ದಾವಣಗೆರೆ : 10 ವರ್ಷ.. ಕಳೆದ 10 ವರ್ಷಗಳಿಂದ ಕರ್ನಾಟಕದ ಜನರಿಗೆ ಚೊಂಬುಕೊಟ್ಟಿದ್ಯಾರು..? ಯಾರು ಆ ಚೊಂಬೇಶ್ವರ ಅಂತೇಳಿ ರಾಜ್ಯದ ಜನ ಪ್ರಶ್ನೆ ಮೇಲೆ ಪ್ರಶ್ನೆಗಳನ್ನ ಕೇಳ್ತಾಯಿದ್ದಾರೆ. ಇದಕ್ಕೆ ಒನ್ ವರ್ಡ್ ಆನ್ಸರ್ ಅನ್ನೋ ಹಾಗೆ ರಾಜ್ಯ ಕಾಂಗ್ರೆಸ್ BJP ಅಂತೇಳ್ತಾಯಿದೆ. ಅಷ್ಟೇ ಅಲ್ಲ, ಚೊಂಬಿನ ಮಹಾ ಸಮರವನ್ನನೇ ಕಾಂಗ್ರೆಸ್ ಹಮ್ಮಿಕೊಂಡಿದೆ. ನಿನ್ನೆ ರಾಜ್ಯಕ್ಕೆ ಮೋದಿ ಬಂದ ದಿನವೇ ಹಲವು ಕಡೆ ಚೊಂಬುಗಳನ್ನ ಹಿಡ್ಕೊಂಡು ಜನ ಬಿಜೆಪಿಗೆ ತಿಕ್ಕಾರ ಕೂಗಿದ್ದಾರೆ. ಹಾಗಾದ್ರೆ ರಾಜ್ಯ ಕಾಂಗ್ರೆಸ್ ಬಿಜೆಪಿ ವಿರುದ್ಧ ಚೊಂಬನ್ನೇ ಅಸ್ತ್ರ ಮಾಡ್ಕೊಂಡಿರೋದ್ಯಾಕೆ ಗೊತ್ತಾ?
ಚೊಂಬು.. ಒಂದೇ ಒಂದು ಚೊಂಬು ಇದೀಗ ರಾಜ್ಯ ಬಿಜೆಪಿಗೆ ನಿದ್ದೆಗೆಡಿಸ್ತಾಯಿದೆ. ಚೊಂಬನ್ನ ಯಾರು ಯಾರಿಗೆ ಕೊಟ್ರು.? ಯಾವಾಗ ಕೊಟ್ರು.? ಯಾಕೆ ಕೊಟ್ರು ಅನ್ನೋ ಪ್ರಶ್ನೆಗೆ ಆನ್ಸರ್ ಮಾಡಲಾಗದೆ ಬಿಜೆಪಿಗರು ಕೈ ಕೈ ಹಿಸುಕಿಕೊಳ್ತಾಯಿದ್ದಾರೆ. ಆದ್ರೆ ರಾಜ್ಯ ಕಾಂಗ್ರೆಸ್ ಮಾತ್ರ ಚೊಂಬನ್ನ ಹಿಡ್ಕೊಂಡು ಬೀದಿಗಿಳಿದು ಪ್ರತಿಭಟನೆ ಮಾಡ್ತಾಯಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಎಸಗಿರುವ ನಿರಂತರ ಅನ್ಯಾಯ, ಮೋಸವನ್ನು ಖಂಡಿಸಿ ಎಐಸಿಸಿ ರಾಜ್ಯ ಉಸ್ತುವಾರಿಗಳಾದ ಸುರ್ಜೇವಾಲ್ ಅವರ ನೇತೃತ್ವದಲ್ಲಿ ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ ‘ಚೊಂಬು’ ಹಿಡಿದು ಕೇಂದ್ರದಿಂದ ರಾಜ್ಯಕ್ಕೆ ಸಿಕ್ಕಿದ್ದು ಕೇವಲ ಖಾಲಿ ಚೊಂಬು ಎಂಬ ವಿನೂತನ ಪ್ರತಿಭಟನೆ ನಡೆಸಲಾಯಿತು.
ಇದೇ ರೀತಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಎಸಗಿರುವ ನಿರಂತರ ಅನ್ಯಾಯ, ಮೋಸವನ್ನು ಖಂಡಿಸಿ ಸಚಿವರಾದ
ಕೃಷ್ಣ ಭೈರೇಗೌಡ ಅವರ ನೇತೃತ್ವದಲ್ಲಿ ಬ್ಯಾಟರಾಯಪುರ ವಿಧಾನಸಭಾ ಕ್ಷೇತ್ರದಲ್ಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಲಾಯಿತು.
