
ಚನ್ನಗಿರಿ: ಚನ್ನಗಿರಿ ತಾಲೂಕಿನ ಅಮ್ಮನಗುಡ್ಡ ದೇಗುಲದ ಸಮೀಪ ಇರುವಂತಹ ಹಳ್ಳದ ಬಿದಿರಿನ ಗಿಡದ ಬಳಿ ನವಜಾತ ಹೆಣ್ಣು ಮಗುವಿಗೆ ಜನ್ಮ ನೀಡಿ ಅಲ್ಲಿಯೇ ಬಿಟ್ಟು ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಳ್ಳದ ಕಡೆಯಿಂದ ಬರುತ್ತಿದ್ದ ಜನರು ಜನಿಸಿದ ಮಗು ಅಳುತ್ತಿರುವ ಸದ್ದು ಕೇಳಿ ಅಲ್ಲಿಯೇ ಇದ್ದ ಅಂಗಡಿಯವರಿಗೆ ತಿಳಿಸಿದ್ದಾರೆ. ಅವರು ತಕ್ಷಣವೇ ಹೋಗಿ ನೋಡಿ ಮಗುವನ್ನು ರಕ್ಷಣೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪಿ.ಎಸ್.ಐ. ಸೈಪುದ್ದೀನ್ ಮತ್ತು ತಂಡ ಮಗುವನ್ನು ತೆಗೆದುಕೊಂಡು ಬಂದು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಿದ್ದಾರೆ.


ಮಗು ಅರೋಗ್ಯವಾಗಿದೆಯೆಂದು ವೈದ್ಯರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಚನ್ನಗಿರಿ ಪೋಲಿಸ್ ಠಾಣೆ ಮೋ 9480803261 ಮತ್ತು ದಾವಣಗೆರೆ ಮಕ್ಕಳ ರಕ್ಷಣಾ ಘಟಕ 95911430013 ರಲ್ಲಿ ಸಂಪರ್ಕಿಸುವಂತೆ ತಿಳಿಸಿದ್ದಾರೆ.