
ನಂದೀಶ್ ಭದ್ರಾವತಿ ದಾವಣಗೆರೆ
ದಾವಣಗೆರೆ ಡಿಸಿಸಿ ಬ್ಯಾಂಕ್ ಚುನಾವಣೆ
ದಿನದಿಂದ ದಿನಕ್ಕೆ ಕುತುಹೂಲ ಮೂಡಿಸುತ್ತಿದ್ದು, ಉಮೇದುವಾರಿಕೆ ವಾಪಸ್ ತೆಗೆದುಕೊಳ್ಳುವ ವೇಳೆ ನಡೆದ ನಾನಾ ಘಟನಾವಳಿಗಳು ನೋಡುಗರಿಗೆ ಆಹಾರವಾಯಿತು.
ನಾನಾ ಒತ್ತಡಕ್ಕೆ ನಲುಗಿದ ಅಭ್ಯರ್ಥಿಯೊಬ್ಬರು ಅಳುತ್ತಾ ನಾಮ ಪತ್ರ ವಾಪಸ್ ಪಡೆದರು. ಇನ್ನು ಕೆಲ ಅಭ್ಯರ್ಥಿಗಳು ಅಜ್ಞಾತ ಸ್ಥಳಕ್ಕೆ ನಡೆದಿದ್ದರು. ಕೆಲ ಅಭ್ಯರ್ಥಿಗಳನ್ನು ನಾಮಪತ್ರ ವಾಪಸ್ ಪಡೆಯಲು ಎರಡು ಬಾರಿ ಹಿಡಿದು ತಂದ್ರೂ ಹಿಂಬಾಗಿಲಿನಿಂದ ತಪ್ಪಿಸಿಕೊಂಡರು.

ಇನ್ನು ಕೆಲವರು ತನ್ನ ವಿರೋಧಿಪಡೆಯಿಂದ ನಾಮಪತ್ರ ವಾಪಸ್ ತೆಗೆದುಕೊಂಡರೇ ನಾನು ವಾಪಸ್ ತೆಗೆದುಕೊಳ್ಳುತ್ತೇನೆ, ಇಲ್ಲಂದ್ರೆ ತೆಗೆದುಕೊಳ್ಳೋದಿಲ್ಲ ಅಂದ್ರು.
ಇನ್ನು ಆಸೆ, ಆಮಿಷ, ಚರ್ಚೆ…ಈ ನಡುವೆ ಬಣ ರಾಜಕೀಯ, ಎರಡು ಕಡೆ ಯಾರ್ಯಾರು ನಾಮ ಪತ್ರ ವಾಪಸ್ ಪಡೆದರು, ಎಲ್ಲಿ ಹೋದ್ರು ಎಂಬ ಬಗ್ಗೆ ಚಿಂತೆಯಲ್ಲಿ ತೊಡಗಿದ್ದರು. ಅಲ್ಲದೇ ನಾಲ್ಕುಗಂಟೆಯಾದರೂ ಚಿಹ್ನೆ ಸಿಕ್ಕಿರಲಿಲ್ಲ. ಇನ್ನು ಚಿಹ್ನೆಗಾಗಿ ಅಭ್ಯರ್ಥಿಗಳು ಕಾದು ಕುಳಿತಿದ್ದರು. ಅಲ್ಲದೇ ಡಿಸಿಸಿ ಪಡಸಾಲೆಯಲ್ಲಿ ನಡೆಯುವ ನಾಟಕೀಯ ಬೆಳವಣಿಗೆಗಳನ್ನು ಮಂತ್ರಿಯೊಬ್ಬರಿಗೆ ಮಾಹಿತಿ ನೀಡಲಾಗುತ್ತಿತ್ತು. ಅಂತಿಮವಾಗಿ ಸಂಜೆ 7 ರ ನಂತರ ನೋಟಿಸ್ ಬೋರ್ಡ್ ಗೆ ಅಂತಿಮದಾರರ ಪಟ್ಟಿ ಹಚ್ಚಿ ಚುನಾವಣೆ ಅಖಾಡಕ್ಕೆ ಚುನಾವಣಾಧಿಕಾರಿ ಮುದ್ರೆ ಒತ್ತಿದರು.ಹೀಗೆ ಹತ್ತಾರು ರೋಚಕ ಕ್ಷಣಗಳಿಗೆ ಡಿಸಿಸಿ ಬ್ಯಾಂಕ್ ಪಡಸಾಲೆ ಸಾಕ್ಷಿಯಾಯಿತು. ಇಷ್ಟೇಲ್ಲ ನಡುವೆ ಅವಿರೋಧವಾಗಿ ಆಯ್ಕೆಯಾದ ವೇಣುಗೋಪಾಲ ರೆಡ್ಡಿ ಬೆಂಬಲಿಗರು ಪಟಾಕಿ ಹಚ್ಚಿ ಸಂಭ್ರಮಿಸಿದರು.