ಇದಷ್ಠೇ ಅಲ್ಲ., ಸರಣಿ ಟ್ವೀಟ್ ಮಾಡಿರೋ ರಾಜ್ಯ ಕಾಂಗ್ರೆಸ್ ಬಿಜೆಪಿಗೆ ಚೊಂಬಿನ ಬಿಸಿ ತೋರಿಸಿದೆ.. ಕೆಲ ಮಾರಿಕೊಂಡ ಮಾಧ್ಯಮಗಳು ಇದನ್ನ ತೋರಿಸೋ ಹಂಗೂ ಇಲ್ಲ. ಬಿಡೋ ಹಂಗೂ ಇಲ್ಲದಂತಾ ಪರಿಸ್ಥಿತಿಗೆ ಬಂದು ತಲುಪಿವೆ. ಹಾಗಾದ್ರೆ ರಾಜ್ಯ ಕಾಂಗ್ರೆಸ್ ಮಾಡಿರೋ ಆ ಟ್ವೀಟ್ಗಳಲ್ಲಿ ಏನಿದೆ ಗೊತ್ತಾ.? ಅದನ್ನ ಒಂದೊಂದಾಗೇ ತೋರಿಸ್ತೀವಿ ನೋಡಿ.
ಕಾಂಗ್ರೆಸ್ ಟ್ವೀಟ್
ನಂಬರ್. 01
ಬರ ಪರಿಹಾರ ನೀಡಲು ರಾಜ್ಯ ಸರ್ಕಾರ ಹಲವಾರು ಬಾರಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿತ್ತು, ಆದರೆ ಕರ್ನಾಟಕ ವಿರೋಧಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ನೀಡಿದ್ದು ಖಾಲಿ ಚೊಂಬು ಮಾತ್ರ.. ಕನ್ನಡಿಗರಿಗೆ ಖಾಲಿ ಚೊಂಬು ನೀಡಿದ ಬಿಜೆಪಿ ಸರ್ಕಾರಕ್ಕೆ ಮರಳಿ ಅದೇ ಖಾಲಿ ಚೊಂಬನ್ನೇ ನೀಡುವುದು ನ್ಯಾಯಯುತ ಪರಿಹಾರ ಅಂತೇಳಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ. ಅಷ್ಟೇ ಅಲ್ಲ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿದ್ದು ಕೇವಲ ಖಾಲಿ ಚೊಂಬು! ಬರ ಪರಿಹಾರ ವಿಚಾರದಲ್ಲಿ 18 ಸಾವಿರ ಕೋಟಿ ಚೊಂಬು. 15ನೇ ಹಣಕಾಸು ಆಯೋಗದಿಂದ ನೀಡಬೆಕಿದ್ದ 62 ಸಾವಿರ ಕೋಟಿ ಚೊಂಬು. ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಹೇಳಿ ನೀಡಿದ್ದು ಮಾತ್ರ ಚೊಂಬು. ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದು ಹೇಳಿ ಕೊಟ್ಟಿದ್ದು ಮಾತ್ರ ಚೊಂಬು. ನಾವು ಕಟ್ಟುವ ಪ್ರತಿ 100 ರೂ. ತೆರಿಗೆಲಿ 13 ರೂ. ಮಾತ್ರ ವಾಪಸ್ ನೀಡುವ ಮೂಲಕ ಚೊಂಬು. ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರು ರಾಜ್ಯಕ್ಕೆ ನೀಡಿದ್ದು ಚೊಂಬು ಅಂತೇಳಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಟ್ವೀಟ್
