Close Menu
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog

Subscribe to Updates

Get the latest creative news from FooBar about art, design and business.

What's Hot

ಮಂಗಳವಾರದ ರಾಶಿ ಭವಿಷ್ಯ ಹೇಗಿದೆ ತಪ್ಪದೇ ನೋಡಿ?

20 May 2025

ಜ್ಞಾನದ ಹಸಿವ ತಣಿಸುವ ವ್ಯಾಸ ಗುರು ತೇಜಸ್ವಿ ಕಟ್ಟೀಮನಿ

19 May 2025

ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ಗೆ ಸಿಕ್ಕಿತ್ತು ಈ ಪದಕ..ಅದು ಯಾಕಾಗಿ?

18 May 2025
Facebook X (Twitter) Instagram
Facebook X (Twitter) Instagram
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
Davangere VijayaDavangere Vijaya
Home»ಪ್ರಮುಖ ಸುದ್ದಿ»ಮರಗಳ ನಾಶ: ರೋಹಿಣಿ ಸಿಂಧೂರಿ ಅತ್ತೆ ನೀಡಿದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ.
ಪ್ರಮುಖ ಸುದ್ದಿ

ಮರಗಳ ನಾಶ: ರೋಹಿಣಿ ಸಿಂಧೂರಿ ಅತ್ತೆ ನೀಡಿದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ.

davangerevijaya.comBy davangerevijaya.com16 December 2024No Comments2 Mins Read
Facebook WhatsApp Twitter
Share
WhatsApp Facebook Twitter Telegram

ಬೆಂಗಳೂರು.

ಬಾಲಿವುಡ್ ಗಾಯಕ ಮಕ್ಸೂದ್ ಅಲಿ ಅಲಿಯಾಸ್ ಲಕ್ಕಿ ಅಲಿ ಮತ್ತು ಅವರ ಬೆಂಬಲಿಗ ಬೆಂಗಳೂರಿನ ವಾಸುದೇವಪುರದಲ್ಲಿರುವ (ಕೆಂಚೇನಹಳ್ಳಿ) ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಮರಗಳನ್ನು ನಾಶಪಡಿಸುವ ಮೂಲಕ ಸುಮಾರು 75 ಲಕ್ಷ ರೂ. ನಷ್ಟ ಉಂಟು ಮಾಡಿದ ಆರೋಪದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಅತ್ತೆ ದಾಖಲಿಸಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ವಿಧಿಸಿದೆ.

ಗಾಯಕ ಲಕ್ಕಿ ಅಲಿ ಮತ್ತು ಬೆಂಗಳೂರಿನ ಮೈಲಪ್ಪನಹಳ್ಳಿಯ ಶ್ರೀನಿವಾಸ್ ಎಂಬವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು, ”ದೂರುದಾರೆಯಾದ ಬುಜ್ಜಮ್ಮ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಅತ್ತೆ. ಹೀಗಾಗಿ, ಪೊಲೀಸರು ಲಕ್ಕಿ ಅಲಿ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಲಕ್ಕಿ ಅಲಿ ಅವರಿಗೆ ಸೇರಿದ ಟ್ರಸ್ಟ್ ಹೆಸರಿನಲ್ಲಿ 87 ಎಕರೆ ಆಸ್ತಿ ಇದೆ. ಇದರ ಸಮೀಪದಲ್ಲೇ ರೋಹಿಣಿ ಅವರ ಪತಿ ಜಿ.ಸುಧೀರ್ ರೆಡ್ಡಿ ಅವರು ಲಕ್ಕಿ ಅಲಿ ಸಹೋದರನಿಂದ ಆಸ್ತಿ ಖರೀದಿಸಲಾಗಿದೆ ಎಂದು ಹೇಳುತ್ತಿದಾರೆ. ಈ ಸಂಬAಧ 2016ರಿಂದ ರೋಹಿಣಿ ಅವರ ಪತಿ ಜಿ.ಸುಧೀರ್ ರೆಡ್ಡಿ ಮತ್ತು ಲಕ್ಕಿ ಅಲಿ ಅವರ ನಡುವೆ ಸಿವಿಲ್ ದಾವೆ ನಡೆಯುತ್ತಿದೆ” ಎಂದು ತಿಳಿಸಿದರು.

”ಬುಜ್ಜಮ್ಮ ಅವರ ಸೊಸೆಯಾಗಿರುವ ರೋಹಿಣಿ ಸಿಂಧೂರಿ ಅವರು ಅಧಿಕಾರ ಬಳಸಿ ಕಿರುಕುಳ ನೀಡುತ್ತಿದ್ದಾರೆ. ಖಾಸಗಿ ದಾರಿಯನ್ನು ಸಾರ್ವಜನಿಕ ಹಾದಿ ಎಂದು ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಗೇಟ್ ಬೀಗ ತೆಗೆಯಬೇಕು ಎಂದು ಬೆದರಿಕೆ ಹಾಕುತ್ತಿದ್ದಾರೆ. ಪೊಲೀಸರು ಖಾಸಗಿ ವಾಹನದಲ್ಲಿ ಬಂದು ಬೆದರಿಕೆ ಹಾಕುತ್ತಿದ್ದಾರೆ. ಈ ಸಂಬAಧ ಸಿಸಿಟಿವಿ ವಿಡಿಯೋ ಸಹ ನಮ್ಮ ಬಳಿ ಇದೆ” ಎಂದು ಪೀಠಕ್ಕೆ ವಿವರಿಸಿದರು.