ಉಮೇದುವಾರಿಕೆ ವಾಪಸ್ ತೆಗೆದುಕೊಳ್ಳಲು ತಂಡ ನೇಮಕ
ನಾಮಪತ್ರ ವಾಪಸ್ ತೆಗೆದುಕೊಳ್ಳಲು ಪ್ರಭಾವಿ ರಾಜಕಾರಣಿಯೊಬ್ಬರು ಒಂದು ತಂಡವನ್ನೇ ನೇಮಿಸಿದ್ದರು. ಈ ತಂಡ ಉಮೇದುವಾರಿಕೆ ವಾಪಸ್ ತೆಗೆಸುವ ಜವಾಬ್ದಾರಿ ಹೊತ್ತಿತ್ತು. ಅದಕ್ಕಾಗಿ ಸುಮಾರು ಮೂರ್ನಾಲ್ಕು ದಿನಗಳ ಕಾಲ ರಾಜಿ ಸಂಧಾನ ಕಾರ್ಯದಲ್ಲಿ ತೊಡಗಿತ್ತು. ಅಂತಿಮವಾಗಿ ಆ ಜವಾಬ್ದಾರಿ ನಿರ್ವಹಿಸಲು ನಾನಾ ಕಸರತ್ತು ನಡೆಸಿತ್ತು. ಆದರೆ ಕೊನೆ ಕ್ಷಣದಲ್ಲಿ ಉಮೇದುವಾರಿಕೆ ಹಿಂತೆಗೆದುಕೊಳ್ಳಲು ತಂಡ ಸೋತಿತು
ಒಂದೇ ಪಕ್ಷದ ಎರಡು ಬಣ
ಕಳೆದ ಬಾರಿ ಬಿಜೆಪಿ ಆಡಳಿತ ಮಂಡಳಿ ಇದ್ದ ಕಾರಣ, ಈ ಬಾರಿ ಕಾಂಗ್ರೆಸ್ ಆಡಳಿತ ತರಬೇಕೆಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪಣ ತೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಅವಿರೋಧವಾಗಿ ಆಯ್ಕೆ ಮಾಡಲು ಸೂಚಿಸಿದ್ದರು. ಆದರೆ ಹೆಚ್ಚಿನ ಆಕಾಂಕ್ಷಿಗಳು ಇದ್ದ ಕಾರಣ ಬಣ ರಾಜಕೀಯ ಶುರುವಾಯಿತು. ಅಲ್ಲದೇ ಇಬ್ಬರೂ ಕೂಡ ಮೇಲುಗೈ ಸಾಧಿಸಲು ತಿಣುಕಾಡಿದರು. ಆದರೆ ಈ ಪ್ರಯತ್ನ ಕೈಗೂಡಲಿಲ್ಲ.
ಸಂಜೆ ಏಳು ಗಂಟೆತನಕ ಹೈಡ್ರಾಮ
ಉಮೇದುವಾರಿಕೆ ವಾಪಸ್ ತೆಗೆದುಕೊಳ್ಳುವುದಕ್ಕಾಗಿ ಸಂಜೆ ಏಳುಗಂಟೆತನಕ ಹೈಡ್ರಾಮ್ ನಡೆಯಿತು. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತುಕತೆ ನಡೆಯಿತು. ಆದರೆ ಈ ಮಾತುಕತೆ ಫಲಪ್ರದವಾಗಲಿಲ್ಲ. ಬಳಿಕ ಎರಡು ತಂಡಗಳು ಡಿಸಿಸಿ ಬ್ಯಾಂಕ್ ಗೆ ನಡೆದವು. ಒಂದು ಬಣ ನಿಮ್ಮ ಕಡೆಯವರು ಉಮೇದುವಾರಿಕೆ ವಾಪಸ್ ತೆಗೆದುಕೊಂಡರೇ, ನಾವು ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಪಟ್ಟು ಹಿಡಿಯಿತು. ಆಗ ಇನ್ನೋಂದು ತಂಡ ಚುನಾವಣೆಗೆ ಹೋಗೋಣ ನಾವು ರೆಡಿ ಎಂದು ಹೊರಟರು. ಬಳಿಕ ಏಳುಗಂಟೆ ಕಚೇರಿಯೊಂದರಲ್ಲಿ ಚರ್ಚೆಗಳು ನಡೆದವು.
