


ದಾವಣಗೆರೆ : ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ರಾಜ್ಯ ಬಿಜೆಪಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಯಾಕಂದ್ರೆ ಬಿಜೆಪಿಯ ಹಾಲಿ ಶಾಸಕರೇ ಬಿಜೆಪಿಗೆ ಗುಡ್ಬೈ ಹೇಳಿದ್ದಾರೆ. ಹಾಗಾದ್ರೆ ಸದ್ದಿಲ್ಲದೆ ನಡೆದು ಹೋಯ್ತಾ ಆಪರೇಷನ್ ಹಸ್ತ..? ಡಿಕೆಶಿ ಪ್ಲ್ಯಾನ್ ನಿಜಕ್ಕೂ ವರ್ಕೌಟ್ ಆಗುತ್ತಾ.?
2ನೇ ಹಂತದ ಲೋಕಸಭಾ ಚುನಾವಣೆ ಇದೇ ಏಪ್ರಿಲ್ 26ರಂದು ನಡೆಯಲಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಮೊದಲ ಹಂತದಲ್ಲೇ ಮತದಾನ ನಡೆಯಲಿದೆ. ಹೀಗಾಗಿ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚು ಎಂಪಿ ಸೀಟುಗಳನ್ನ ಗೆಲ್ಲಬೇಕು ಅಂತೇಳಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪ್ರತಿಷ್ಠೆಯನ್ನ ಪಣಕ್ಕಿಟ್ಟಿವೆ. ಇದೇ ಟೈಮಲ್ಲಿ ಡಿಸಿಎಂ ಡಿಕೆಶಿ ಬಿಜೆಪಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ತಮ್ಮ ಸಂಪರ್ಕದಲ್ಲಿರೋ ಹಲವಾರು ಹಾಲಿ ಬಿಜೆಪಿ ಶಾಸಕರ ಪೈಕಿ ಓರ್ವ ಶಾಸಕ ಬಿಜೆಪಿಗೆ ಗುಡ್ಬೈ ಹೇಳುವಂತೆ ನೋಡಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಾಯಿವೆ. ಹಾಗಾದ್ರೆ ಬಿಜೆಪಿ ಶಾಸಕ ಸ್ಥಾನಕ್ಕೆ ಗುಡ್ಬೈ ಹೇಳಿರೋ ಆ ಶಾಸಕ ಯಾರು ಗೊತ್ತಾ.? ಅವರು ಬೇರ್ಯಾರೂ ಅಲ್ಲ. ಬಿಜೆಪಿಯ ವಿಧಾನಪರಿಷತ್ ಸದಸ್ಯ ಕೆ.ಪಿ.ನಂಜುಂಡಿ..

ಹೌದು ವೀಕ್ಷಕರೇ, ಕೆ.ಪಿ.ನಂಜುಂಡಿ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆಗೆ ಸಂಪರ್ಕದಲ್ಲಿದ್ದು, ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಸದಾಶಿವನಗರ ನಿವಾಸದಲ್ಲಿ ಮಲ್ಲಿಕಾರ್ಜುನ್ ಖರ್ಗೆ, ಡಿ ಕೆ ಶಿವಕುಮಾರ್ ಹಾಗೂ ಕೆ.ಪಿ ನಂಜುಂಡಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಕೆಪಿ ನಂಜುಂಡಿ ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ವಿಶ್ವಕರ್ಮ ಸೇರಿದಂತೆ ಹಿಂದುಳಿದ ಸಮುದಾಯಗಳಿಗೆ ಬಿಜೆಪಿ ಅನ್ಯಾಯ ಮಾಡಿದೆ. ಪಕ್ಷದಲ್ಲಿ ತಮ್ಮ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯ ನೀಡಿಲ್ಲ ಅಂತೇಳಿ ಆರೋಪಿಸಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ವಿಧಾನಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ನಿರ್ಧಾರ ಮಾಡಿದ್ದಾರೆ. ಇದೇ ಬುಧವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ ಎನ್ನಲಾಗುತ್ತಿದೆ.

