ದಾವಣಗೆರೆ: ಮನೆಯ ಆವರಣದಲ್ಲಿ ಸಂಗ್ರಹಿಸಿದ್ದ ಕೃಷಿ ಯಂತ್ರೋಕರಣಗಳನ್ನು ಕಳವು ಮಾಡಿದ್ದ 3 ಜನ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ವಶಕ್ಕೆ ಪಡೆದು 15 ಲಕ್ಷ ಮೌಲ್ಯದ ಯಂತ್ರೋಕರಣನ್ನು ವಶಪಡಿಸಿಕೊಳ್ಳಲಾಗಿದೆ.
ತಾಲ್ಲೂಕಿನ ಶಿವಪುರ ಗ್ರಾಮದ ಶೇಖರ ನಾಯ್ಕ ಎಂಬುವವರು ತಮ್ಮ ಮನೆಯ ಆವರಣದಲ್ಲಿ ಸಂಗ್ರಹಿಸಿದ್ದ ಕೃಷಿ ಯಂತ್ರೋಕರಣಗಳು ಕಳುವಾದ ಕುರಿತು ಕಳೆದ ಏ. 6 ರಂದು ಗ್ರಾಮಾಂತರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ್ ಕುಮಾರ್ ಸಂತೋಷ್ ಹಾಗೂ ಮಂಜುನಾಥ ಮತ್ತು ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಶಾಂತ್ ಸಿದ್ದನಗೌಡರ್ ಇವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕ ಕಿರಣ್ ಕುಮಾರ್, ಪಿಎಸ್ಐ ಜೋವಿತ್ ರಾಜ್ ಹಾಗೂ ಸಿಬ್ಬಂದಿಗಳಾದ ದೇವೇಂದ್ರನಾಯ್ಕ್, ನಾಗಭೂಷಣ್, ಅಣ್ಣಯ್ಯ, ಮಹಮ್ಮದ್ಯುಸುಫ್ ಅತ್ತಾರ್, ವೀರೇಶ್ ಪಿ.ಎಂ ರವರನ್ನೊಳಗೊಂಡ ತಂಡ 3 ಜನ ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ವಶಕ್ಕೆ ಪಡೆದು ಸರ್ಕಾರಿ ಪರಿವೀಕ್ಷಣಾಲಯಕ್ಕೆ ಒಪ್ಪಿಸಿದ್ದಾರೆ.
ಇದರೊಂದಿಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ 6 ಕಡೆ ಹಾಗೂ ಮಾಯಕೊಂಡ ಪೊಲೀಸ್ ಠಾಣಾ ಸರಹದ್ದಿನ 3 ಕಡೆ ಕೃತ್ಯವೆಸಗಿದ್ದ 15 ಲಕ್ಷ ರೂ ಮೌಲ್ಯದ 3 ಟ್ರಾಲಿ, 3 ರೂಟವೇಟರ್ 2 ಬಾಂಡ್ಲಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಟ್ರಾಕ್ಟರ್ ಇಂಜಿನ್ನನ್ನು ವಶಪಡಿಸಿಕೊಳ್ಳಲಾಗಿದೆ.