ನಂದೀಶ್ ಭದ್ರಾವತಿ ದಾವಣಗೆರೆ
ಒಬ್ಬರಿಗೆ ಮಾಡಿದವ ಸಹಾಯ ಇನ್ನೊಬ್ಬರಿಗೆ ಗೊತ್ತಾಗದ ರೀತಿಯಲ್ಲಿ ಹಲವರು ಸೇವೆ ಮಾಡುತ್ತಾರೆ. ಆದರೆ ಅವರು ಎಲೆ ಮರೆ ಕಾಯಿ ರೀತಿ ಇರುತ್ತಾರೆ. ಆದರೆ ಅವರು ಮಾಡಿದ ಕೆಲಸ ದೇವರಿಗೆ ಮಾತ್ರ ಗೊತ್ತಿರುತ್ತದೆ.
ಹೌದು…ದೇವನಗರಿ ಎಂದೇ ಖ್ಯಾತಿ ಪಡೆದ ಈ ಊರಿನಲ್ಲಿ ಮಹಿಳೆಯೊಬ್ಬರು ಮದರ್ ಥೆರೆಸಾ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಹೆಸರೇ ಚೇತನಾ ಶಿವಕುಮಾರ್. ಮೂಲತಃ ಮಲೆನಾಡಿನ ಮಗಳಾದ ಇವರ ಮನಸ್ಸು ಸಾಕಷ್ಟು ಶ್ರೀಮಂತಿಕೆ ಹೊಂದಿದೆ.
ನಾಲ್ಕು ದಶಕಗಳ ಹಿಂದೆ ದೇಶಾದ್ಯಂತ ಶೋಷಿತರ ಅನಾಥರ ಅಂಗವಿಕಲರ ಅಂಧಮಕ್ಕಳ ಸೇವೆ ಮಾಡಿ ನೋಬೆಲ್ ಪ್ರಶಸ್ತಿ ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದ ಮದರ್ ತೆರಸ್ ನಮಗೆಲ್ಲಾ ಮಾದರಿಯಾಗಿದ್ದರು ಅದೇ ಮಾದರಿಯಲ್ಲಿ ಮದ್ಯ ಕರ್ನಾಟಕದ ಕೇಂದ್ರ ಬಿಂದುವಾಗಿರುವ ದಾವಣಗೆರೆಯಲ್ಲಿ ಜ್ಯೂನಿಯರ್ ಮದರ್ ತೆರಸ್ ರೆಂದೇ ಇವರು ಹೆಸರಾಗಿದ್ದಾರೆ.
ಚಿಕ್ಕ ಮಗಳೂರು ಜಿಲ್ಲೆ ಸಾಂಸ್ಕೃತಿಕ ರಾಜಧಾನಿಯೆಂದು ಹೆಸರುವಾಸಿಯಾದ ತರಿಕೇರೆ (ತಾ) ಅಜ್ಜಂಪುರ ಅರೆ ಮಲೆನಾಡಿನ ಒಂದು ಪುಟ್ಟ ಗ್ರಾ ಮದಲ್ಲಿ ಇವರು ಜನಿಸಿದರು.ಮದುವೆಯ ನಂತರ ದಾವಣಗೆರೆಯಲ್ಲಿ ಮಹಿಳಾ ಸಂಘಗಳಲಿ ತೊಡಗಿಸಿಕೊಂಡು
ಅನೇಕ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಅವುಗಳಲ್ಲಿ ಪ್ರ ಮುಖವಾಗಿ ಸಂಘಗಳನ್ನು ಕಟ್ಟುವುದು, ಆರೋಗ್ಯ ತಪಾಸಣೆ ಶಿಬಿರ, ವೃದ್ಧ
ಮಹಿಳೆ ರಕ್ಷಣೆ, ಬಾಲ್ಯವಿವಾಹ ತಡೆಗಟ್ಟುವುದು
ಪರಿಸರ ಜಾಗೃತಿ ಶಿಬಿರ, ಸ್ತನ ಕ್ಯಾನ್ಸರ್, ಕಾನೂನು ಅರಿವು, ವೃದ್ಧಾಪ್ಯ ವೇತನ ಗರ್ಭಿಣಿ, ಸ್ತ್ರೀಯರಿಗೆ ಪೌಷ್ಠಿಕ ಆಹಾರ ಬಗ್ಗೆ ಅರಿವು ಅನೇಕ ಕಾರ್ಯಕ್ರ ಮಗಳು ಆಯೋಜಿಸಿದ್ದಾರೆ. ಇನ್ನು ಕೋವಿಡ್ 19 ವಿರುದ್ಧ ಬಡಕುಟುಂಬಗಳಿಗೆ ಕೈಲಾದ ಸಹಾಯ, ಹಲವಾರು ಸಂಘಟನೆಯಲ್ಲಿ ವಾರ್ಡ್‍ನಲ್ಲಿ ಸಮಸ್ಯೆಗಳಲ್ಲಿ ತೊಡಗಿಸಿಕೊಂಡಿದ್ದು ಸಕ್ರಿ ಯವಾಗಿ
ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಹಾಯ ಮಾಡುವುದರೊಂದಿಗೆ ಸಮಾಜ ಸೇವೆಯನ್ನು
ಮಾಡುತ್ತಿದ್ದಾರೆ. ಅಲ್ಲದೇ ಹಲವಾರು ಸಂಘ ಸಂಸ್ಥೆಯ ಸಕ್ರಿ ಯ ಸದಸ್ಯಳಾಗಿದ್ದು ಮಹಿಳೆಯರಿಗೆ ವೃತ್ತಿ ಪರ ತರಬೇತಿಗಳನ್ನು ನೀಡತ್ತಿದ್ದಾರೆ. ಅಲ್ಲದೇ ಅನೇಕ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಹಿಳೆಯರಿಗೆ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ.
ಪ್ರೇರಣಾ ಸೇವಾ ಸಂಸ್ಥೆ ಸಂಸ್ಥಾಪಕಿ
ಪ್ರೇರಣಾ ಸೇವಾ ಸಂಸ್ಥೆಯ ಸಂಸ್ಥಾಪಕಿ ಚೇತನಾ ಶಿವಕುಮಾರ್ ರವರ ಸೇವಾ ಕಾರ್ಯಗಳನ್ನು ಗುರುತಿಸಿ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಜಿಲ್ಲಾಡಳಿತದ ಗೌರವ ಘನತೆಯನ್ನು ಹೆಚ್ಚಿಸಿಕೊಂಡಿದೆ
ಪುರುಷ ಪ್ರದಾನ ಸಮಾಜದಲ್ಲಿ ಮಹಿಳೆ ಮರಿಚೀಕೆ ಯಾಗದೇ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನ ತಾನು ತೊಡಗಿಸಿಕೊಂಡು ಶೋಷಿತರ.ಅಬಲೆಯರ.ಅನಾಥರ ಮತ್ತು ಅಂಗವಿಕಲರ ಸೇವೆ ಮಾಡಿ ಜಿಲ್ಲಾದ್ಯಂತ ಹೆಸರಾಗಿರುವ ಚೇತನಾರವರ ಸೇವೆ ನಿಜಕ್ಕೂ ಶ್ಲಾಘನೀಯ.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ
ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಶಿಕ್ಷಣಕ್ಕೆ ಆದ್ಯತೆಯನ್ನು ಚೇತನಾ ನೀಡಿರುವುದು ಹೆಮ್ಮೆಯ ವಿಚಾರ.ಯಶಸ್ವಿ ಮಹಿಳೆಯ ಹಿಂದೆ ಪುರುಷನಿರುವುದು ಅಕ್ಷರಶಃ ಸತ್ಯ ಹಾಗೆಯೇ
ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವಂತೆ ಪ್ರತಿಷ್ಠಿತ ಮಹಿಳೆ ಹಿಂದೆ ಪುರುಷ ಇರುತ್ತಾರೆ ಎಂಬುದಕ್ಕೆ ಪತಿ ಶಿವಕುಮಾರ್ ಇವರ ಸೇವಾಕಾರ್ಯಗಳಿಗೆ ಸ್ಪೂರ್ತಿಯಾಗಿದ್ದಾರೆ. ಚೇತನಾ ರವರ ನಿರಂತರ ಸಮಾಜಸೇವೆಗೆ ಅತ್ತೆ ಮಾವ ಪತಿ ಮತ್ತು ಮಕ್ಕಳು ಬೆನ್ನೆಲುಬಾಗಿ ನಿಂತಿರುವುದು ಮತ್ತೊಂದು
ವಿಶೇಷ.
ಮಂಜಮ್ಮ ಜೋಗತಿಗೆ ಗೌರವ ನೀಡಿದ ಚೇತನಾ
ಮಂಗಳಮುಖಿಯರಿಗೆ ಗೌರವ ನೀಡದ ಈ ಕಾಲದಲ್ಲಿ ಚೇತನಾ ನಾಡಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಮಂಜಮ್ಮ ಜೋಗತಿಯವರನ್ನು ಕರೆಸಿ ಅದ್ದೂರಿ ಮೆರವಣಿಗೆಯೊಂದಿಗೆ ಸ್ವಾಗತಿಸಿದರು. ಮಂಗಳಮುಖಿಯೂ ಕೂಡ ಗೌರವಿತವಾಗಿ ಬಾಳುತ್ತಿದ್ದಾರೆ ಎಂಬುದನ್ನು ಸಾಬೀತುಪಡಿಸಿದ ಅರ್ಥಪೂರ್ಣ ಕಾರ್ಯಕ್ರಮ ಇದಾಗಿತ್ತು. ಅಲ್ಲದೇ ಈ ಕಾರ್ಯಕ್ರಮ ಅಚ್ಚಳಿಯದೇ ಜನಮಾನಸದಲ್ಲಿ ಉಳಿದಿದಿಯೆಂದರೆ ಅದಕ್ಕೆ ಚೇತನಾ ಶಿವಕುಮಾರ್ ರವರ ಶ್ರಮ ಎಂದರೆ ತಪ್ಪಾಗಲಾರದು.
*ಸ್ನೇಹಕ್ಕೂ ಬದ್ಧ ಸಮರಕ್ಕೂ ಸಿದ್ದ ಎನ್ನುವ ಚೇತನಾ*
ಅಪ್ಪಟ ದೇಶಭಕ್ತ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿ ನಾಡು ನುಡಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಚೇತನಾರವರು ಮೂಢನಂಬಿಕೆ ಅನಿಷ್ಟ ಪದ್ಧತಿಗಳ ಮತ್ತು ಭ್ರಷ್ಟಾಚಾರದ ವಿರುದ್ಧ ಆನೇಕ ಹೋರಾಟಗಳನ್ನು ಮಾಡಿದ ದಾವಣಗೆರೆಯ ಮಹಿಳಾ ಹೋರಾಟಗಾರ್ತಿ. ಶ ಚೇತನಾ ಶಿವಕುಮಾರ್ ರವರು ಸ್ನೇಹಕ್ಕೂ ಬದ್ದ ಸಮರಕ್ಕೂ ಸಿದ್ದ ಎಂಬುದನ್ನ ಸಾಕ್ಷಿಕರಿಸಿದ್ದಾರೆ. ಇಂತಹ ಅಪ್ರತಿಮ ಪ್ರತಿಭೆಗೆ ರಾಜ್ಯೋತ್ಸವದಲ್ಲಿ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಿರುವುದು ಇಡೀ ದಾವಣಗೆರೆ ಜನತೆಗೆ ಸಂತಸ ತರಿಸಿದೆ.
ಮಹಿಳೆಯರಿಗೆ ಉಚಿತ ತರಬೇತಿ
ಚೇತನಾ ಕೇವಲ ಸಮಾಜಸೇವೆಯಲ್ಲಿ ತೊಡಗಿಲ್ಲ, ಬದಲಾಗಿ ಮಹಿಳೆಯರಿಗೂ ಜೀವನ ರೂಪಿಸಿಕೊಡುತ್ತಿದ್ದಾರೆ. ಅವರಿಗಾಗಿ ಉಚಿತ ಬ್ಯೂಟಿಪಾರ್ಲರ್, ಕೈ ಕಸೂತಿ, ಮೆಹಂದಿ,
ಕಂಪ್ಯೂಟರ್, ಎಂಬ್ರಾಡಿಂಗ್ ಇನ್ನು ಮುಂತಾದ
ತರಬೇತಿಗಳನ್ನು ನೀಡುತ್ತಾ ಬಂದಿದ್ದಾರೆ.
ಚೇತನಾ ಕಾರ್ಯನಿರ್ವಹಣೆ ಏನು ಗೊತ್ತಾ?