ನಂಬರ್. 02
ಕರ್ನಾಟಕಕ್ಕೆ ಮೋದಿ ಕೊಟ್ಟಿದ್ದೇನು ಎಂಬುದನ್ನು ದೇವೇಗೌಡರು ಬಹಿರಂಗ ವೇದಿಕೆಯಲ್ಲೇ ಎತ್ತಿ ತೋರಿಸಿದ್ದಾರೆ, BJPChombuSarkara ನೀಡಿದ ಚೊಂಬನ್ನು ಮರಳಿ ಬಿಜೆಪಿಗೇ ನೀಡಲು ಕನ್ನಡಿಗರು ತೀರ್ಮಾನಿಸಿದ್ದಾರೆ ಅಂತೇಳಿ ದೇವೇಗೌಡ್ರ ನ್ಯೂಸ್ ಪೇಪರ್ನಲ್ಲಿರೋ ಚೊಂಬನ್ನ ಎತ್ತಿ ತೋರಿಸೋ ವಿಡಿಯೋವನ್ನ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಹಂಚಿಕೊಂಡಿದೆ. ಇನ್ನ ಇದೇ ರೀತಿ ಚೊಂಬಿನ ಅಸ್ತ್ರವನ್ನೇ ಬಳಸಿಕೊಂಡಿರೋ ರಾಜ್ಯ ಕಾಂಗ್ರೆಸ್ ಮತ್ತಷ್ಟು ಡೀಟೇಲಾಗಿ ವಿವರಿಸಿದೆ. 2013ರಲ್ಲಿ ಸಬ್ಸಿಡಿ ಸಹಿತ ಅಡುಗೆ ಅನಿಲದ ಬೆಲೆ ₹450ರ ಆಸುಪಾಸಿನಲ್ಲಿತ್ತು, 2014ರ ನಂತರ ಅಡುಗೆ ಅನಿಲದ ಬೆಲೆ ಈಗ ₹1000 ದಾಟಿದೆ, ಸಬ್ಸಿಡಿಯೂ ಸಿಗುತ್ತಿಲ್ಲ. ಉಜ್ವಲಾ ಎಂದವರು ಈಗ ಅಧ್ವಾನ ಮಾಡಿಟ್ಟಿದ್ದಾರೆ.! ಬಡವರ ಕಟ್ಟಿಗೆ ಒಲೆಯ ಹೊಗೆಯಿಂದ ಕಣ್ಣೀರು ಬರುತ್ತಿದೆ ಎಂದವರು ಈಗ ಬೆಲೆ ಏರಿಸಿ ಬಡವರಿಗೆ ಕಣ್ಣೀರು ತರಿಸುತ್ತಿದ್ದಾರೆ ಅಂತೇಳಿ ರಾಜ್ಯ ಕಾಂಗ್ರೆಸ್ ಕುಟುಕಿದೆ.
ಕಾಂಗ್ರೆಸ್ ಟ್ವೀಟ್
ನಂಬರ್. 03
15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ ಪ್ರಕಾರ ಕರ್ನಾಟಕಕ್ಕೆ ಕೇಂದ್ರ ಸರ್ಕಾರ 5,495 ಕೋಟಿ ರೂಪಾಯಿಯನ್ನು ನೀಡಬೇಕಿತ್ತು, ಆದರೆ ಕೇಂದ್ರ ಸರ್ಕಾರ ಕೊಟ್ಟಿದ್ದು ಮಾತ್ರ ಖಾಲಿ ಚೊಂಬು! ಅಷ್ಟೇ ಅಲ್ಲದೆ ಹಣಕಾಸು ಆಯೋಗ ಶಿಫಾರಸು ಮಾಡಿಯೇ ಇಲ್ಲ ಎಂದು ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳಿದ ಕೇಂದ್ರ ವಿತ್ತ ಸಚಿವರು ಕನ್ನಡಿಗರನ್ನು ಮೂರ್ಖರನ್ನಾಗಿಸುವ ಪ್ರಯತ್ನ ಮಾಡಿದ್ದರು. ಕರ್ನಾಟಕಕ್ಕೆ ಚೊಂಬು ಕೊಟ್ಟವರಿಗೆ ಕನ್ನಡಿಗರು ಮರಳಿ ಚೊಂಬನ್ನೇ ಕೊಡುತ್ತಾರೆ.
