ದಾವಣಗೆರೆ : ಕಾಂಗ್ರೆಸ್ 40 ವರ್ಷಗಳಿಂದ ನಮ್ಮನ್ನು ತುಳಿಯುತ್ತ ಬಂದಿದೆ ಆದ್ದರಿಂದ ನಾಯಕ ಸಮಾಜ ಬಿಜೆಪಿಗೆ ಮತ ನೀಡಬೇಕೆಂದು ಎಸ್ಪಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ ಕರೆ ನೀಡಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಕರೆ ನೀಡಿದ ಅವರು, ರಾಜ್ಯಾದ್ಯಂತ ಬಿಜೆಪಿಗೆ ಬೆಂಬಲ ಸೂಚಿಸುವಂತೆ ಎಸ್ಟಿ ಮೋರ್ಚಾ ಕರೆ ನೀಡಿದರು. ಇದೇ ವೇಳೆ ರಾಜ್ಯ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶ್ರೀನಿವಾಸ ದಾಸಕರಿಯಪ್ಪ ಬಿಜೆಪಿ 8 ವರ್ಷದ ಆಡಳಿತದಲ್ಲಿ ನಮ್ಮ ಪರವಿತ್ತು, ಸಾಕಷ್ಟು ಅನುಕೂಲ ಮತ್ತು ಅಭಿವೃದ್ಧಿಗೆ ಬಿಜೆಪಿ ಕಾರಣ ಎಂದರು.
ಪಾದಯಾತ್ರೆ ಮತ್ತು ಧರಣಿ ನಂತರ ಮೀಸಲಾತಿ ಕೊಟ್ಟಿದ್ದು ಬೊಮ್ಮಾಯಿ ಸರ್ಕಾರ. ಪರಿಶಿಷ್ಟ ಪಂಗಡದ ಅಭಿವೃದ್ಧಿ ಆಗಿದ್ದು ಬಿಜೆಪಿಯಿಂದ. ದಾವಣಗೆರೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ನಾಯಕ ಸಮುದಾಯದ ಮತದಾರರಿದ್ದಾರೆ. ಕಾಂಗ್ರೆಸ್ 40 ವರ್ಷಗಳಿಂದ ನಮ್ಮನ್ನು ತುಳಿಯುತ್ತ ಬಂದಿದೆ.ಕಾಂಗ್ರೆಸ್ ನಮ್ಮ ಕಡೆ ತಿರುಗಿ ನೋಡಿಲ್ಲ. ವಾಲ್ಮೀಕಿ ಜಯಂತಿಗೆ ರಜೆ ಘೋಷಣೆ ಮಾಡಿದ್ದು ಬಿಎಸ್ವೈ. ದಲಿತ ಮಹಿಳೆ ದ್ರೌಪದಿ ಮುರ್ಮು ಅವರಿಗೆ ರಾಷ್ಟ್ರಪತಿ ಸ್ಥಾನ ನೀಡಿ ಗೌರವಿಸಿದ್ದಾರೆ. ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಟ್ಟು ಗೌರವ ಯೋಚಿಸಿದ್ದಾರೆ.ಕಾಂಗ್ರೆಸ್ ವಾಲ್ಮೀಕಿ ಸಮುದಾಯದ ಕಡೆಗಣನೆ ಮಾಡಿದೆ.ವಾಲ್ಮೀಕಿ ಸಮುದಾಯದ ಮತದಾರರು ಬಿಜೆಪಿಗೆ ಬೆಂಬಲ ನೀಡುವಂತೆ ಕರೆ ನೀಡಿದರು.
ಕಾಂಗ್ರೆಸ್ ೪೦ ವರ್ಷಗಳ ಕಾಲ ಮತಬ್ಯಾಂಕ್‌ನಂತೆ ಬಳಕೆ ಮಾಡಿಕೊಂಡರೂ ರಾಜ್ಯದ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ, ಪ್ರತ್ಯೇಕ ಸಚಿವಾಲಯ ಯಾವುದೇ ಸೌಲಭ್ಯ ಒದಗಿಸಲಿಲ್ಲ. ಕಾಂಗ್ರೆಸ್‌ಗೆ ಅನೇಕ ವರ್ಷಗಳಿಂದ ಪರಿಶಿಷ್ಟ ಪಂಗಡ ದವರು ದುಡಿದಿದ್ದಾರೆ. ಆದರೆ, ಪರಿಶಿಷ್ಟ ಪಂಗಡದ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆ, ಸೌಲಭ್ಯ ಒದಗಿ ಸಲಿಲ್ಲ ಎಂದರು.
