ಚಿತ್ರದುರ್ಗ : ನಾವಿರೋದು ಕರ್ನಾಟಕದಲ್ಲಿ, ಇತರೆ ರಾಜ್ಯಗಳಲ್ಲಿ ಅವರ ಭಾಷೆ ಪ್ರೀತಿಸುವಂತೆ, ನಮ್ಮ ರಾಜ್ಯದಲ್ಲಿ ಪ್ರತಿಯೊಬ್ಬರು ಕನ್ನಡ ಪ್ರೀತಿಸಬೇಕು. ಗೌರವ ನೀಡಬೇಕು, ಬೆಳೆಸಬೇಕು. ಕರುನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ. ಆದ್ದರಿಂದ ನಾಮಫಲಕಗಳಲ್ಲಿ ಶೇ. 50 ರಷ್ಟು ಕನ್ನಡ ಬಳಸಲು ಬಿಜೆಪಿ ಯುವ ನಾಯಕ ಜಿ.ಎಸ್.ಅನಿತ್ ಕನ್ನಡಿಗರಲ್ಲಿ ಮನವಿ ಮಾಡಿದರು.
ಚಿತ್ರದುರ್ಗ ನಗರದಲ್ಲಿ ಜೋಗಿಮಟ್ಟಿ ಗೆಳೆಯರ ಬಳಗದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ತಮಿಳುನಾಡು, ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನಾಮಫಲಕಗಳು ಸಂಪೂರ್ಣವಾಗಿ ಅವರ ಭಾಷೆಯಲ್ಲಿ ಇರುತ್ತದೆ..ಅಲ್ಲಿ ಮೊದಲು ಅವರ ಭಾಷೆಗೆ ಪ್ರಾಧ್ಯಾನತೆ ಕೊಟ್ಟು, ನಂತರ ಆಂಗ್ಲ ಭಾಷೆಯಲ್ಲಿ ಹೆಸರು ಹಾಕುತ್ತಾರೆ. ಅದೇ ರೀತಿ ನಾವು ಕೂಡ ಕನ್ನಡಿಗರಾಗಿ ಕನ್ನಡಕ್ಕೆ ಆದ್ಯತೆ ಕೊಡಬೇಕು. ನಾವು ಕನ್ನಡಿಗರು ವಿಶಾಲ ಹೃದಯದವರು ಎಲ್ಲರನ್ನು ಅಪ್ಪಿ ಕೊಳ್ಳುತ್ತೇವೆ..ಅಂತೆಯೇ ಪರ ರಾಜ್ಯದವರಿಗೆ ಕನ್ನಡ ಕಲಿಸಬೇಕು ಎಂದರು.
ಕನ್ನಡಕ್ಕಾಗಿ ಹೋರಾಡಿದ ಹಿರಿಯರನ್ನು ಜಿ.ಎಸ್.ಅನಿತ್ ನೆನೆದರು.ಇನ್ನು ನವೆಂಬರ್ ಮಾತ್ರವಲ್ಲದೆ ದೇಶ ವಿದೇಶಗಳಲ್ಲೂ ಕನ್ನಡಿಗರು ಕನ್ನಡ ಭಾಷೆಯ ಹಬ್ಬವನ್ನು ಆಚರಿಸುತ್ತಾರೆ , ಸೋಮಣ್ಣನವರ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು ರೈಲ್ವೆ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ನೆನೆದರು. ಇನ್ನು ಜೋಗಿಮಟ್ಟಿ ಗೆಳೆಯರ ಬಳಗದ ವತಿಯಿಂದ ಪ್ರತಿ ವರ್ಷ ನಡೆಯುತ್ತಿರುವ ಆರೋಗ್ಯ ತಪಾಸಣಾ ಶಿಬಿರ , ರಕ್ತದಾನ ಶಿಬಿರ , ಸಸಿ ನೆಡುವ ಕಾರ್ಯಕ್ರಮ ಮತ್ತು ಎಲ್ಲಾ ಸಾಮಾಜಿಕ ಕಾರ್ಯಗಳನ್ನು ನೆನೆದರು. ಇದೇ ರೀತಿ ಮುಂದಿನ ದಿನಗಳಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ರಘುಚಂದನ್ ರವರು ನಗರಸಭೆ ಉಪಾಧ್ಯಕ್ಷರಾದ ಶ್ರೀದೇವಿ ಚಕ್ರವರ್ತಿ ಡಾ.ರವಿ ಕುಮಾರ್ , ಲೋಲಾಕ್ಷಮ್ಮ, ಚಂದ್ರಮ್ಮ , ಮುಖಂಡರಾದ ಪೀ ರುದ್ರೇಶ್ , ಹಾಗೂ ಅನೇಕ ಗಣ್ಯರು ಜೋಗಿಮಟ್ಟಿ ಗೆಳೆಯರ ಬಳಗದ ಪದಾಧಿಕಾರಿಗಳು ಜೋಗಿಮಟ್ಟಿ ರಸ್ತೆಯ ನಿವಾಸಿಗಳು ಉಪಸ್ಥಿತರಿದ್ದರು.