ಕಾಂಗ್ರೆಸ್ ಟ್ವೀಟ್
ನಂಬರ್. 04
ಡಬಲ್ ಇಂಜಿನ್ ಸರ್ಕಾರವಿದ್ದಾಗಲೂ ಭದ್ರ ಮೇಲ್ದಂಡೆ ಯೋಜನೆಯಲ್ಲಿ ಒಂದೇ ಒಂದು ಹೆಜ್ಜೆಯ ಪ್ರಗತಿಯಾಗಲಿಲ್ಲ, ಮೂಗಿಗೆ ತುಪ್ಪ ಸವರುವಂತೆ ಬಜೆಟ್ ನಲ್ಲಿ 5,300 ಕೋಟಿ ರೂಪಾಯಿಗಳನ್ನು ಘೋಷಿಸಿ ನಂತರ ಬಿಡುಗಡೆ ಮಾಡದೆ ಕನ್ನಡಿಗರಿಗೆ ಚೊಂಬು ನೀಡಿದೆ #BJPChombuSarkara ಬಿಜೆಪಿ ಕೊಟ್ಟ ಚೊಂಬನ್ನು ಕನ್ನಡಿಗರು ಮರಳಿ ಬಿಜೆಪಿಗೆ ನೀಡಬೇಕಿದೆ. ಕನ್ನಡಿಗರಿಗೆ ಬಿಜೆಪಿಯ ಚೊಂಬಿನ ಋಣ ಬೇಕಿಲ್ಲ ಅಂತೇಳಿ ರಾಜ್ಯ ಕಾಂಗ್ರೆಸ್ ಕುಟುಕಿದೆ. ಅದೇ ರೀತಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬರೋಬ್ಬರಿ 10 ವರ್ಷಗಳ ಕಾಲ ದೇಶವನ್ನಾಳಿದೆ, ಈ ಹತ್ತು ವರ್ಷಗಳಲ್ಲಿ ಒಂದೇ ಒಂದು ಜನೋಪಯೋಗಿ ಕೆಲಸಗಳಾಗಲಿಲ್ಲ, ಕೇವಲ ಮೋದಿಯ ವೈಭವೀಕರಣದ ಪ್ರಪಾಗಂಡಾ ಬಿಟ್ಟರೆ ಯಾವುದೇ ಕೆಲಸಗಳು ಕಾಣಸಿಗುವುದಿಲ್ಲ, ಅವರೇ ನೀಡಿದ್ದ ಭರವಸೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ಹತ್ತು ವರ್ಷಗಳ ಸುದೀರ್ಘ ಆಡಳಿತ ಸಿಕ್ಕ ನಂತರವೂ ಹೇಳಿಕೊಳ್ಳಲು ಒಂದೇ ಒಂದು ಸಾಧನೆ ಇಲ್ಲದಿರುವುದು ಕೇಂದ್ರ ಸರ್ಕಾರದ ನಿಷ್ಕ್ರಿಯತೆಗೆ ಸಾಕ್ಷಿ. ಮೋದಿ ಸರ್ಕಾರದ ರಿಪೋರ್ಟ್ ಕಾರ್ಡ್ ತೆಗೆದು ನೋಡಿದರೆ ಕೇವಲ ಸೊನ್ನೆ ಕಾಣುತ್ತದೆಯೇ ಹೊರತು ಸಾಧನೆ ಕಾಣುವುದಿಲ್ಲ ಅಂತೇಳಿ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಟ್ವೀಟ್
ನಂಬರ್. 05
#BJPChombuSarkara ಕನ್ನಡಿಗರಿಗೆ ಕೊಟ್ಟ ಖಾಲಿ ಚೊಂಬಿಗೆ ಉತ್ತರವಾಗಿ ಕನ್ನಡಿಗರಿಂದ ಖಾಲಿ ಕುರ್ಚಿಯ ಉತ್ತರ..! ಮೋದಿಯವರೇ,
ನಿಮ್ಮ ಖಾಲಿ ಚೊಂಬಿನ ಸುಳ್ಳಿನ ಭಾಷಣವನ್ನು ಕೇಳಲು ಕನ್ನಡಿಗರು ಮೂರ್ಖರಲ್ಲ, ಈ ಖಾಲಿ ಕುರ್ಚಿಗಳೇ ಬಿಜೆಪಿಯನ್ನು ದೇಶದಿಂದ ಜಾಗ ಖಾಲಿ ಮಾಡಿಸುವುದಕ್ಕೆ ಮುನ್ನುಡಿ ಬರೆಯುತ್ತವೆ ಅಂತೇಳಿ ರಾಜ್ಯ ಕಾಂಗ್ರೆಸ್ ವಿಡಿಯೋ ಸಮೇತ ಟ್ವೀಟ್ ಮಾಡಿ ಕುಟುಕಿದೆ.
ಹಾಗಾದ್ರೆ ರಾಜ್ಯ ಕಾಂಗ್ರೆಸ್ ಚೊಂಬಿನ ಸಮೇತ ಮಾಡಿರೋ ಈ ಟ್ವೀಟ್ ದಾಳಿಯ ಬಗ್ಗೆ ನೀವೇನಂತಿರಾ?