
ದಾವಣಗೆರೆ : ಚನ್ನಗಿರಿ ತಾಲೂಕಿನ ಜಕ್ಕಲಿ ಗ್ರಾಮದ ಅರ್ಪಿತರವರಿಗೆ ಕುವೆಂಪು ವಿಶ್ವವಿದ್ಯಾಲಯ ತನ್ನ ೩೪ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅರ್ಪಿತವರಿಗೆ ಡಾಕ್ಟರೇಟ್ ನೀಡಿ ಗೌರವಿಸಿದೆ. ಇವರು ಔದ್ಯೋಗಿಕ ರಸಾಯನ ಶಾಸ್ತ್ರದಲ್ಲಿ efficient electrochemical sensing of some organic molecules at different modified electrodes ನಲ್ಲಿ ಮಹಾಪ್ರಬಂಧ ಮಂಡಿಸಿದ್ದರು.ಇವರಿಗೆ ಪ್ರೋ.ಬಿ.ಈ.ಕುಮಾರಸ್ವಾಮಿ ಮಾರ್ಗದರ್ಶಕರಾಗಿದ್ದರು. ಅರ್ಪಿತರವರ ತಂದೆ ಬಸವರಾಜಪ್ಪ ಒಕ್ಕಲುತನ ಮಾಡುತ್ತಿದ್ದು, ತಾಯಿ ಮಂಜುಳ ಗೃಹಿಣಿಯಾಗಿದ್ದಾರೆ. ಪತಿ ನಾಗರಾಜ್ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.