ವಾದ ಆಲಿಸಿದ ಪೀಠ, ”ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರು ಮಾಹಿತಿ ಪಡೆದು ವಾದ ಮಾಡುವವರೆಗೆ ಲಕ್ಕಿ ಅಲಿ ಮತ್ತು ಇತರರ ವಿರುದ್ಧದ ಎಫ್‌ಐಆರ್ ಮತ್ತು ಆ ಸಂಬAಧ ಬೆಂಗಳೂರಿನ 7ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟೆçÃಟ್ ನ್ಯಾಯಾಲಯದಲ್ಲಿನ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲಾಗಿದೆ” ಎಂದು ಆದೇಶಿಸಿ, ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ಮುಂದೂಡಿತು.

ಪ್ರಕರಣದ ವಿವರ: 2012ರ ಏಪ್ರಿಲ್ 30ರಂದು ಪುತ್ರ ಜಿ.ಸುಧೀರ್ ರೆಡ್ಡಿ ಅವರು ಯಲಹಂಕ ತಾಲ್ಲೂಕಿನ ವಾಸುದೇವಪುರ (ಕೆಂಚೇನಹಳ್ಳಿ) ಗ್ರಾಮದ ಸರ್ವೇ ನಂ.25, 26, 27, 28 ಮತ್ತು 30ರಲ್ಲಿ 3 ಎಕರೆ ಜಮೀನನ್ನು ಮನ್ಸೂರ್ ಎಂಬವರಿAದ ಖರೀದಿಸಿದ್ದು, ಅದನ್ನು ಈಚೆಗೆ ತಮಗೆ ದಾನ ಮಾಡಿಕೊಟ್ಟಿದ್ದಾರೆ. ಹೀಗಾಗಿ, ಕಾಂಪೌAಡ್ ಕಟ್ಟಿ ಅಭಿವೃದ್ಧಿಪಡಿಸಿದ್ದು, ಅದನ್ನು ಮಕ್ಸೂದ್ ಅಲಿ ಅಲಿಯಾಸ್ ಲಕ್ಕಿ ಅಲಿ ಎಂಬವರು ಬಲವಂತವಾಗಿ ಸ್ವಾಧೀನಪಡಿಸಲು ಯತ್ನಿಸುತ್ತಿದ್ದಾರೆ ಎಂದು ಬುಜ್ಜಮ್ಮ ದೂರಿದ್ದರು.

2024ರ ನವೆಂಬರ್ 17 ಮತ್ತು 18ರಂದು ಕುಟುಂಬಸಮೇತ ಹೊರಗಡೆ ಹೋಗಿದ್ದಾಗ ಲಕ್ಕಿ ಅಲಿ ಮತ್ತು ಅವರ ಕಡೆಯವರು ತಮ್ಮ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಅಲ್ಲಿ ಬೆಳೆಸಿದ್ದ ಗಿಡಗಳನ್ನು ಕಿತ್ತು ಹಾಕಿ ಸುಮಾರು 75 ಲಕ್ಷ ರೂ. ನಷ್ಟ ಉಂಟು ಮಾಡಿದ್ದಾರೆ. ಅಲ್ಲದೇ, ತಮ್ಮ ಜಮೀನಿಗೆ ಹೋಗಲು ಇರುವ ಸಾರ್ವಜನಿಕ ರಸ್ತೆಗೆ ಭದ್ರತೆ ಒದಗಿಸಿ ಓಡಾಟವನ್ನು ನಿರ್ಬಂಧಿಸಿದ್ದಾರೆ ಎಂದು ಆರೋಪಿಸಿ ಬುಜ್ಜಮ್ಮ ನವೆಂಬರ್ 19ರಂದು ಯಲಹಂಕ ನ್ಯೂ ಟೌನ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು

feachare Top News
Share. WhatsApp Facebook Twitter Telegram
davangerevijaya.com
  • Website

Related Posts

ಮಂಗಳವಾರದ ರಾಶಿ ಭವಿಷ್ಯ ಹೇಗಿದೆ ತಪ್ಪದೇ ನೋಡಿ?