ಚೇತನಾ ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ ಮಾಡಿ
ಸಮಾಜದಲ್ಲಿನ ಜವಾಬ್ದಾರಿ ತೋರಿಸಿದ್ದಾರೆ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ದಾವಣಗೆರೆ ಜಿಲ್ಲೆ ಜಿಲ್ಲಾ ಜನಜಾಗೃತ ವೇದಿಕೆಯ ಸದಸ್ಯರಾಗಿ ಕಾಯಕ. ದಾವಣಗೆರೆ ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆ
ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಅಜೀವ ಸದಸ್ಯೆ. ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನದ ಮಹಿಳಾ ಅಧ್ಯಕ್ಷೆ. ಕ್ಷತ್ರೀಯ ಮರಾಠ ವಿದ್ಯಾವರ್ತಕ ಸಂಘ ದಾವಣಗೆರೆ ಜಿಜಾಮಾತ ಮಹಿಳಾ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸುತಿದ್ದಾರೆ.
ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಬೆಂಗಳೂರು ದಾವಣಗೆರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ
ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರೇರಣಾ ಸಾಂಸ್ಕೃತಿಕ ಸಂಸ್ಥೆ (ರಿ) ದಾವಣಗೆರೆ ಸಂಸ್ಥಾಪಕ ಆಗಿ ಕೆಲಸ ಮಾಡುತ್ತಿದ್ದಾರೆ.
ರಾಜಕೀಯ ಕ್ಷೇತ್ರ
2004ರಲ್ಲಿ ದಾವಣಗೆರೆ ಬಿಜೆಪಿ 10ನೇ ವಾರ್ಡ್‍ನ ಬೂತ್‍ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.2006 ರಿಂದ ವಾರ್ಡ್‍ನ ಮಹಿಳಾ ಅಧ್ಯಕ್ಷೆ, 2013 ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮಹಿಳಾ ಮೊರ್ಚಾದ ನಗರ ಪ್ರಧಾನ ಕಾರ್ಯದರ್ಶಿ
23-12-2013 ರಂದು ಭಾರತೀಯ ಜನತಾ ಪಾರ್ಟಿ
ಯಲ್ಲಿ ಕೆಜಿಪಿ ಬಿಜೆಪಿ ಎಂಬ 2 ಗುಂಪು ಗಳಾದಾಗ
ಬಿಜೆಪಿಯಿಂದ ವಾರ್ಡ್ ನಂ. 9ರಲ್ಲಿ ಮಹಾನಗರ
ಪಾಲಿಕೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಸ್ವಲ್ಪ
ಮತದ ಅಂತರದಲ್ಲಿ ಸೋಲಾಗಿತ್ತು. 2016ರಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ
ಕಾರ್ಯ ನಿರ್ವಹಿಸಿದ್ದಾರೆ. ವಿಶ್ವ ಹಿಂದೂ ಪರಿಷತ್‍ನಲ್ಲಿ ಕೂಡ ಸಮಾಜ ಸೇವೆ ಮಾಡಿದ್ದಾರೆ. ರಾಷ್ಟ್ರೀಯ ಸೇವಿಕಾ ಸಮಿತಿಯಲ್ಲಿ ಸಿದ್ದಾಂತದ ಮೆರೆಗೆ ಮತ್ತು ಸಂಘಟನೆಯಲ್ಲಿ ಹಿರಿಯರ ಮಾರ್ಗದರ್ಶನ ದೊಂದಿಗೆ ಜವಾಬ್ದಾರಿಯನ್ನು ಸಕ್ರೀಯವಾಗಿ ನಿರ್ವಹಿಸಿ ಭಾಗವಹಿಸಿದ್ದಾರೆ. ಸಂಘನಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ವಿಶೇಷ. ಒಟ್ಟಾರೆ ಚೇತನಾ ಶಿವಕುಮಾರ್ ಸಾಧನೆ ಹೇಳುತ್ತಾ ಹೋದರೆ ಅದಕ್ಕೆ ಪುಲ್ ಸ್ಟಾಪ್ ಇಲ್ಲ. ಮುಂದಿನ ದಿನಗಳಲ್ಲಾದರೂ ಅವರಿಗೆ ರಾಜಕೀಯವಾಗಿ ಉನ್ನತ ಸ್ಥಾನ ಸಿಗಲಿ ಎಂಬುದು ಸಮಸ್ತ ದಾವಣಗೆರೆ ಜನರ ಆಶಯ.