ಭದ್ರಾವತಿ: ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಎರಡನೇ ಪುತ್ರ ಬಸವ ಹತ್ಯೆಗೆ ಸ್ಕೇಚ್ ಹಾಕಿರುವ ಬಗ್ಗೆ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸದ್ಯ ಕಾಂಗ್ರೆಸ್ ಶಾಸಕ ಸಂಗಮೇಶ್ ರಿಗಿಂತ ಮಕ್ಕಳೇ ರಾಜಕಾರಣದಲ್ಲಿ ಹೆಚ್ಚು ಭಾಗಿಯಾಗುತ್ತಿದ್ದು, ಸದ್ಯಕ್ಕೋಂತು ಇಬ್ಬರು ಮಕ್ಕಳು ಎದುರಾಳಿ ಅಪ್ಪಾಜಿಗೌಡ ಮಗ ಅಜಿತ್ ಕ್ಕಿಂತ ಹೆಚ್ಚಾಗಿ ಹೆಸರು ಮಾಡುತ್ತಿದ್ದಾರೆ. ಅಲ್ಲದೇ ನಾನಾ ಕಾರ್ಯಕ್ರಮಗಳಿಗೆ ಶಾಸಕರ ಮಕ್ಕಳೇ ಹೆಚ್ಚಾಗಿ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದಿಷ್ಟು ಹೆಸರು ಮಾಡುತ್ತಿದ್ದಾರೆ. ಹೀಗಿರುವಾಗ ಮಗ ಬಸವೇಶ್ ಹತ್ಯೆಗೆ ಹಂತಕರು ರೂಪಿಸಲಾಗಿದ್ದ ಸ್ಕೆಚ್ ಈಗ ಬಯಲಾಗಿದೆ.ಈ ಸಂಬಂಧ ಶಾಸಕರ ಆಪ್ತರೊಬ್ಬರು ನೀಡಿರುವ ದೂರಿನ ಅನ್ವಯ ಭದ್ರಾವತಿ ಓಲ್ಡ್ ಟೌನ್ ನಲ್ಲಿ ಎಫ್‌ಐಆರ್ ದಾಖಲಾಗಿದೆ.
ಢಿಚ್ಚಿ ಮುಬಾರಕ್ ಎಂಬಾತನಿಂದ ಡೀಲ್
ಜೈಲಿನಲ್ಲಿದ್ದ ಮುಬಾರಕ್ ಎಂಬಾತ ಟಿಪ್ಪು ಎಂಬುವನಿಗೆ ಡೀಲ್ ನೀಡಿದ್ದು ಮುಬಾರಕ್ ಜೈಲಿನಿಂದಲೇ ಹತ್ಯೆಗೆ ಸಂಚು ರೂಪಿಸಿದ್ದಾನೆ. ಅಲ್ಲದೇ ಭದ್ರಾವತಿಯ ಗಾಂಧಿ ಸರ್ಕಲ್ ನಲ್ಲಿ ಬಸವನನ್ನ ಹೊಡೆದು ಹಾಕಿ ಎಂದು ಮುಬಾರಕ್ ಟಿಪ್ಪು ಆ್ಯಂಡ್ ಟೀಂಗೆ ಹೇಳಿದ್ದ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖವಾಗಿದೆ ಎಂಬ ಮಾಹಿತಿ ಇದೆ. ಅಕ್ರಮ ಕೂಟ, ಹತ್ಯೆಗೆ ಸಂಚು, ಸ್ಕೆಚ್ ಸೇರಿದಂತೆ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ. ಒಟ್ಟಾರೆ ಶಾಸಕರೊಬ್ಬರ ಪುತ್ರನಿಗೆ ಈ ರೀತಿಯಾಗಿ ಕೊಲೆಗೆ ಸಂಚು ರೂಪಿಸಿರುವುದು ಭದ್ರಾವತಿ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಘಟನಾವಳಿಗಳ ಬಗ್ಗೆ ಇನ್ನೇಷ್ಟೇ ಮಾಹಿತಿ ಬರಬೇಕಿದೆ.