ದಾವಣಗೆರೆ:
ಆರೋಹಿ ಸಂಗೀತ ಕಲಾ ಸಂಸ್ಥೆ ವತಿಯಿಂದ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿಗಳ ಗುರುಸ್ಮರಣೆ ನಿಮಿತ್ತ ‘ಉದಯ ರಾಗದಿಂದ ಸಂಧ್ಯಾರಾಗ’ ಸಂಗೀತ ಮಹೋತ್ಸವ ಹಾಗೂ ವಾರ್ಷಿಕ ಸಂಭ್ರಮ -2024 ನನ್ನು ಡಿ. 8 ಭಾನುವಾರ ಕುವೆಂಪು ಕನ್ನಡ ಭವನದಲ್ಲಿ ಬೆಳಿಗ್ಗೆ 9.30 ರಿಂದ ರಾತ್ರಿ 8.30 ರವರೆಗೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಆನಂದ್ ಆರ್. ಪಾಟೀಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರು ವರ್ಷದಿಂದ ಆರೋಹಿ ಸಂಗೀತ ಕಲಾ ಸಂಸ್ಥೆ(ರಿ.) ಡಾ॥ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಸ್ಮರಣೆಯ ನಿಮಿತ್ತ ಪ್ರತಿವರ್ಷ “ಉದಯ ರಾಗದಿಂದ ಸಂಧ್ಯಾರಾಗ” ಸಂಗೀತ ಮಹೋತ್ಸವವನ್ನು ನಡೆಸುತ್ತಾ ಬಂದಿದ್ದು, ಇದರ ಜೊತೆಗೆ ಹಿರಿಯ ಹಾಗೂ ಯುವ ಕಲಾವಿದರನ್ನು ಗುರುತಿಸಿ ಅವರಿಂದ ಸಂಗೀತ ಕಾರ್ಯಕ್ರಮವನ್ನು ನಡೆಸುತ್ತಾ, ಆಯೋಜನೆ ಮಾಡುತ್ತಾ ಬಂದಿದ್ದು, ಹಾಗೂ ಪ್ರಶಸ್ತಿ ಪುರಸ್ಕಾರಗಳನ್ನು ನೀಡುತ್ತಾ ಬಂದಿದೆ ಎಂದರು.
ಬೆಳಿಗ್ಗೆ 9.30 ಕ್ಕೆ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಡಿವೈಎಸ್ಪಿ ರುದ್ರೇಶ್ ಉಜ್ಜಿನಿ ಕೊಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸಾಹಿತಿ ಬಿ.ಎನ್. ಮಲ್ಲೇಶ್, ಬಾಪೂಜಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಸಂಪನ್ನ ವಿ. ಮುತಾಲಿಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ, ರವಿಚಂದ್ರ, ಸಾಹಿತಿ ಬಾ.ಮ. ಬಸವರಾಜಯ್ಯ, ಪುಣ್ಯಾಶ್ರಮದ ಕಾರ್ಯದರ್ಶಿ ಜಾಲಿಮರದ ಡಾ. ಕರಿಬಸಪ್ಪ, ಸಹಾಯಕ ಪ್ರಾಧ್ಯಾಪಕ ಡಿ.ಆರ್. ನಟರಾಜ ಹಿರೇಮಳಲಿ ಉಪಸ್ಥಿತರಿರುವರು.
ಸಂಗೀತಗಾರರಾದ ತೋಟಪ್ಪ ಉತ್ತಂಗಿ, ರಾಮಲಿಂಗಾ ಜಲ್ಲಾಪುರ, ಶಿವಬಸವಯ್ಯ ಸ್ವಾಮಿ, ಚನ್ನವೀರಯ್ಯಸ್ವಾಮಿ, ಅಮರಯ್ಯಸ್ವಾಮಿ ಹಿರೇಮಠ್ ಹಾಗೂ ಅಕ್ಕಮ್ಮ ಹಿರೇಮಠ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು. ಇದೇ ವೇಳೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ ನೀಡಲಿದ್ದು,
ಭಕ್ತಿ ಸಂಗೀತ ಕಾರ್ಯಕ್ರಮವಿದೆ. ಪಂ. ವೆಂಕಟೇಶ್ ಅಲ್ಕೋಡ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಸಿಕೊಳ್ಳಲಿದ್ದಾರೆ ಎಂದರು. ನಂತರ ಪುಣ್ಯಾಶ್ರಮದ ಅಂಧ ವಿದ್ಯಾರ್ಥಿಗಳಿಂದ ಸುಗಮ ಸಂಗೀತ ಹಾಗೂ ಸಮೂಹ ಗಾಯನ ನೆರವೇರಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ, ತುಂಬಲು ವಾದಕಸುರೇಶ್ ಕೊಪ್ಪಳ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ರವಿಕುಮಾರ್ ಆಳಂದ ಉಪಸ್ಥಿತರಿದ್ದರು