
ಭದ್ರಾವತಿ : ಶಿವರಾತ್ರಿ ಹಬ್ಬದ ನಿಮಿತ್ತ ನಗರದಲ್ಲಿ ಸಡಗರ ಮೇಳೈಸಿತ್ತು. ಶಿವನ ದೇಗುಲದಲ್ಲಿ ವಿಶೇಷ ಅಲಂಕಾರ, ಪೂಜಾ ಕೈಂಕರ್ಯಗಳು ಅದ್ದೂರಿಯಾಗಿ ನಡೆದವು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಭೈರವನ ಧ್ಯಾನ ಮಾಡಿ ಓಂ ನಮಃ ಶಿವಾಯ ಮಂತ್ರವನ್ನ ಜಪಿಸಿದರು.
ಹೌದು…ಭದ್ರಾವತಿಯ ಜನ್ನಾಪುರದ ಮಲ್ಲೇಶ್ವರ ದೇವಸ್ಥಾನದಲ್ಲಿ ಈ ದೃಶ್ಯಗಳು ಕಂಡು ಬಂದವು. ದ್ವಾರ ಬಾಗಿಲಿನಲ್ಲಿನಲ್ಲಿಯೇ ಶಿವನಮೂರ್ತಿ ಭಕ್ತರ ಗಮನಸೆಳೆಯುತ್ತಿತ್ತು. ವಿದ್ಯುತ್ ದೀಪಗಳಿಂದ ಅಲಂಕೃತಗೊAಡ ದೇವಾಲಯ ಪ್ರವೇಶಿಸಿದ ಭಕ್ತರು, ಶಿವನ ಮುಂದಿನ ನಂದಿಗೆ ನಮಸ್ಕರಿಸಿ ಗರ್ಭಗುಡಿಯಲ್ಲಿನ ಲಿಂಗಕ್ಕೆ ಕ್ಷೀರಾಭಿಷೇಕ ಮಾಡಿದರು. ಕೆಲ ಭಕ್ತಾದಿಗಳು ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೆ ಅವರೇ ತಂದಿದ್ದ ಹಾಲನ್ನು ತಂದು ಅಭಿಷೇಕ ಮಾಡಿದರು.
ಮಲ್ಲೇಶ್ವರ ದೇವಸ್ಥಾನದಲ್ಲಿ ಮಾತ್ರ ಗರ್ಭಗುಡಿಗೆ ಅವಕಾಶ
ಇಡೀ ಭದ್ರಾವತಿಯಲ್ಲಿ ಮಲ್ಲೇಶ್ವರ ದೇವಸ್ಥಾನದಲ್ಲಿ ಮಾತ್ರ ಗರ್ಭಗುಡಿಯಲ್ಲಿ ಹೋಗಿ ಲಿಂಗಕ್ಕೆ ಅಭಿಷೇಕ ಮಾಡುವ ಅವಕಾಶವಿತ್ತು. ಮಹಾಶಿವರಾತ್ರಿ ಅಂಗವಾಗಿ ಭಕ್ತರು ಶಿವನಾಮ ಸ್ಮರಣೆಯಲ್ಲಿ ಮಿಂದೆದ್ದರು. ಭಕ್ತರು ಉಪವಾಸ ವ್ರತ ಕೈಗೊಂಡು ಈಶ್ವರನ ದರ್ಶನ ಪಡೆದರು. ಭಜನೆ, ಪೂಜೆಯ ಮೂಲಕ ಇಡೀ ರಾತ್ರಿ ಜಾಗರಣೆ, ಶಿವಧ್ಯಾನ ಮಾಡಿದರು. ಇಡೀ ದೇಗುಲ ಭಕ್ತರಿಂದ ತುಂಬಿದ್ದವು. ನಸುಕಿನಿಂದ ಆರಂಭವಾದ ಪೂಜೆ, ಅಭಿಷೇಕ, ಬಿಲ್ವಾರ್ಚನೆಯಂತಹ ಪೂಜಾ ಕೈಂಕರ್ಯಗಳು ತಡರಾತ್ರಿಯವರೆಗೂ ನಡೆದವು. ಶಿವರಾತ್ರಿಯ ಮುನ್ನಾ ದಿನವೇ ದೇಗುಲಗಳಲ್ಲಿ ಸಿದ್ಧತೆಗಳು ಪೂರ್ಣಗೊಂಡಿದ್ದವು. ಹೂವು, ಮಾವಿನ ತೋರಣ, ಬಾಳೆ ಕಂದುಗಳಿAದ ದೇಗುಲಗಳು ಕಂಗೊಳಿಸುತ್ತಿದ್ದವು. ನಸುಕಿನಿಂದಲೇ ಕ್ಷೀರಾಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆಗಳು ನೆರವೇರಿದವು. ಬಳಿಕ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು. ಭಕ್ತರಿಗೆ ದೇಗುಲಗಳ ಬಾಗಿಲು ಬುಧವಾರ ನಸುಕಿನಿಂದ ಗುರುವಾರ ನಸುಕಿನವರೆಗೂ ತೆರೆದಿದ್ದವು.