ಅಭ್ಯರ್ಥಿಗಳ ಪೋನ್ ಸ್ವೀಚ್ ಆಫ್, ಕುತೂಹಲ ಮೂಡಿದ್ದ ನಡೆ
ಒಂದು ತಂಡ ಅಭ್ಯರ್ಥಿಗಳ ತಲಾಷೆ ನಡೆಸಿದ ಕಾರಣ ಹಲವರು ಪೋನ್ ಸ್ವೀಚ್ ಆಫ್ ಮಾಡಿದ್ದರು. ಆದರೆ ತಂಡದ ನಾಯಕರು ಅವರ ಉಮೇದುವಾರಿಕೆ ವಾಪಸ್ ತೆಗೆದುಕೊಳ್ಳಲು ಹುಡುಕಾಟ ನಡೆಸಿದರು. ಆದರೆ ಅವರು ಅಷ್ಟೋತ್ತಿಗಾಗಲೇ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಸಂಜೆ ಏಳು ಗಂಟೆ ಆದ್ರೂ ಅವರು ಬರಲೇ ಇಲ್ಲ..ಹಲವರಿಗೆ ಈ ಬಗ್ಗೆ ಕುತುಹೂಲ ಕೆರಳಿತ್ತು.
ಮಾಜಿ ನಿರ್ದೇಶಕ ಶ್ರೀನಿವಾಸ್ ಶೆಟ್ರುಗೆ ಕೋಕ್
ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಶ್ರೀನಿವಾಸ್ ಶೆಟ್ರು ಉಮೇದುವಾರಿಕೆ ಸಲ್ಲಿಸಿದ್ದು, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಬೆಂಬಲಕ್ಕೆ ಕಾದಿದ್ದರು. ಅದಕ್ಕಾಗಿ ಅಂತಿಮ ಕ್ಷಣದವರಿಗೂ ಹೋರಾಟ ನಡೆಸಿದರು. ಆದರೆ ಸಚಿವರು ವಾಪಸ್ ತೆಗೆದುಕೊಳ್ಳಿ ಎಂಬ ಸೂಚನೆ ಕೊಟ್ಟರು. ಈ ಹಿನ್ನೆಲೆಯಲ್ಲಿ ಶ್ರೀನಿವಾಸ್ ಶೆಟ್ರು ತಮ್ಮ ನಾಮ ಪತ್ರ ವಾಪಸ್ ತೆಗೆದುಕೊಂಡರು.
ಬಿಜೆಪಿ ನಾಯಕರಲ್ಲಿ ಇರಲಿಲ್ಲ ಒಳಜಗಳ
ಕಾಂಗ್ರೆಸ್ ನಲ್ಲಿದ್ದ ಒಳ ಜಗಳ ಬಿಜೆಪಿಯಲ್ಲಿ ಕಂಡು ಬರಲಿಲ್ಲ. ಈ ಕಾರಣದಿಂದ ಅವರು ತಟಸ್ಥವಾಗಿದ್ದರು. ಆದರೆ ಕಾಂಗ್ರೆಸ್ ನಲ್ಲಿ ಆಗುತ್ತಿದ್ದ ಬದಲಾವಣೆಗೆ ಬಗ್ಗೆ ಕಣ್ಣೀಟ್ಟೀದ್ದರು. ಒಟ್ಟಾರೆ ಉಮೇದುವಾರಿಕೆ ವೇಳೆ ಸಾಕಷ್ಟು ನಾಟಕೀಯ ಬೆಳವಣಿಗೆಗಳು ನಡೆದವು.