
ದಾವಣಗೆರೆ : ದಾವಣಗೆರೆಯ ಮೌನೇಶ್ವರ ಬಡಾವಣೆಯ ಸರ್ವೋದಯ ಕಾಮರ್ಸ್ ಅಕಾಡೆಮಿಯ ‘ಉದ್ಭವ್ – 2K24’ ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ವೆಂಕಟೇಶ್ ಬಾಬು ಅವರು ಸರ್ವೋದಯ ಎಂದರೆ ಎಲ್ಲರ ಅಭಿವೃದ್ಧಿ ಅಥವಾ ಎಲ್ಲರ ಉದಯ ಅದು ಸರ್ವೋದಯ ಅಕಾಡೆಮಿ ಮೂಲಕ ಆಗಲಿ ಎಂದು ಹೇಳಿದರು.
ಡಾ. ವೆಂಕಟೇಶ್ ಬಾಬು, ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗೂ ವ್ಯಕ್ತಿತ್ವ ವಿಕಸನ ಬಾಷಣಕಾರರೂ ಆಗಿರುವ ಅವರು ತಮ್ಮ ವಿದ್ವತ್ತಿನ ಜ್ಞಾನದಿಂದ ಭಾಷಣವನ್ನು ಪ್ರಾರಂಭಿಸಿದ ಅವರು, ಜೀವನದಲ್ಲಿ ಶಿಕ್ಷಣದ ಮಹತ್ವವನ್ನು ಹೃದಯಂಗಮ ಮಾಡುವ ರೀತಿಯಲ್ಲಿ ವಿವರಿಸಿದರು. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪರಿಚಯಿಸಿಕೊಳ್ಳಲು ಈ ಅಕಾಡೆಮಿಯ ಕಾರ್ಯಕ್ರಮಗಳು ಒಂದು ಉತ್ತಮ ವೇದಿಕೆಯಾಗಿ ರೂಪುಗೊಳ್ಳುವುದರ ಬಗ್ಗೆ ಅವರು ಆಶಾವಾದ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಹೇಗೆ ತಮ್ಮ ಗುರಿ ತಲುಪಬೇಕು ಎಂಬ ಕುರಿತು ವಿಸ್ತೃತವಾಗಿ ಚರ್ಚಿಸಿದರು. ಅವರು ವಿದ್ಯಾರ್ಥಿಗಳಿಗೆ ನಂಬಿಕೆ, ಪರಿಶ್ರಮ ಮತ್ತು ಪ್ರಾಮಾಣಿಕತೆ ಎಂಬ ಮೌಲ್ಯಗಳನ್ನು ತಮ್ಮ ಜೀವನದ ಸಂಕೇತವಾಗಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು. ಪ್ರತಿ ದಿನದ ಸಣ್ಣ ಸಾಧನೆಗಳು, ಅವರ ಭವಿಷ್ಯಕ್ಕೆ ದಾರಿದೀಪವಾಗುವುದನ್ನು ವಿವರಿಸುತ್ತ, ದೊಡ್ಡ ಗುರಿಗಳನ್ನು ಸಾಧಿಸಲು ಅನುಸರಿಸಬೇಕಾದ ರೋಡ್ಮ್ಯಾಪ್ನ್ನು ಅವರು ಚಿತ್ರಿಸಿದರು.

ಪೋಷಕರಿಗೆ ಸಂದೇಶ: ಪೋಷಕರು ಮಕ್ಕಳ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂಬುದನ್ನು ಒತ್ತಿ ಹೇಳಿದ ಅವರು, ಮಕ್ಕಳ ಸಾಧನೆಗೆ ಪ್ರೋತ್ಸಾಹ ನೀಡುವ ಮೂಲಕ ಪೋಷಕರ ಪಾತ್ರ ಹೆಚ್ಚಾಗಿದೆ ಎಂದು ತಿಳಿಸಿದರು. ಪೋಷಕರು ಮಕ್ಕಳ ಪ್ರತಿಭೆಯನ್ನು ಗುರುತಿಸಲು, ಅವರಿಗೆ ಸ್ವಾತಂತ್ರ್ಯ ನೀಡುವುದರೊಂದಿಗೆ, ಪ್ರೋತ್ಸಾಹಿಸುವ ಅಗತ್ಯವಿದೆ ಎಂಬುದನ್ನು ತೀರ್ಮಾನಿಸಿದರು.
ನಿರಂತರ ಪ್ರಯತ್ನವೇ ಯಶಸ್ಸಿನ ಮಾರ್ಗ: ಡಾ. ವೆಂಕಟೇಶ್ ಬಾಬು ತಮ್ಮ ಭಾಷಣದ ಅಂತ್ಯದಲ್ಲಿ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತ ಸಂದೇಶವನ್ನು ನೀಡಿದರು. ಅವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತ, ನಿರಂತರವಾಗಿ ಅಭ್ಯಾಸ ಮಾಡುವ ಮೂಲಕ ದೊಡ್ಡ ಯಶಸ್ಸನ್ನು ಸಾಧಿಸಲು ಗುರಿಯನ್ನು ಹಮ್ಮಿಕೊಳ್ಳಬೇಕೆಂದು ಹುರಿದುಂಬಿಸಿದರು.
ಮತ್ತೊಬ್ಬ ಅತಿಥಿಗಳಾದ ಶ್ರೀ ವಿದ್ಯಾಧರ್ ವೇದಮೂರ್ತಿ ರವರು ಕಾರ್ಯಕ್ರಮದ ಕುರಿತು ಮಾತನಾಡಿದರು
ಅಕಾಡೆಮಿಯ ನಿರ್ದೇಶಕರಾದ ದಾ ಪ್ರಕಾಶ ನಾಯಕರವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮಂಜುನಾಥ ರವರು ಸ್ವಾಗತಿಸಿದರು, ದಾದಪೀರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಮೇಶ್ರವರು ವಂದಿಸಿದರು. ಮಲ್ಲೇಶ್ ನಾಯಕ ಅಚ್ಚು ಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಿದರು