ಜಗಳೂರು : ಅಲೆಮಾರಿ ಮತ್ತು ಅರೇ ಅಲೆಮಾರಿ ಸಮುದಾಯದವರಿಗೆ ಸೂರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿದೇರ್ಶಕ ನಾಗರಾಜ್ ಹೇಳಿದರು.
ಪಟ್ಟಣದ ಅಶ್ವಥ್ ರೆಡ್ಡಿ ನಗರದ ಸಮೀಪ ಬಟ್ಟೆ ಗುಡಿಸಲಿನಲ್ಲಿ ಜೀವನ ನಡೆಸುವಂತ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ ಸರಕಾರದ ವತಿಯಿಂದ ನಿಮಗೆ ಸೂರಿನ ವ್ಯೆವಸ್ಥೆ ಕಲ್ಪಿಸಲಾಗುವುದು ನಿಮಗೆ ರೇಷನ್ ಕಾಡ್, ಆಧಾರ್ ಕಾಡ್ ð, ಮತದಾರರ ಗುರುತಿನ ಚೀಟಿ ಇದೇಯೆ ಎಂದು ಸಮುದಾಯ ದವರನ್ನು ಪ್ರಶ್ನಿಸಿದಾಗ ಇದೇ ಸ್ವಾಮಿ ನಮಗೆ ಮನೆಯ ಅವಶ್ಯಕತೆ ಇದೇ ಅದನ್ನು ಮಾಡಿಸಿಕೊಡಿ ಎಂದು ಮನವಿ ಮಾಡಿಕೊಂಡರು.
ಅಲೆಮಾರಿ ಮತ್ತು ಅರೇ ಅಲೆಮಾರಿ ಸಮುದಾಯದ ತಾಲೂಕು ಅಧ್ಯಕ್ಷ ಕುರಿ ಜಯ್ಯಣ್ಣ ಮಾತನಾಡಿ, ಕಳೆದ ಮೂವತ್ತು ವರ್ಷಗಳಿಂದ ರಸ್ತೆಯ ಪಕ್ಕದಲ್ಲಿ ಬಟ್ಟೆ ಗುಡಿಸಲನ್ನು ಹಾಕಿಕೊಂಡು ಮಳೆ , ಗಾಳಿ ಎನ್ನದೇ ಜೀವನ ನಡೆಸುತ್ತಿದ್ದಾರೆ ವಿಷಜಂತುಗಳ ಹಾವಳಿಗೆ ಕೆಲವರು ಪ್ರಾಣ ಸಹ ಬಿಟ್ಟಿದ್ದಾರೆ ಅದಷ್ಟು ಬೇಗ ಇವರಿಗೆ ಸೂರಿನ ವ್ಯೆವಸ್ಥೆ ಮಾಡಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯೆವಸ್ಥಾಪಕ ಪ್ರಕಾಶ್ ನಾಯ್ಕ , ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮಂಜನಾಥ್, ನಿಲಯ ಮೇಲ್ವಾಚರಕ ಮಹಬಲೇಶ್ವರ, ಉಮೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.