20 May 2025

ಜ್ಞಾನದ ಹಸಿವ ತಣಿಸುವ ವ್ಯಾಸ ಗುರು ತೇಜಸ್ವಿ ಕಟ್ಟೀಮನಿ

19 May 2025

ಭಾನುವಾರದ ನಿಮ್ಮ ರಾಶಿ ಭವಿಷ್ಯ ಏನಿದೆ ತಪ್ಪದೇ ನೋಡಿ?

18 May 2025
Leave A Reply Cancel Reply

Top Posts

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,631 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,206 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,065 Views

ಪೊಲೀಸ್ ಠಾಣೆಗೆ ಕರೆತಂದಿದ್ದ ಆರೋಪಿ ಸಾವು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಬದುಕಿದ್ದೇ ಹೆಚ್ಚು…ಅಷ್ಟಕ್ಕೂ ಘಟನೆ ನಡೆದಿದ್ದೇನೂ?

25 May 20243,580 Views
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo
Don't Miss
ಪ್ರಮುಖ ಸುದ್ದಿ

ಮಂಗಳವಾರದ ರಾಶಿ ಭವಿಷ್ಯ ಹೇಗಿದೆ ತಪ್ಪದೇ ನೋಡಿ?

By davangerevijaya.com20 May 20250

*💫🛕ಓಂ ಶ್ರೀ ಗಾಯಿತ್ರಿ ವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫* *🕉️ದ್ವಾದಶ ರಾಶಿಗಳ ದಿನ ಭವಿಷ್ಯ#ತಾರೀಕು#20/05/2025 ಮಂಗಳವಾರ🕉️* *01,✨ಮೇಷ ರಾಶಿ✨* 📖,ಆರ್ಥಿಕ…

ಜ್ಞಾನದ ಹಸಿವ ತಣಿಸುವ ವ್ಯಾಸ ಗುರು ತೇಜಸ್ವಿ ಕಟ್ಟೀಮನಿ

19 May 2025

ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ಗೆ ಸಿಕ್ಕಿತ್ತು ಈ ಪದಕ..ಅದು ಯಾಕಾಗಿ?

18 May 2025

ಅಪಘಾತದಲ್ಲಿ ಕುಟುಂಬವನ್ನೇ ಕಳೆದುಕೊಂಡ ಕ್ರಷರ್ ಮಾಲೀಕ : ನರಳಿ, ನರಳಿ ಮೃತಪಟ್ಟ ಒಂದು ವರ್ಷ, ನಾಲ್ಕುವರ್ಷದ ಮಗು…ಹಾಗಾದ್ರೆ ಆ ಘಟನೆ ಹೇಗಾಯ್ತು?

18 May 2025
About Us
About Us

Davanagere Vijaya Kannada News Portal

Facebook X (Twitter) Pinterest YouTube WhatsApp
Our Picks

ಮಂಗಳವಾರದ ರಾಶಿ ಭವಿಷ್ಯ ಹೇಗಿದೆ ತಪ್ಪದೇ ನೋಡಿ?

20 May 2025

ಜ್ಞಾನದ ಹಸಿವ ತಣಿಸುವ ವ್ಯಾಸ ಗುರು ತೇಜಸ್ವಿ ಕಟ್ಟೀಮನಿ

19 May 2025

ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ಗೆ ಸಿಕ್ಕಿತ್ತು ಈ ಪದಕ..ಅದು ಯಾಕಾಗಿ?

18 May 2025
Most Popular

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,631 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,206 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,065 Views

Subscribe to Updates

Get the latest creative news from SmartMag about art & design.

Recent Posts
  • ಮಂಗಳವಾರದ ರಾಶಿ ಭವಿಷ್ಯ ಹೇಗಿದೆ ತಪ್ಪದೇ ನೋಡಿ?
  • ಜ್ಞಾನದ ಹಸಿವ ತಣಿಸುವ ವ್ಯಾಸ ಗುರು ತೇಜಸ್ವಿ ಕಟ್ಟೀಮನಿ
  • ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ಗೆ ಸಿಕ್ಕಿತ್ತು ಈ ಪದಕ..ಅದು ಯಾಕಾಗಿ?
  • ಅಪಘಾತದಲ್ಲಿ ಕುಟುಂಬವನ್ನೇ ಕಳೆದುಕೊಂಡ ಕ್ರಷರ್ ಮಾಲೀಕ : ನರಳಿ, ನರಳಿ ಮೃತಪಟ್ಟ ಒಂದು ವರ್ಷ, ನಾಲ್ಕುವರ್ಷದ ಮಗು…ಹಾಗಾದ್ರೆ ಆ ಘಟನೆ ಹೇಗಾಯ್ತು?
  • ಭಾನುವಾರದ ನಿಮ್ಮ ರಾಶಿ ಭವಿಷ್ಯ ಏನಿದೆ ತಪ್ಪದೇ ನೋಡಿ?
Davangere Vijaya
Facebook X (Twitter) Instagram Pinterest
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
© 2025 Davangere Vijaya. the website designed and maintend by kInsta infotech bangalore

Type above and press Enter to search. Press Esc to cancel.