ಏನೇನು ಕಾರ್ಯಕ್ರಮವಿತ್ತು
ಶ್ರೀ ಅಪರಂಜಿ ಶಿವರಾಜ್, ರಂಗಕರ್ಮಿ, ಕಿರುತೆರೆ ಕಲಾವಿದರು, ಭದ್ರಾವತಿ ಇವರಿಂದ ರಂಗ ರೂಪಕ “ಶಿವಭಕ್ತರ ಭಕ್ತಿ ವೈಭವ” ಕಾರ್ಯಕ್ರಮ
ರಾತ್ರಿ 8-30 ರಿಂದ 10-00 ರವರೆಗೆ ನಡೆಯಿತು. “ಶ್ರೀಧರ ಗುರುಗಳು ಮತ್ತು ಶಿಷ್ಯವೃಂದದವರು” ಉಡಸಲಮ್ಮ ದೇವಸ್ಥಾನ. ಇವರಿಂದ “ತಿವಾನಂದ ಲಹರಿ ಮತ್ತು ಭಕ್ತಿಗೀತೆ” ಕಾರ್ಯಕ್ರಮವಿತ್ತು. ಗಾಯತ್ರಿ ಮತ್ತು ಸಂಗಡಿಗರು” ವಿಧಾತ್ರಿ ಭಜನಾ ಮಂಡಳಿ, ಜನ್ನಾಪುರ, ಭದ್ರಾವತಿ, ಇವರಿಂದ “ಭಕ್ತಿಗೀತೆ ಮತ್ತು ಭಾವಗೀತೆ” ನಡೆಯಿತು. ಈ ಮೂಲಕ ಲಿಂಗೇಶ್ವರನ ದರ್ಶನಕ್ಕೆ ಬಂದಿದ್ದ ಭಕ್ತರ ಹೃನ್ಮನ ತಣಿಸಲಾಯಿತು. ಮಹಿಳೆಯರು ನಿರಂತರವಾಗಿ ಭಜನೆ, ಭಕ್ತಿ ಗೀತೆಗಳನ್ನು ಹಾಡಿದರು. ಸರತಿ ಸಾಲು ದೊಡ್ಡದಾಗಿತ್ತು. ಗಂಟೆಗಟ್ಟಲೆ ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದು ಭಕ್ತರು ಪುನೀತರಾದರು.
ಭಕ್ತರಿಗೆ ಬಾದಾಮಿ ಹಾಲು, ಅವಲಕ್ಕಿಯನ್ನು ಪ್ರಸಾದವಾಗಿ ನೀಡಲಾಯಿತು. ಬಿಸಿಲ ಬೇಗೆ ಹೆಚ್ಚಿದ್ದ ಕಾರಣಕ್ಕೆ ಭಕ್ತರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತರಿಗೆ ಬಿಲ್ವಪತ್ರೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಮುಖರಾದ ಜೆ.ವಿ. ವಿರುಪಾಕ್ಷಯ್ಯ, ಕೆ. ಮಂಜಪ್ಪ ಎನ್. ಧರ್ಮರಾಜ, ಹೆಚ್.ವಿ. ಶಿವರುದ್ರಪ್ಪ, ಜೆ.ಎಂ. ರುದ್ರೇಶ್, ಡಿ. ರುದ್ರೇಶ, ಕೆ. ಮಂಜಪ್ಪ, ಎನ್. ಧರ್ಮರಾಜ್, ಜೆ.ಪಿ.ಹೆಚ್. ಚಂದ್ರಶೇಖರ್, ಕೆ.ಎನ್. ಜೋಗಯ್ಯ, ಎ.ಬಿ. ದೇವೇಂದ್ರಪ್ಪ, ಬಿ.ಕೆ. ಚಂದ್ರಪ್ಪ, ಜ್ಯೋತಿ ಎಸ್. ಸಾಲೇರ, ಜೆ.ಎಂ. ಜಗದೀಶ, ಚಂದ್ರಪ್ಪ (ಕೆಳ್ಳಟ್ಟಿ), ಎಂ. ಮಹಾಲಿಂಗಪ್ಪ, ಶ್ರೀ ಆರ್. ಮಂಜಪ್ಪ, ಬಸವಲಿಂಗಪ್ಪ, ಹರೀಶ್, ರಮೇಶ್ ಸೇರಿದಂತೆ ಇತರರು ಇದ್ದರು.