
ಮೈಸೂರು: ಯಾವುದೇ ಒಂದು ಉತ್ಪನ್ನ ಉತ್ತಮ ಗುಣಮಟ್ಟ ಹೊಂದಿದ್ದರೆ ಮಾತ್ರ ಆ ಉತ್ಪನ್ನವನ್ನು ಜನರು ಕೊಂಡುಕೊಳ್ಳುತ್ತಾರೆ ಎಂದು ಜಿಎಂ ಗ್ರೂಪ್ ನಿರ್ದೇಶಕ ಅನಿತ್ ಸಿದ್ದೇಶ್ವರ ಹೇಳಿದರು.
ನಗರದ ಮಹಾರಾಜ ಕಾಲೇಜು ಅಂತಾರಾಷ್ಟ್ರೀಯ ವೈಎಫ್) ವತಿಯಿಂದ ಏರ್ಪಡಿಸಿದ್ದ’ವೀರಶೈವ-ಲಿಂಗಾಯತಗ್ಲೋಬಲ್ ಬಿಸಿನೆಸ್ ಕಾನ್ಪ್ಲೇವ್-2025’ರ ನಡೆದ ‘ವಿನ್ಯಾಸದ ಪ್ರಾಮುಖ್ಯತೆ ಮತ್ತು ಎಫ್ಎಂಸಿಜಿಯಲ್ಲಿ ನವೀನ ಪ್ಯಾಕೇಜಿಂಗ್ ಮತ್ತು ಸ್ಥಸ್’ ವಿಷಯ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಮ್ಮ ಬ್ರಾಂಡ್ ಮೇಲೆ ಗ್ರಾಹಕರಿಗೆ ನಂಬಿಕೆ ಇರಬೇಕು. ಹೀಗಾಗಿ, ನಮ್ಮ ಉತ್ಪನ್ನಗಳಿಗೆ ಒಂದು ಹೆಸರು ನೀಡುತ್ತೇವೆ. ಆ ಹೆಸರು ಬೆಳೆಯುತ್ತಿದ್ದರೆ ನಮ್ಮಲ್ಲಿ ವಿಶ್ವಾಸ ಬೆಳೆಯುತ್ತದೆ ಎಂದರು.
ವಿಜಯ ಕರದಂಟು ಮಾಲೀಕ ಸುನಿಲ್ ನಾಗತಾನ್ ಮಾತನಾಡಿ, ಉತ್ಪನ್ನಗಳ ಮೇಲಿನ ಪ್ಯಾಕೇಜಿಂಗ್ ಮಾರುಕಟ್ಟೆ ತಂತ್ರವಾಗಿದ್ದು, ಆಕರ್ಷಕ ಪ್ಯಾಕೇಜಿಂಗ್ನಿಂದಲೇ ಗ್ರಾಹಕರು ಆ ಉತ್ಪನ್ನ ಖರೀದಿಸುತ್ತಾರೆ. ಹೀಗಾಗಿ ಪ್ಯಾಕೇಜಿಂಗ್ ಎನ್ನುವುದು ಬ್ರಾಂಡ್ ಏಳಿಗೆಗೂ ಮುಖ್ಯವಾಗಿದೆ ಎಂದು ಹೇಳಿದರು.


ಉತ್ತಮ ಪ್ಯಾಕೇಜಿಂಗ್ ಗ್ರಾಹಕರನ್ನು ಮರಳು ಮಾಡುತ್ತದೆ. ಉತ್ಪನ್ನದ ಪ್ಯಾಕೇಜಿಂಗ್ ಸರಿಯಾಗಿಲ್ಲದಿದ್ದರೆ ಬ್ಯಾಂಡ್ ಫೇಲ್ ಆಯಿತು ಎಂದೇ ಅರ್ಥ. ಪ್ಯಾಕೇಜಿಂಗ್ ಮಾರಾಟ ಒಂದು ಕಲೆಯಾಗಿದೆ. ಪ್ಯಾಕೇಜಿಂಗ್ ಹೆಚ್ಚು ಕ್ರಿಯಾತ್ಮಕವಾಗಿದ್ದಷ್ಟೂ ಬ್ರಾಂಡ್ ಇಮೇಜ್ ಉತ್ತಮವಾಗಿರುತ್ತದೆ. ಪ್ಯಾಕೇಜಿಂಗ್ ವಿನ್ಯಾಸವನ್ನು ಕಲೆ ಹಾಗೂ ವಿಜ್ಞಾನದ ಸಂಯೋಜನೆ ಇಲ್ಲವೇ ಸರಳ ವಿನ್ಯಾಸ ಎಂದು ಹೇಳಲಾಗುವುದಿಲ್ಲ.
