ಭದ್ರಾವತಿ : ಕ್ರೀಡಾಕೂಟದಲ್ಲಿ ಭದ್ರಾವತಿ ಸರ್ಎಂವಿ ಕಾಲೇಜು ಸಾಕಷ್ಟು ಹೆಸರು ಮಾಡಿದ್ದು, ಇದೀಗ ಈಕಾಲೇಜಿಗೆ ಮತ್ತೊಂದು ಗರಿ ಬಂದಿದೆ. ನಗರದ ನ್ಯೂಟೌನ್ ಸರ್.ಎಂ.ವಿಶ್ವೇಶ್ವರಯ್ಯ ಕಲಾ ಮತ್ತು ವಾಣಿಜ್ಯ ಕಾಲೇಜು ಆವರಣದಲ್ಲಿ 2024ನೇ ಸಾಲಿನ ಆಗಸ್ಟ್ 9, 10ರ ಎರಡು ದಿನಗಳ ಅಂತರ್ ಕಾಲೇಜು ವೇಟ್ ಲಿಪ್ಟಿಂಗ್ ಮತ್ತು ಪವರ್ ಲಿಫ್ಟಿಂಗ್ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ್ದು, ತೃತೀಯ ಬಾರಿಗೆ ಸಮಗ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ತರಬೇತುದಾರ ಮಹೇಶ್ ಕುಮಾರ್.ಕೆ.ಎಂ, (ದೈಹಿಕ ಶಿಕ್ಷಣ ನಿರ್ದೇಶಕರಾದ) ಪ್ರಾಂಶುಪಾಲ ಡಾ.ಶೈಲಜಾ.ಎಸ್.ಹೊಳೆಹಳ್ಳಿ ಪ್ರಾಧ್ಯಾಪಕ ವರ್ಗ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸಿದ್ದಾರೆ.