
ಭದ್ರಾವತಿ : ಭದ್ರಾವತಿಯ ಸರ್.ಎಂ.ವಿ ಆರ್ಟ್ಸ್ & ಕಾಮರ್ಸ್ ಕಾಲೇಜಿನ ಖ್ಯಾತ ಅರ್ಥ ಶಾಸ್ತ್ರ ಉಪನ್ಯಾಸಕರಾಗಿದ್ದ ಶ್ರೀ ಮಲ್ಲೇಶಪ್ಪನವರು ದೈವಾಧೀನರಾಗಿರುತ್ತಾರೆ. ಶ್ರೀಯುತರು ತಮ್ಮ ಉಪನ್ಯಾಸದಿಂದಲೇ ಅಸಂಖ್ಯಾತ ವಿದ್ಯಾರ್ಥಿಗಳು ಮನಗೆದ್ದಿದ್ದರು.ಅರ್ಥ ಶಾಸ್ತ್ರದ ಒಟ್ಟಾರೆ ಸಾರವನ್ನು ಕೆಲವೇ ನುಡಿಗಳಲ್ಲಿ ಸಾರಾಂಶ ರೂಪದಲ್ಲಿ ಉಣಬಡಿಸುತ್ತಿದ್ದ ಇವರ ಬೋಧನಾ ಕಲೆ ವಿದ್ಯಾರ್ಥಿಗಳಿಗೆ ಅಚ್ಚು ಮೆಚ್ಚು.
ಅಸಂಖ್ಯಾತ ವಿದ್ಯಾರ್ಥಿಗಳ ಅಭಿಮಾನ ಮತ್ತು ಸ್ನೇಹಿತರ ಪ್ರೀತಿಯನ್ನು ಹೊಂದಿದ್ದ ಇವರು ಇಹಲೋಕವನ್ನು ತ್ಯಜಿಸಿ ದೈವಾಧೀನರಾಗಿರುತ್ತಾರೆ. ಮೃತರ ಆತ್ಮಕ್ಕೆ ಭಗವಂತ ಸದ್ಗತಿಯನ್ನು ನೀಡಲಿ ಮತ್ತು ಕುಟುಂಬ ವರ್ಗಕ್ಕೆ ಮತ್ತು ಅವರ ಅಪಾರ ಶಿಷ್ಯ ವೃಂದಕ್ಕೆ ನೋವನ್ನು ಬರಿಸುವ ಶಕ್ತಿ ನೀಡಲಿ ಎಂದು ಬಂಧುಗಳು ಆಶಿಸಿದ್ದಾರೆ.
ಪತ್ನಿ ಜಮುನಾ ಕೂಡ ಅರ್ಥಶಾಸ್ತ್ರ ಉಪನ್ಯಾಸಕಿ
ಉಪನ್ಯಾಸಕ ಮಲ್ಲೇಶಪ್ಪರ ರೀತಿಯಲ್ಲಿಯೇ ಪತ್ನಿ ಜಮುನಾ ಕೂಡ ಉಪನ್ಯಾಸಕಿಯಾಗಿದ್ದು, ಕಾಗದ ನಗರ ಕಾಲೇಜಿನಲ್ಲಿ ತಮ್ಮದೇ ಆದ ಉಪನ್ಯಾಸದ ಮೂಲಕ ವಿದ್ಯಾರ್ಥಿಗಳ ಮನ ಗೆದ್ದಿದ್ದರು. ಅಲ್ಲದೇ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಹೊಂದಿದ್ದರು. ಮಲ್ಲೇಶಪ್ಪರಿಗೆ ಇಬ್ಬರು ಪುತ್ರರು ಇದ್ದಾರೆ.

