


ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿದ್ದು, ಡೆಂಗೆ ಪ್ರಕರಣ ಕೂಡ ಹೆಚ್ಚಾಗುತ್ತಿದೆ. ಅದರಂತೆ ಈ ವಾರದ ಅವಧಿಯಲ್ಲಿ ಶಂಕಿತ ಡೆಂಗಿ ಇಬ್ಬರನ್ನು ಬಲಿ ಪಡೆದುಕೊಂಡಿದೆ.
ಗ್ರಾಮದ ನಿವಾಸಿ ಆಶಿಕ್ ರಸೂಲ್ (27) ಮೃತಪಟ್ಟವರು. ಹೊಸನಗರ ರಸ್ತೆಯಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ಅವರನ್ನು ತೀವ್ರ ಜ್ವರದಿಂದಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಶನಿವಾರ ದಾಖಲಿಸಲಾಗಿತ್ತು. ಮಂಗಳವಾರ ಸಂಜೆ ಮೃತಪಟ್ಟರು. ಇತ್ತೀಚೆಗೆ ರಶ್ಮಿ ನಾಯಕ್ ಎಂಬವರೂ ಡೆಂಗಿಯಿಂದ ಮೃತಪಟ್ಟಿದ್ದರು.
