ಶಿವಮೊಗ್ಗ: ಡಿಸಿಸಿ ( ಜಿಲ್ಲಾ ಕೇಂದ್ರ ಸಹಕಾರ ) ಬ್ಯಾಂಕ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು, ಮಂಜುನಾಥ್ ಗೌಡ ಅವಿರೋಧ ಆಯ್ಕೆ ಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮರಿಯಪ್ಪ ಆಯ್ಕೆಯಾಗಿದ್ದಾರೆ.
ಜೂ. 28ರಂದು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಚುನಾವಣೆ ನಡೆದಿತ್ತು. 13 ನಿರ್ದೇಶಕರ ಪೈಕಿ 11 ನಿರ್ದೇಶಕರು ಮಂಜುನಾಥ ಗೌಡರ ಪರವಾಗಿರುವುದರಿಂದ ಅನಿರೀಕ್ಷಿತ ಬೆಳವಣಿಗೆಗಳು ನಡೆಯುವ ಸಾಧ್ಯತೆಯಿಲ್ಲ. ಸದ್ಯಕ್ಕೆ ಗೌಡರ ಹಾದಿ ನಿರಾಳವಾಗಿದೆ. ಹಿಂದೆಯೂ ಮಂಜುನಾಥ ಗೌಡ ಅಧ್ಯಕ್ಷರಾಗಿದ್ದ ಅವಧಿಯಲ್ಲಿಉಪಾಧ್ಯಕ್ಷರ ಆಯ್ಕೆಯೂ ಅವರ ಮಾತಿನಂತೆಯೇ ನಡೆದಿದೆ. ಈಗ ಆಯ್ಕೆಯಾಗಿರುವ ನಿರ್ದೇಶಕರ ಪೈಕಿ ಬಹುತೇಕರು ಆರ್ಎಂ ಮಂಜು
ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಹಾಗಾಗಿ ಈ ಬಾರಿ ಕೂಡ ಮಂಜುನಾಥ್ ಗೌಡ ಹೇಳಿದವರೇ ಉಪಾಧ್ಯಕ್ಷರಾಗಿದ್ದಾರೆ. ಸದ್ಯ ಕೆ.ಪಿ.ದುಗ್ಗಪ್ಪಗೌಡ, ಜಿ.ಎನ್.ಸುಧೀರ್, ಮರಿಯಪ್ಪ ಉಪಾಧ್ಯಕ್ಷ ಆಕಾಂಕ್ಷಿಗಳಾಗಿದ್ದರು.ಒಟ್ಟಾರೆ ಡಿಸಿಸಿ ಬ್ಯಾಂಕ್ ನ 11 ನೇ ಬಾರಿ ಅಧ್ಯಕ್ಷರಾಗಿ ಮಂಜುನಾಥ್ ಗೌಡ ಆಯ್ಕೆಯಾದರೆ, ನಿರ್ದೇಶಕ ಎಸ್ ಕೆ ಮರಿಯಪ್ಪ ಮೊದಲಬಾರಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬೋರ್ಡ್ ಮೀಟಿಂಗ್ ನಡೆಯುತ್ತಿದ್ದು ಬೋರ್ಡ್ ಮೀಟಿಂಗ್ ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕೃತ ಘೋಷಣೆ ಆಗಲಿದೆ.