
ದಾವಣಗೆರೆ : ದಾವಣಗೆರೆಯಲ್ಲಿ ಬಿಎಸ್ ವೈ ಕೈ ಬಲಪಡಿಸಲು ನಡೆಯುತ್ತಿರುವ ಸಭೆಗೆ ನನ್ನನ್ನು ಕರೆಯಲು ಧಮ್ಮು ಬೇಕು ಎಂದು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ರೇಣುಕಾಚಾರ್ಯ ಬಣಕ್ಕೆ ಕೌಂಟರ್ ನೀಡಿದರು.
ದಾವಣಗೆರೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಮಾತನಾಡಿ, ದಾವಣಗೆರೆಯ ನಿಧಿ ಕನ್ವೇಷನ್ ಹಾಲ್ ನಲ್ಲಿ ಬಿಜೆಪಿ ಲಿಂಗಾಯಿತರ ಸಭೆ ನಡೆಯುತ್ತಿದೆ. ಅದು ನನಗೆ ಗೊತ್ತಿದೆ. ಆದರೆ ಆ ಸಭೆಗೆ ನನ್ನನ್ನು ಕರೆಯೋಕೆ ಧಮ್ಮು ಬೇಕಲ್ವಾ ಎಂದು ರೇಣುಕಾಚಾರ್ಯ ಆಂಡ್ ಟಿಂಗೆ ಮಾಜಿ ಸಂಸದ ಜಿ ಎಂ ಸಿದ್ದೇಶ್ವರ್ ಟಾಂಗ್ ನೀಡಿದರು.
ನಾನು ಲಿಂಗಾಯತ ನಾಯಕ ಅಲ್ಲ, ಸರ್ವಜನಾಂಗದ ನಾಯಕ ನಾನು ಬಿಜೆಪಿ ಕಾರ್ಯಕರ್ತ, ಬೆಂಗಳೂರು ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು ಹೋಗಿದ್ದೆ ಎಂದ ಸಿದ್ದೇಶ್ವರ 15 ದಿನದಲ್ಲಿ ಅಧ್ಯಕ್ಷ ಬದಲಾವಣೆ ಆಗುವ ಸಾಧ್ಯತೆ ಇದೆ. ಹೈಕಮಾಂಡ್ ಈ ಬಗ್ಗೆ ತಿರ್ಮಾನ ಮಾಡಲಿದೆ, ಅದರಂತೆ ನಡೆಯಲಿದೆ .ಸದ್ಯ ರಾಷ್ಟ್ರ ಮತ್ತು ರಾಜ್ಯ ಅಧ್ಯಕ್ಷ ಬದಲಾವಣೆ ಸಾದ್ಯತೆ ಇದೆ ಎಂದ ಸಿದ್ದೇಶ್ವರ್ ಇಲ್ಲಿವರೆಗೂ ಚುನಾವಣೆ ನಡೆದಿಲ್ಲ, ಈಗಲೂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

