಾನಂದಗೌಡ್ರು, ಬೆಂಗಳೂರು ಉತ್ತರದಿಂದ ನಾನೇ ಸ್ಪರ್ಧಿಸ್ತಿನಿ ಅಂತೇಳಿ ಆಸೆ ವ್ಯಕ್ತಪಡಿಸಿದ್ರು. ಆದ್ರೀಗ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಸಿಕ್ಕಿದ್ದು ಡಿವಿ ಸದಾನಂದಗೌಡ್ರು ನಿರಾಶೆಗೊಂಡಿದ್ದಾರೆ. ಇತ್ತ ಡಿಸಿಎಂ ಡಿಕೆಶಿ ಸದಾನಂದಗೌಡರಿಗೆ ಗಾಳ ಹಾಕಿದ್ದಾರೆ ಅನ್ನೋ ಮಾತುಗಳು ದಟ್ಟವಾಗಿ ಕೇಳಿಬರ್ತಾಯಿವೆ.
ನಂಬರ್. 02 , ಕರಡಿ ಸಂಗಣ್ಣ
ಕಕಪ್ಪಳ ಕ್ಷೇತ್ರದ ಹಾಲಿ ಸಂಸದ ಕರಡಿ ಸಂಗಣ್ಣ. ಇವರ ಮೇಲೆ ಯಾವುದೇ ಗುರುತರ ಆರೋಪ ಇಲ್ಲ.. ವಯಸ್ಸು ಕೂಡ ಮೋದಿಯವರಷ್ಟೇ ಇದೆ.. ಹೀಗಿದ್ರೂ ಇವರಿಗೆ ಈ ಸಲದ ಎಂಪಿ ಟಿಕೆಟ್ ಕೈತಪ್ಪಿದೆ. ಕೊಪ್ಪಳದಲ್ಲಿ ಕರಡಿ ಸಂಗಣ್ಣ ಬದಲಿಗೆ ಬಸವರಾಜ ಕ್ಯಾವತ್ತೂರ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ. ಆದ್ರೆ ಹಿಂದೆ ನಮಗೆ ಟಿಕೆಟ್ ಕೈತಪ್ಪಿಸಬಾರ್ದು ಅಂತೇಳಿ ಕರಡಿ ಸಂಗಣ್ಣ ಕೇಂದ್ರದ ನಾಯಕರ ವಿರುದ್ಧವೇ ಹರಿಹಾಯ್ದಿದ್ರು. ಲಿಂಗಾಯತ ಸಮುದಾಯದ ನಾಯಕರಾಗಿರೋ ಕರಡಿ ಸಂಗಣ್ಣ ಅವರನ್ನ ಕಾಂಗ್ರೆಸ್ ಸೆಳೆದು ಟಿಕೆಟ್ ನೀಡೋ ಸಾಧ್ಯತೆ ಇದೆ.
ನಂಬರ್. 03, ಎ ನಾರಾಯಣಸ್ವಾಮಿ
ಹೌದು ಓದುಗರೇ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಎ ನಾರಾಯಣಸ್ವಾಮಿ ಅವರಿಗೂ ಈ ಸಲ ಬಿಜೆಪಿ ಟಿಕೆಟ್ ಸಿಗಲ್ಲ. ಯಾಕಂದ್ರೆ ಕಳೆದ ಡಿಸೆಂಬರ್ನಲ್ಲಿ ಇವರೇ ತಮ್ಮ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ರು. ಆದ್ರೆ ಇವರಿಗೇನು ಮೋದಿ ಅವರ ರೀತಿ 73 ವರ್ಷ ವಯಸ್ಸಾಗಿಲ್ಲ. ಹೀಗಿದ್ರೂ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ಯಾಕೆ ಅನ್ನೋ ಚರ್ಚೆಗಳು ಇವೆ. ಅಷ್ಟೇ ಅಲ್ಲ. ಚಿತ್ರದುರ್ಗ ಕಾಂಗ್ರೆಸ್ನಲ್ಲಿ ಚಂದ್ರಪ್ಪ ಮತ್ತು ಆರ್ಬಿ ತಿಮ್ಮಾಪುರ ಇಬ್ಬರ ನಡುವೆ ಟಿಕೆಟ್ಗಾಗಿ ಫೈಟ್ ನಡೀತಾಯಿದೆ. ಆದ್ರೆ ಇವರಿಗೆ ಟಿಕೆಟ್ ಕೊಟ್ರೆ ಗೆದ್ದು ಬರ್ತಾರೆ ಅನ್ನೋ ನಂಬಿಕೆ ರಾಜ್ಯ ಕಾಂಘ್ರೆಸ್ನಲ್ಲಿ ಇಲ್ಲ. ಹೀಗಾಗಿ ಬಿಜೆಪಿಯ ಹಾಲಿ ಸಂಸದ ಎ ನಾರಾಯಣಸ್ವಾಮಿ ಅವರನ್ನ ಕಾಂಗ್ರೆಸ್ಗೆ ಸೆಳೆದು ಕಾಂಗ್ರೆಸ್ನಿಂದ ಅಖಾಡಕ್ಕಿಳಿಸೋ ಪ್ಲ್ಯಾನ್ ನಡೆಯುತ್ತಿದೆ ಅನ್ನೋ ಮಾತುಗಳು ಹರಿದಾಡ್ತಾಯಿವೆ. ಇವರಷ್ಠೇ ಅಲ್ಲ, ಇವರ ಜೊತೆಗೆ ಕೆಲ ಪ್ರಭಾವಿ ಬಿಜೆಪಿ ಮುಖಂಡರು ಕೂಡ ಡಿಕೆಶಿ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ. ಅವರಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸೋತ ಡಾ. ಕೆ ಸುಧಾಕರ್ ಒಬ್ರು ಎನ್ನಲಾಗುತ್ತಿದೆ. ಡಾ. ಕೆ ಸುಧಾಕರ್ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ದೋಣಿಗಳಲ್ಲಿ ಕಾಲಿಟ್ಟು ಪ್ರಯಾಣ ಬೆಳೆಸಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್ ಸಿಗಲಿಲ್ಲ ಅಂದ್ರೆ ಕಾಂಗ್ರೆಸ್ಗೆ ಯೂಟರ್ನ್ ಹೊಡೆದು ಚಿಕ್ಕಬಳ್ಳಾಪುರ ಟಿಕೆಟ್ ಗಿಟ್ಟಿಸಿಕೊಳ್ಳೋ ಪ್ಲ್ಯಾನ್ ಮಾಡಿದ್ದಾರೆ ಅನ್ನೋ ಮಾತುಗಳು ಹರಿದಾಡ್ತಾಯಿವೆ.
ಬಿ.ಸಿ.ಪಾಟೀಲ್ ಅಸಮಾಧಾನ
ಹಾವೇರಿ ಎಂಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಬಿಸಿ ಪಾಟೀಲ್ ಕೂಡ ಈಗ ಅಸಮಾಧಾನಗೊಂಡಿದ್ದು ಇವರು ಕೂಡ ಕಾಂಗ್ರೆಸ್ಗೆ ಯೂಟರ್ನ್ ಹೊಡೆದು ಟಿಕೆಟ್ ಗಿಟ್ಟಿಸಿಕೊಳ್ಳೋ ಪ್ಲ್ಯಾನ್ ಮಾಡಿದ್ದಾರೆ ಅನ್ನೋ ಮಾತುಗಳೂ ಕೇಳಿಬರ್ತಾಯಿವೆ. ಅದೇನೇ ಇದ್ರೂ ಇನ್ನ ಕೆಲವೇ ದಿನಗಳಲ್ಲಿ ಡಿಕೆಶಿ ಅವರ ಸಂಪರ್ಕದಲ್ಲಿರೋ ಆ ಹಾಲಿ ಸಂಸದರ್ಯಾರು ಮತ್ತು ಪ್ರಭಾವಿ ಬಿಜೆಪಿ ಮುಖಂಡರ್ಯಾರೂ ಅನ್ನೋದು ಬಟಾಬಯಲಾಗಲಿದೆ. ಅಷ್ಟೇ ಅಲ್ಲ, ಈಗಾಗಲೇ ರಾಜ್ಯ ಬಿಜೆಪಿ 20 ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನ ಘೋಷಣೆ ಮಾಡಿರೋದ್ರಿಂದ ಕಾಂಗ್ರೆಸ್ ಯಾವ ಕ್ಷೇತ್ರದಿಂದ ಯಾವ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ರೆ ಬಿಜೆಪಿ ಅಭ್ಯರ್ಥಿಗಳನ್ನ ಸೋಲಿಸಬಹುದು ಅನ್ನೋ ಬಗ್ಗೆ ಎಚ್ಚರಿಕೆಯಿಂದ ಪ್ಲ್ಯಾನ್ ಮಾಡಬೇಕಾಗಿದೆ.