


ದಾವಣಗೆರೆ : ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯುತ್ತಿದ್ದು,ಬೆಳಗ್ಗೆ 9ಕ್ಕೆ ಮತದಾನ ಆರಂಭವಾಗಿದ್ದು, 11 ಗಂಟೆಯೋಷ್ಟೊತ್ತಿಗೆ 526 ಮತಕ್ಕೆ 154 ಮತಗಳು ಚಲಾವಣೆಗೊಂಡಿದೆ. ಈ ಮೂಲಕ ಶೇ.30ರಷ್ಟು ಜನರು ಮತ ಹಾಕಿದ್ದಾರೆ.
ದಾವಣಗೆರೆ ಎ ವರ್ಗದ ಭಾಗ 1 ರಲ್ಲಿ 24 ಮತಗಳಿದ್ದು, 19 ಜನರು ಮತ ಹಾಕಿದ್ದಾರೆ. ದಾವಣಗೆರೆ ಎ ವರ್ಗ ಭಾಗ ಎರಡರಲ್ಲಿ 22 ಮತಗಳಿದ್ದು, 7 ಮತಗಳು ಚಲಾವಣೆಗೊಂಡಿವೆ. ಹರಿಹರ ಎ ವರ್ಗದಲ್ಲಿ 29 ಮತಗಳಿದ್ದು, 15 ಮತಗಳು ಚಲಾವಣೆಗೊಂಡಿವೆ. ಚನ್ನಗಿರಿ ಎ ವರ್ಗದ 22 ಮತಗಳಿದ್ದು, 15 ಮತಗಳು ಚಲಾವಣೆಗೊಂಡಿವೆ. ಚನ್ನಗಿರಿ ಭಾಗ 2 ರಲ್ಲಿ 19 ಮತಗಳಿದ್ದು, 1 ಮತಗಳು ಚಲಾವಣೆಗೊಂಡಿದೆ. ಹೊನ್ನಾಳಿಯಲ್ಲಿ 22 ಮತಗಳಿದ್ದು, 16 ಮತಗಳು ಚಲಾವಣೆಗೊಂಡಿದೆ.

ನ್ಯಾಮತಿ ಎ ವರ್ಗದಲ್ಲಿ 13 ಮತಗಳಿದ್ದು, 05 ಮತಗಳು ಚಲಾವಣೆಗೊಂಡಿವೆ. ದಾವಣಗೆರೆ ಸಿ ವರ್ಗದಲ್ಲಿ 43 ಮತಗಳಿದ್ದು, 08 ಮತಗಳು ಚಲಾವಣೆಗೊಂಡಿವೆ. ದಾವಣಗೆರೆ ಹಾಲು ಭಾಗ 1 ರಲ್ಲಿ 123 ಮತಗಳಿದ್ದು, 27 ಮತಗಳು ಚಲಾವಣೆಗೊಂಡಿವೆ. ದಾವಣಗೆರೆ ಭಾಗ 2 ರಲ್ಲಿ 110 ಮತಗಳಿದ್ದು, 17 ಮತಗಳು ಚಲಾವಣೆಗೊಂಡಿವೆ. ದಾವಣಗೆರೆ ಇ ವರ್ಗದಲ್ಲಿ 109 ಮತಗಳಿದ್ದು 24 ಮತಗಳು ಚಲಾವಣೆಗೊಂಡಿವೆ. ಈ ಮೂಲಕ ಮತದಾನ ಚುರುಕುಗೊಂಡಿದೆ.