ಪರಿಶಿಷ್ಟ ಪಂಗಡಕ್ಕೆ ನೀಡಲಾಗುತ್ತಿರುವ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಅನೇಕ ವರ್ಷ ಹೋರಾಟ ನಡೆಸಲಾಯಿತು. ವಾಲ್ಮೀಕಿ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಿ, ಧರಣಿ ಕೈಗೊಂಡ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಮೀಸಲಾತಿಯನ್ನ ಶೇ. 3ರಿಂದ ಶೇ 7.5ಕ್ಕೆ ಹೆಚ್ಚಿಸಿದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಾಲ್ಮೀಕಿ ಜಯಂತಿ ಆಚರಣೆ ಪ್ರಾರಂಭಿಸಿ, ರಜೆ ಘೋಷಣೆ ಮಾಡಿದವರು. ವಾಲ್ಮೀಕಿ ಭವನ, ಕಲ್ಯಾಣ ಮಂಟಪ ನಿರ್ಮಾಣಕ್ಕೆ ಚಾಲನೆ ನೀಡಿದರು. ಅತೀ ಮುಖ್ಯವಾಗಿ ಪ್ರತ್ಯೇಕ ಸಚಿವಾಲಯ ಪ್ರಾರಂಭಿಸಿದರು. ನಿಗಮ ಮಂಡಳಿಯಲ್ಲಿ ಪಂಗಡದ ಮಹಿಳೆಯರಿಗೆ ಶೇ. ೨೫ ರಿಯಾ ಯತಿ ಒಳಗೊಂಡಂತೆ ಹಲವಾರು ಸೌಲಭ್ಯ ಒದಗಿಸಿದ್ದು ಬಿಜೆಪಿ ಎಂದು ತಿಳಿಸಿದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಿದ್ದಲ್ಲದೆ ರಾಮಾಯಣ ಬರೆದ ವಾಲ್ಮೀಕಿ ಅವರ ಸ್ಮರಣೆ ಗಾಗಿ ವಿಮಾನ ನಿಲ್ದಾಣಕ್ಕೆ ವಾಲ್ಮೀಕಿಯವರ ಹೆಸರಿಟ್ಟವರು ಪ್ರಧಾನಿ ಮೋದಿ. ದ್ರೌಪದಿ ಮುರ್ಮು ಅವರನ್ನ ರಾಷ್ಟ್ರಪತಿಯನ್ನಾಗಿ ಮಾಡಿದ್ದು ಬಿಜೆಪಿ. ಹೀಗೆ ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ಸೌಲಭ್ಯ ನೀಡಿರುವ ಬಿಜೆಪಿ ಅಭ್ಯರ್ಥಿಗೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತ ನೀಡುವ ಮೂಲಕ ಗೆಲ್ಲಿಸ ಬೇಕು. ಪರಿಶಿಷ್ಟ ಪಂಗಡದವರು ಮಾತ್ರವಲ್ಲ ಎಲ್ಲ ಸಮಾಜದವರು ಗಾಯಿತ್ರಿ ಸಿದ್ದೇಶ್ವರ ಅವರಿಗೆ ಮತ ನೀಡಿ ಗೆಲ್ಲಿಸಿ, ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಕೃಷ್ಣಪ್ಪ ತ್ಯಾವಣಿಗೆ, ಪಿ.ಎನ್. ಲೋಕೇಶ್ವರ್, ಲೋಹಿತ್‌ಕುಮಾರ್, ತರಕಾರಿ ಶಿವು, ಫಣಿಯಾಪುರ ಲಿಂಗರಾಜ್, ಡಾ| ಗುಮ್ಮನೂರು ಶ್ರೀನಿವಾಸ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.