


ನಂದೀಶ್ ಭದ್ರಾವತಿ ದಾವಣಗೆರೆ
ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಫೆಡರಲ್ ಸಹಕಾರ ಸಂಘಗಳ ಜಿಲ್ಲಾ ಚುನಾವಣಾಧಿಕಾರಿ ಜನವರಿ 5 ರಂದು ಕ್ಷೇತ್ರವಾರು ಮತದಾರರ ಪಟ್ಟಿಗಳನ್ನು ಅಂತಿಮ ಗೊಳಿಸಿದ್ದು, ಸದರಿ ಮತದಾರರ ಪಟ್ಟಿಗಳನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಿದ್ದಾರೆ.

ನವೆಂಬರ್ 6, 2023 ರ ಅಧಿಸೂಚನೆ ಹಾಗೂ ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960ರನ್ವಯ ಚುನಾವಣಾ ವೇಳಾ ಪಟ್ಟಿಯನ್ನು ನಿಗಧಿಪಡಿಸಲಾಗಿದೆ.

ನಾಮಪತ್ರ ಸಲ್ಲಿಸುವ ದಿನಾಂಕ
ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಜನವರಿ 10, ಬುಧವಾರ ಬೆಳಗ್ಗೆ 11-00 ರಿಂದ ಮಧ್ಯಾಹ್ನ 3-00 ಘಂಟೆಯವರೆಗೆ ನಾಮ ಪತ್ರ ಸಲ್ಲಿಸಬಹುದು. ಹಾಗೆಯೇ ಜನವರಿ 18 ನಾಮ ಪತ್ರ ಸಲ್ಲಿಸಲು ಕೊನೆ ದಿನಾಂಕವಾಗಿದ್ದು,ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಘಂಟೆಯವರಿಗೆ ಸಮಾಯವಕಾಶ ನೀಡಲಾಗಿದೆ
ಅಭ್ಯರ್ಥಿಗಳ ನಾಮಪತ್ರಗಳ ಪರಿಶೀಲನೆ
ಜನವರಿ 19 ಶುಕ್ರವಾರ ಬೆಳಗ್ಗೆ 11-00 ಘಂಟೆಯಿಂದ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಚುನಾವಣಾಧಿಕಾರಿ ನಜ್ಮಾ ಇದರ ಸಂಪೂರ್ಣ ಜವಾಬ್ದಾರಿ ಹೊರಲಿದ್ದಾರೆ. ಅಂದು ಬೆಳಗ್ಗೆ 11 ರಿಂದ ಮೂರು ಗಂಟೆ ತನಕ ಚುನಾವಣೆ ನಾಮ ಪತ್ರ ಪರಿಶೀಲನೆ ನಡೆಯಲಿದೆ.
ಉಮೇದುವಾರಿಕೆ ವಾಪಸ್ ತೆಗೆದುಕೊಳ್ಳಲು ಜನವರಿ 20 ಡೆಡ್ ಲೈನ್
ಉಮೇದುವಾರಿಕೆ ವಾಪಸ್ ತೆಗೆದುಕೊಳ್ಳಲು ಜನವರಿ 20ಡೆಡ್ ಲೈನ್ ನೀಡಲಾಗಿದ್ದು, ಶನಿವಾರ ಅಪರಾಹ್ನ 3 ಘಂಟೆಯೊಳಗೆ ನಾಮ ಪತ್ರ ವಾಪಸ್ ತೆಗೆದುಕೊಳ್ಳಬೇಕು.
ಅಂತೆಯೇ ಕ್ರಮ ಬದ್ಧವಾಗಿ ಜನವರಿ 20 ಕ್ಕೆ ಸ್ಪರ್ಧೆಯಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಲಾಗುವುದು. ಇನ್ನು ಜನವರಿ 20 ರ ಶನಿವಾರ ಅವಶ್ಯ ವಿದ್ದಲ್ಲಿ ಸ್ಪರ್ಧಿಸುವ ಕ್ರಮಬದ್ಧ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣಾ ಚಿಹ್ನೆಯೊಂದಿಗೆ ಸಂಜೆ 4.30 ಕ್ಕೆ ಹಂಚಿಕೆ ಮಾಡುವುದು.
ಜನವರಿ 25 ಕ್ಕೆ ಮತದಾನ
ದಾವಣಗೆರೆ ಹೈಸ್ಕೂಲ್ ಮೈದಾನ ಬಳಿ ಇರುವ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜನವರಿ 25 ಕ್ಕೆ ಚುನಾವಣೆ ನಡೆಯಲಿದೆ. ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಅದೇ ದಿನ ಮತಗಳ ಎಣಿಕೆ ನಡೆಯಲಿದ್ದು, ಚುನಾವಣಾ ಫಲಿತಾಂಶ ಘೋಷಣೆಯಾಗಲಿದ್ದು, ನೂತನ ನಿರ್ದೇಶಕರು ಆಯ್ಕೆಯಾಗಲಿದ್ದಾರೆ. ಒಟ್ಟಾರೆ ಚುನಾವಣೆ ಘೋಷಣೆಯಾಗಿದ್ದು, ಅಭ್ಯರ್ಥಿಗಳು ಇಂದಿನಿಂದ ತಮ್ಮ ಉಮೇದುವಾರಿಕೆ ಸಲ್ಲಿಸಬಹುದು.