ಗ್ರಾಹಕ ವಸ್ತುವನ್ನು ಖರೀದಿಸಬೇಕೇ ಬೇಡವೇ ಎಂಬುದನ್ನು ಪ್ಯಾಕೇಜಿಂಗ್ ನಿರ್ಧರಿಸುತ್ತದೆ. ಹಾಗಾಗಿ ಉತ್ಪನ್ನದ ಪ್ಯಾಕೇಜಿಂಗ್ ಮಾರುಕಟ್ಟೆ ತಂತ್ರದಲ್ಲಿ ಮಹತ್ವದ್ದಾಗಿದೆ ಎಂದರು.
ಮಲ್ಲಪ್ಪ ಹಿಟ್ಟಿನ ಅಂಗಡಿಯ ಸಂಸ್ಥಾಪಕ ಎಂ.ಎಸ್.ಮೋಹನ್ ಮಾತನಾಡಿ, ನಾವು ಹಿಟ್ಟಿನ ಅಂಗಡಿಯನ್ನು ಪ್ರಾರಂಭ ಮಾಡಿದೆವು. ಆದರೆ, ಹಿಟ್ಟನ್ನು ಹೇಗೆ ಮಾರಾಟ ಮಾಡಬೇಕು ಎಂಬ ಗೊಂದಲ ಇತ್ತು. ಆಗ, ನಾನು ಮತ್ತು ಚಿಕ್ಕಪ್ಪ ಮನೆ ಮನೆಗೆ ಹೋಗಿ ನಾವು ತಯಾರು ಮಾಡಿರುವ ಹಿಟ್ಟಿನ ಕುರಿತು ಜನರಿಗೆ ಮಾಹಿತಿ ನೀಡಿ ಮಾರಾಟ ಮಾಡುತ್ತಿದ್ದೆವು. ಆ ಸಮಯದಲ್ಲಿ ಜನರು ನಮ್ಮ ಹಿಟ್ಟನ್ನು ಕೊಂಡುಕೊಂಡು ರುಚಿ ನೋಡು ತ್ತಿದ್ದರು. ನಾವು ಉತ್ತಮ ಗುಣಮಟ್ಟದ ಹಿಟ್ಟನ್ನು ಮಾರಾಟ ಮಾಡುತ್ತಿದ್ದೆವು. ಆದ್ದರಿಂದ ನಮ್ಮ ಹಿಟ್ಟನ್ನು ಜನರು ಕೊಂಡುಕೊಳ್ಳುತ್ತಿದ್ದರು ಎಂದರು.
ನಮ್ಮ ತಂದೆ ಸಲಹೆಯಂತೆ 25 ಲಕ್ಷ ರೂ.ನ ಪ್ಯಾಕೇಜಿಂಗ್ ಯಂತ್ರವನ್ನು ಖರೀದಿಸಿ ಹಿಟ್ಟನ್ನು ಪ್ಯಾಕೇಜಿಂಗ್ ಮಾಡಲು ಶುರು ಮಾಡಿದವು. 3-4 ತಿಂಗಳು ಪ್ಯಾಕೇಜಿಂಗ್ ಮಾಡಿ ಮಾರಾಟ ಮಾಡಿದೆವು. ಬಳಿಕ ಗ್ರಾಹಕರು ಪ್ಯಾಕೇಜಿಂಗ್ ಮಾಡುವುದು ಬೇಡ ಹಾಗೇ ತೂಕ ಮಾಡಿ ಕೊಡಿ ಎಂದು ಕೇಳಿದರು. ಆದ್ದರಿಂದ ತೂಕ ಮಾಡಿಯೇ ಹಿಟ್ಟನ್ನು ಮಾರಾಟ ಮಾಡುತ್ತಿ ದ್ದೇವೆ ಎಂದು ತಿಳಿಸಿದರು.ಬ್ರಾಂಡ್ ಸಲಹೆಗಾರ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕ ಸುಜಿತ್ ಆರಾಧ್ಯ ವಿಚಾರಗೋಷ್ಠಿ ನಡೆಸಿಕೊಟ್ಟರು