ನಿಮಗೆ ಗೊತ್ತಿರ್ಲಿ, ವಿಧಾನಸಭೆಯಿಂದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಚುನಾಯಿತರಾಗಿರೋ ಬಿಜೆಪಿ ನಾಯಕ ಕೆ.ಪಿ. ನಂಜುಂಡಿ ಅವರ ಪರಿಷತ್ ಸದಸ್ಯತ್ವ ಅವಧಿ ಮುಂದಿನ ಜೂನ್ 17ಕ್ಕೆ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಇಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನ ಭೇಟಿ ಮಾಡುವ ಮೂಲಕ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಬಣದಲ್ಲಿ ಗುರುತಿಸಿಕೊಂಡಿದ್ದ ಕೆ.ಪಿ.ನಂಜುಂಡಿ ಅವರು ವಿಶ್ವಕರ್ಮ ಸಮುದಾಯದ ಪ್ರಬಲ ನಾಯಕರು ಆಗಿದ್ದರು. ಆದ್ರೆ ಬಿಜೆಪಿ ನಾಯಕರಿಂದ ಅಸಮಾಧಾನಗೊಂಡಿರುವ ಕೆ.ಪಿ.ನಂಜುಂಡಿ ಅವರು ಸಭಾಪತಿ ಬಸವರಾಜ ಹೊರಟ್ಟಿಯವರ ಹುಬ್ಬಳ್ಳಿಯ ಗೃಹ ಕಚೇರಿಗೆ ಮಂಗಳವಾರ ಭೇಟಿ ಮಾಡಿ, ತಮ್ಮ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಸಲ್ಲಿಸಿದ ಬಳಿಕ ಕೆ.ಪಿ.ನಂಜುಂಡಿ ಅವರು ಮಾತನಾಡಿ, ನಾನು ಇಂದು ಸ್ವಯಂ ಪ್ರೇರಣೆಯಿಂದ ರಾಜ್ಯ ವಿಧಾನ ಪರಿಷತ್ಗೆ ರಾಜೀನಾಮೆ ನೀಡಿದ್ದೇನೆ ಅಂತೇಳಿದ್ದಾರೆ. ನಾನು ಮೂಲತಃ ರಾಜಕಾರಣಿ ಅಲ್ಲಾ. ಸಮಾಜಕ್ಕೆ ಏನನ್ನಾದರೂ ಮಾಡಬೇಕು ಎನ್ನುವ ಕಾರಣಕ್ಕಾಗಿ ರಾಜಕೀಯಕ್ಕೆ ಬಂದೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಏನ್ನನ್ನಾದರು ಕೊಡಬೇಕು ಅನ್ನು ಕಾರಣದಿಂದ ಬಂದೆ. ಆದ್ರೆ ಬಿಜೆಪಿಯಲ್ಲಿ ವಿಶ್ವಕರ್ಮ ಸಮಾಜಕ್ಕೆ ಏನಾದರೂ ಸಿಗಬಹುದು ಎನ್ನುವ ಭರವಸೆ ಹುಸಿಯಾಗಿದೆ ಅಂತೇಳಿ ಕೆಪಿ ನಂಜುಂಡಿ ಅವರು ಅಸಮಾಧಾನ ಹೊರಹಾಕಿದ್ದಾರೆ..
ಹಾಗಾದ್ರೆ ಕೆಪಿ ನಂಜುಂಡಿ ಅವರು ಕಾಂಗ್ರೆಸ್ ಪಕ್ಷ ಸೇರೋದ್ರಿಂದ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಅನುಕೂಲವಾಗುತ್ತಾ..? ವಿಶ್ವಕರ್ಮ ಸಮುದಾಯದ ಮತಗಳು ಕಾಂಗ್ರೆಸ್ ಕಡೆ ತಿರುಗುತ್ತವಾ.? ಕಾದು ನೋಡಬೇಕು.