ದಾವಣಗೆರೆ : ನಗರದ ಅಪೂರ್ವ ರೆಸಾರ್ಟ್ ನಲ್ಲಿ ತರಳಬಾಳು ಪೀಠ ಅಂದು-ಇಂದು-ಮುಂದು ಶ್ರೀ ಮಠದ ಸದ್ಬಕ್ತರ ಸಮಾಲೋಚನಾ ಸಭೆಯಲ್ಲಿ ತಂಡೋಪ ತಂಡವಾಗಿ ಜನ ಆಗಮಿಸುತ್ತಿದ್ದಾರೆ.
ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ನೇತೃತ್ವದಲ್ಲಿ ಈ ಸಮಾಲೋಚನೆ ಸಭೆ ನಡೆಯುತ್ತಿದೆ. ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್, ಕೌರವ ಬಿ.ಸಿಪಾಟೀಲ್ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಜೆ.ಆರ್.ಷಣ್ಮುಖಪ್ಪ, ಬಿಜೆಪಿ ನಾಯಕ ಕೆ.ಬಿ.ಕೊಟ್ರೇಶ್ ಸೇರಿದಂತೆ ಹಾಜರಿದ್ದರು.
ಈ ಸಮಾಲೋಚನಾ ಸಭೆಯಲ್ಲಿ ಮಹತ್ತರ ವಿಷಯಗಳು ಚರ್ಚೆ ಮಾಡಲಿದ್ದು, ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆವಹಿಸುವರು. ಈಗಾಗಲೇ ಅಪೂರ್ವ ರೆಸಾರ್ಟ್ ಜನರಿಂದ ತುಂಬಿದ್ದು, ಭಾರೀ ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ.