
ದಾವಣಗೆರೆ : ದಾವಣಗೆರೆ ಜಿಲ್ಲೆಯ ಅತ್ತಿಗೆರೆ ಗ್ರಾಮದಲ್ಲಿ ಕೇಸರಿ ವಿದ್ಯಾ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಯುವ ಮುಖಂಡರಾದ ಜಿಎಸ್ ಅನಿತ್ ಕುಮಾರ್ ಅವರು ಭಾಗವಹಿಸಿ ಸಂಸ್ಥೆಯ ರಜತ ಮಹೋತ್ಸವದ ಪ್ರಯುಕ್ತ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ. ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾಕ್ಟರ್ ಗುರುಬಸವ ಮಹಾಸ್ವಾಮಿಗಳು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಬಸವರಾಜ್ ನಾಯಕ್ ಸಂಸ್ಥೆಯ ಅಧ್ಯಕ್ಷರಾದ ನಾಗಪ್ಪ ಕಾರ್ಯದರ್ಶಿಗಳಾದ ರವಿ ಮುಖಂಡರಾದ ಗ್ರಾಮದ ಮುರುಗೇಂದ್ರಪ್ಪ, ರೈತ ಮುಖಂಡರಾದ ಮುರುಗೇಂದ್ರಪ್ಪ , ಜಿ.ಎಂ ಹಾಸ್ಪಿಟಲ್ ನ ವೈದ್ಯರಾದ ಡಾ. ಮನೋಜ್ ವಿವೇಕಾನಂದ ಜಾವಗಲ್ , ಹಾಗೂ ಗ್ರಾಮದ ಮುಖಂಡರು ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.