
ದಾವಣಗೆರೆ : ಉಪಚುನಾವಣೆ ರಂಗೇರೇದಂತೆ ದಾವಣಗೆರೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಮಂದಗಂತಿಯಲ್ಲಿ ಸಾಗಿದೆ.
ಜಿಲ್ಲೆಯಲ್ಲಿ ಸುಮಾರು 18 ಲಕ್ಷ ಜನರಿಂದು ಎರಡು ಬಣಗಳ ಮುನಿಸಿನಿಂದ ಅಂದಾಜು ಎಂಭತ್ತೈದು ಸಾವಿರ ಮಾತ್ರ ನೋಂದಣಿಯಾಗಿದ್ದು, ಈಗ ಎರಡು ಕಡೆಯಿಂದಲೂ ಚುರುಕುಗೊಂಡಿದೆ.
ಅತ್ತ ಮಾಜಿ ಶಾಸಕ ರವೀಂದ್ರನಾಥ, ರೇಣುಕಾಚಾರ್ಯ ಸದಸ್ಯತ್ವ ಅಭಿಯಾನಕ್ಕೆ ಹೊನ್ನಾಳಿ, ದಾವಣಗೆರೆ ಉತ್ತರ ಸೇರಿದಂತೆ ಇತರೆ ಹಳ್ಳಿಹಳ್ಳಿಗೆ ಹೋದರೆ ಇತ್ತ ಮಾಜಿ ಸಂಸದ ಸಿದ್ದೇಶ್ವರ ನೇತೃತ್ವದ ತಂಡ ಮಾಯಕೊಂಡ ಸೇರಿದಂತೆ ದಾವಣಗೆರೆ ದಕ್ಷಿಣದಲ್ಲಿ ಸದಸ್ಯತ್ವ ಮಾಡಿಸುತ್ತಿದೆ. ಅಂತೆಯೇ ಮಾಜಿ ಸಂಸದ ಸಿದ್ದೇಶ್ವರ ಪುತ್ರ ಜಿ.ಎಸ್.ಅನಿತ್ ಈಗ ರಾಜಕಾರಣಕ್ಕೆ ಬರುತ್ತಿದ್ದು, ಕ್ಷೇತ್ರ ಅಡ್ಡಾಡುತ್ತಿದ್ದಾರೆ.ಇದರ ಮೊದಲಭಾಗವಾಗಿ ಮಾಯಕೊಂಡದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡರು.

ಇನ್ನು ತಂದೆ ಜಿ.ಎಂ.ಸಿದ್ದೇಶ್ವರ್ ಗೂ ವಯಸ್ಸಾದ ಕಾರಣ, ಮಗ ಜಿ.ಎಸ್.ಅನಿತ್ ರಾಜಕಾರಣಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ಸುತ್ತಾಡುತ್ತಿದ್ದಾರೆ. ಅಂತೆಯೇ ದಾವಣಗೆರೆ ಲೋಕಸಭಾ ಕ್ಷೇತ್ರದ ಮಾಯಕೊಂಡದ ಕಂದಗಲ್ಲು ಗ್ರಾಮದಲ್ಲಿ ಬಿಜೆಪಿ ಸಕ್ರಿಯ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿದ್ದರು. ಅಲ್ಲದೇ ಅನೇಕ ಹಿರಿಯ ಮುಖಂಡರುಗಳನ್ನೂ ಭೇಟಿ ಮಾಡಿ ಹೆಚ್ಚು ಹೆಚ್ಚು ಸದಸ್ಯತ್ವ ಮಾಡಲು ಕೋರಿದರು. ನಂತರ ಮಾತನಾಡಿದ ಜಿ.ಎಸ್.ಅನಿತ್, 2014ರಲ್ಲಿ ಆನ್ಲೈನ್ ಮೂಲಕ ಸದಸ್ಯತ್ವ ಅಭಿಯಾನ ಆರಂಭವಾಗಿತ್ತು. 2019ರಲ್ಲಿ ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ ಮಾಡಲಾಗಿತ್ತು. ಈಗ ಮನೆ, ಮನೆಗೂ ಭೇಟಿ ನೀಡಿ ಸದಸ್ಯತ್ವ ಅಭಿಯಾನ ಮಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಭಾಜಪ ಮಂಡಲ ಪದಾಧಿಕಾರಿಗಳು ಉಪಸ್ಥಿತರಿದ್ದರು.