ಭದ್ರಾವತಿ : ತಾಲೂಕು ಘಟಕದ ವೀರಶೈವ ಮಹಾಸಭಾ ಚುನಾವಣೆಗೆ ವಾಗೀಶ್ ತಂಡದ ಐದು ಜನ ಆಯ್ಕೆಯಾಗಿದ್ದು, ಜಯಬೇರಿ ಬಾರಿಸಿದ್ದಾರೆ. ವಾಗೀಶ್ ಹಾಗೂ ವಿಜಯ್ ಕುಮಾರ್ ತಂಡ ನಡುವೆ ಪೈಪೋಟಿ ನಡೆದಿದ್ದು, ಕದನ ಜೋರಾಗಿತ್ತು. ಅಂತಿಮವಾಗಿ ಎಚ್.ಮಂಜುನಾಥ್ 505, ಭರತ್ ಬಿ.ಎಸ್ 505, ಬಿ.ಚನ್ನಪ್ಪ 511, ಕಾವೇರಮ್ಮ 522, ರೂಪ 495 ಮತಗಳನ್ನು ಪಡೆದು ಜಯಗಳಿಸಿದ್ದಾರೆ