
ದಾವಣಗೆರೆ : ಬಿಜೆಪಿಯಲ್ಲಿನ ಬಣಬಡಿದಾಟಕ್ಕೆ ಬ್ರೇಕ್ ಹಾಕುವುದಕ್ಕೆ ಹೈಕಮಾಂಡ್ ಮುಂದಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಶಿಸ್ತು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ದೃಢ ನಿರ್ಧಾರ ಕೈಗೊಂಡಿದೆ. ಹಾಗಾದ್ರೆ, ಯತ್ನಾಳ್ ಅವರನ್ನು ಉಚ್ಚಾಟಿಸುತ್ತಾ ಹೈಕಮಾಂಡ್? ಎರಡನೇ ನೋಟಿಸ್ ನಲ್ಲಿ ಪ್ರಸ್ತಾಪಿಸಿರುವ ಅಂಶಗಳೇನು? ವಿಜಯೇಂದ್ರ ಮುಂದುವರಿಸುವುದಕ್ಕೆ ಹೈಕಮಾಂಡ್ ಒಲವು ಹೊಂದಿದ್ಯಾಕೆ?
ರಾಜ್ಯ ಬಿಜೆಪಿಯಲ್ಲಿನ ಬಣಬಡಿದಾಟಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಹೈಕಮಾಂಡ್ ನಾಯಕರು, ಪದೇ ಪದೇ ಮುಜುಗರ ತರುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ 2ನೇ ನೋಟಿಸ್ ನೀಡಿದೆ.
ಮೊದಲ ನೋಟಿಸ್ ನೀಡಿದರೂ ತಿದ್ದಿಕೊಂಡಂತೆ ಕಾಣುತ್ತಿಲ್ಲ. ಪಕ್ಷದ ಶಿಸ್ತು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ತಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು? ಈ ಸಂಬಂಧ 72 ಗಂಟೆಯೊಳಗೆ ಉತ್ತರಿಸುವಂತೆ ಖಡಕ್ ನೋಟಿಸ್ ನೀಡಿದೆ.


ಈ ಮೂಲಕ ಹೈಕಮಾಂಡ್ ನಾಯಕರು ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲು ದೃಢ ಹೆಜ್ಜೆ ಇಟ್ಟಂತೆ ಕಾಣ ತೊಡಗಿದೆ. ರೆಬಲ್ಸ್ ತಂಡದಲ್ಲಿ ಯತ್ನಾಳ್ ಒಬ್ಬರಿಗೆ ನೋಟಿಸ್ ನೀಡಿರುವುದು ವಿಶೇಷ.
ಮತ್ತೊಂದು ಸೋಮಣ್ಣ ಮನೆ ಪೂಜೆ ನೆಪದಲ್ಲಿ ಹೈಕಮಾಂಡ್ ಸಂಧಾನಕ್ಕೆ ಮುಂದಾಗಿದ್ದರೂ ಯತ್ನಾಳ್ ಟೀಂ ಒಪ್ಪಿಕೊಳ್ಳದೆ ಇರುವುದರಿಂದ ಸಂಧಾನ ವಿಫಲವಾಗಿದೆ. ಸೋಮಣ್ಣ ಅವರಿಂದ ವಿಜಯೇಂದ್ರ ಅವರನ್ನು ಮುಂದುವರಿಸುವ ಒಲುವು ವ್ಯಕ್ತವಾಗಿದ್ದರಿಂದ ಸಭೆ ವಿಫಲಾಗಿದೆ. ಬಹುತೇಕ ಕೇಂದ್ರ ಸಚಿವ ವಿ.ಸೋಮಣ್ಣ ಅವರು ತಿಳಿಸಿರುವ ಅಭಿಪ್ರಾಯ, ಹೈಕಮಾಂಡ್ ನಿಲುವಾಗಿದೆ.
ಯತ್ನಾಳ್ ಗೆ ನೋಟಿಸ್ ನೀಡುವ ಮೂಲಕ ಬಿಜೆಪಿ ಹೈಕಮಾಂಡ್ ನಾಯಕರು ವಿಜಯೇಂದ್ರ ಅವರನ್ನು ಮತ್ತೊಂದು ಅವಧಿಗೆ ಮುಂದುವರಿಸುವ ಮುನ್ಸೂಚನೆ ನೀಡಿದ್ದಾರೆ. ಯಾವುದೇ ಚುನಾವಣೆ ನಡೆಸದೆ ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಘೋಷಣೆ ಹೊರ ಬೀಳುವ ಸಾಧ್ಯತೆ ಹೆಚ್ಚಿದೆ.
ಇನ್ನು ಯತ್ನಾಳ್ ನೋಟಿಸ್ ಗೆ ಉತ್ತರಿಸುತ್ತಾರಾ ಇಲ್ಲವಾ? ಹಳೇ ಚಾಳಿ ಮುಂದುವರಿಸ್ತಾರಾ? ಮತ್ತು ಬಿಜೆಪಿ ಬಣ ರಾಜಕೀಯಕ್ಕೆ ಬ್ರೇಕ್ ಬೀಳುತ್ತಾ ಕಾದುನೋಡಬೇಕಿ.