
ದಾವಣಗೆರೆ: ರೈತ-ಕಾರ್ಮಿಕವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು, ರೈತ ಮತ್ತು ಕಾರ್ಮಿಕ ಚಳುವಳಿಗಳ ಐಕ್ಯತೆಗಾಗಿ ಅ. 30ರ ಬೆಳಿಗ್ಗೆ 10.30 ಕ್ಕೆ ನಗರದ ಎ.ಪಿ.ಎಂ.ಸಿ ಸಭಾಂಗಣದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಂಘಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಎಐಕೆ ಎಸ್ ಜಿಲ್ಲಾಧ್ಯಕ್ಷ ಆವರಗೆರೆ ಉಮೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ನಡೆಯುವ ಸಮಾವೇಶದ ಉದ್ಘಾಟನೆಯನ್ನು ರೈತಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್ ಬಸವರಾಜಪ್ಪ ನೆರವೇರಿಸಲಿದ್ದಾರೆ.ಹೊನ್ನೂರು ಮುನಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಎಐಕೆಎಸ್ ಜಿಲ್ಲಾ ಉಪಾಧ್ಯಕ್ಷ ಟಿ.ಎಸ್ ನಾಗರಾಜ್,ರೈತ ಸಂಘದ ಜಿಲ್ಲಾಧ್ಯಕ್ಷ ಬುಳ್ಳಾಪುರದ ಹನುಮಂತಪ್ಪ, ಶ್ರೀನಿವಾಸ್ .ಈ,ಗುಮ್ಮನೂರು ಬಸವರಾಜ್,ಪವಿತ್ರ,ಮರುಳಸಿದ್ದಯ್ಯ,ಆನಂದರಾಜ್,ಆವರಗೆರೆ ಚಂದ್ರು,ಮAಜುನಾಥ್ ಕೈದಾಳೆ ಆಗಮಿಸಲಿದ್ದಾರೆಂದರು.ರೈತ ಹಾಗೂ ಕಾರ್ಮಿಕ ಚಳವಳಿಗಳ ಇತಿಹಾಸ ಕುರಿತು ರೈತ ಸಂಘದ ರಾಜ್ಯಾಧ್ಯಕ್ಷರಾದ ಕುರುವ ಗಣೇಶ್,ರಾಜ್ಯ ಉಪಾಧ್ಯಕ್ಷರಾದ ಅರುಣ್ ಕುಮಾರ್ ಕುರುಡಿ ಮಾತನಾಡಲಿದ್ದಾರೆ.
2020ರ ಕೊರೋನಾ ಲಾಕ್ಡೌನ್ ಕಾಲದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಂದಿದ್ದ ಬಂಡವಾಳಿಗರ ಪರ ಮತ್ತು ರೈತ ವಿರೋಧಿ 3 ಕರಾಳ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ರೈತರು ವರ್ಷಗಟ್ಟಲೆ ದೆಹಲಿಯ ಗಡಿಗಳಲ್ಲಿ ಬೀಡು ಬಿಟ್ಟು ರೈತರು ನಡೆಸಿದ ಮಹಾನ್ ಐತಿಹಾಸಿಕ ಹೋರಾಟವು ಕರಾಳ ಕಾಯ್ದೆಯನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಮಣಿಸಿತು.

ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಕಾಯ್ದೆಜಾರಿ, ವಿದ್ಯುತ್ ತಿದ್ದುಪಡಿ ಮಸೂದೆ ರದ್ದತಿ, ರೈತರ ಸಾಲಮನ್ನಾ, ದೆಹಲಿ ರೈತ ಹೋರಾಟ ಸಂದರ್ಭದಲ್ಲಿ ರೈತರ ವಿರುದ್ಧದ ಸುಳ್ಳು ಕೇಸುಗಳನ್ನು ವಾಪಸ್ಸು ಪಡೆಯುವುದಾಗಿ ಕೇಂದ್ರ ಸರ್ಕಾರ ಲಖಿತವಾದ ಭರವಸೆ ನೀಡಿತ್ತು ಆದರೆ ಈ ಭರವಸೆಗಳಲ್ಲಿ ಒಂದನ್ನೂ ಈಡೇರಿಸದೆ ದೇಶದ ರೈತ ಸಮುದಾಯಕ್ಕೆ ದ್ರೋಹವೆಸಗಿದೆ ಆದ್ದರಿಂದ ರೈತ ವಿರೋಧಿ ಮೂರು ಕೃಷಿ ಕಾಯ್ದೆಯನ್ನು ಕೂಡಲೇ ಕೈಬಿಡಬೇಕು. ಕಾರ್ಮಿಕ ವಿರೋಧಿ ನಾಲ್ಕು ಕೋಡ್ ಗಳನ್ನು ರದ್ದುಪಡಿಸಬೇಕು. ಜಿಲ್ಲೆಯಲ್ಲಿ ನೀರಾವರಿ ಯೋಜನೆಯನ್ನು ಸಮಗ್ರವಾಗಿ ಅನುಷ್ಠಾನ ಗೊಳಿಸಬೇಕು ಎಂಬ ವಿವಿಧ ಹಕ್ಕೋತ್ತಾಯಗಳ ಬಗ್ಗೆ ಚರ್ಚೆ ನಡೆಸಿ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಹೊನ್ನೂರು ಮುನಿಯಪ್ಪ,ಈ.ಶ್ರೀನಿವಾಸ್,ಗುಮ್ಮನೂರು ಬಸವರಾಜ್,ನಾಗಸ್ಮಿತ,ನಾಗರಾಜ್,ಭರಮಪ್ಪ,ಸತೀಶ್ ಅರವಿಂದ್,ಐರಣಿ ಚಂದ್ರು ಉಪಸ್ಥಿತರಿದ್ದರು.