ಬೆಂಗಳೂರು
ಬಳ್ಳಾರಿ, ರಾಯಚೂರು, ತುಮಕೂರಿನಲ್ಲಿ ಬಾಣಂತಿ ಸಾವಾದರೂ ರಾಜ್ಯದಲ್ಲಿ ಹೆಣ್ಣು ಶಿಶು ಜನನ ಹೆಚ್ಚಳವಾಗಿದೆ. ಬಾಲ್ಯವಿವಾಹದಿಂದಾಗಿ ಚಿಕ್ಕ ವಯಸ್ಸಿನಲ್ಲಿ ಗರ್ಭಿಣಿರಾದವರು ಹೆರಿಗೆ ಸಂದರ್ಭದಲ್ಲಿ ಸಾಯುತ್ತಿರುವುದು, ವೈದ್ಯಕೀಯ ಕ್ಷೇತ್ರದ ಕ್ಷಿಪ್ರ ಬೆಳವಣಿಗೆ, ಅಲ್ಪಾ ಸೌಂಡ್ ಸ್ಕ್ಯಾನಿಂಗ್ ಸಹಿತ ಇತರೆ ಆಧುನಿಕ ಪರೀಕ್ಷಾ ವಿಧಾನಗಳಿಂದ ಭ್ರೂಣಲಿಂಗ ಪತ್ತೆ’ ಅಥವಾ ಆಯ್ಕೆ’ ಚಟುವಟಿಕೆ ಸದ್ದಿಲ್ಲದೆ ನಡೆದರೂ, ಪ್ರಮಾಣ ಕಡಿಮೆಯಾಗಿದೆ.
ಇನ್ನು ಒಂದೇ ಮಗು ಸಾಕು ಎನ್ನುವ ಮನೋಭಾವನೆ, ಒಬ್ಬ ಮಹಿಳೆ ಎರಡು ಮಗುವಿಗೂ ಜನ್ಮ ನೀಡದೇ ಇರುವುದು. ಅದು ಹೆಣ್ಣಾಗಲಿ, ಗಂಡಾಗಲಿ, ಮಕ್ಕಳ ಲಾಲನೆ ಪಾಲನೆಗೆ ಹಣದ ಅವಶ್ಯಕತೆ ಹೆಚ್ಚು ಇರುವುದು. ಗಂಡು ಮಗುವೇ ಬೇಕೆನ್ನುವ ಹಂಬಲ ಕಡಿಮೆಯಾಗಿರುವುದು. ಆಹಾರ ಪದ್ದತಿ ಬದಲಾವಣೆಯಿಂದ ಒಂದೇ ಮಗು ಸಾಕು ಎನ್ನುವ ಮನೋಭಾವನೆ ಇರುವುದರಿಂದ ಹೆಣ್ಣು ಮಕ್ಕಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚಳವಾಗಿದೆ.
1000 ಪುರುಷರಿಗೆ 914 ಮಹಿಳೆ.
ಡಿ.3ರವರೆಗಿನ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ 1000 ಪುರುಷರಿಗೆ 914 ಮಹಿಳೆಯರಿದ್ದಾರೆ. ಕಳೆದ ವರ್ಷ 1000 ಪುರುಷರಿಗೆ 905 ಮಹಿಳೆಯರಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಟ್ಟಾರೆ ಲಿಂಗಾನುಪಾತದಲ್ಲಿ ಏರಿಕೆ ಕಂಡುಬAದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇನ್ನೂ ಮೂರು ತಿಂಗಳು ಬಾಕಿ ಇರುವುದರಿಂದ ಲಿಂಗಾನುಪಾತದಲ್ಲಿ ಗಮನಾರ್ಹ ಸುಧಾರಣೆ ಆಗಲಿದೆ ಎಂಬುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರೀಕ್ಷೆಯಾಗಿದೆ. ಇನ್ನು ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಸಕ್ರಿಯವಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲೆಯ ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಲಾಗುತ್ತಿದೆ. ಕೆಲ ಜಿಲ್ಲೆಯಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಯ ಪ್ರಕರಣಗಳು ಕಂಡುಬAದರೂ, ಕಡಿಮೆಯಾಗಿದೆ.
ಏಪ್ರಿಲ್ 1ರಿಂದ ಮಾರ್ಚ್ 31ರ ನಡುವೆ ಲಿಂಗಾನುಪಾತ ಗಣತಿ.
ಪ್ರತಿ ವರ್ಷ ಏಪ್ರಿಲ್ 1ರಿಂದ ಮಾರ್ಚ್ 31ರ ನಡುವೆ ಲಿಂಗಾನುಪಾತ ಗಣತಿ ಮಾಡಲಾಗುತ್ತಿದ್ದು, ಪ್ರಸ್ತುತ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕ ಮಾತ್ರ ಬಾಕಿ ಇದೆ. ಈಗಾಗಲೆ ಶಿವಮೊಗ್ಗ ಜಿಲ್ಲೆ 1000/972 ಅನುಪಾತದೊಂದಿಗೆ ಅತ್ಯುತ್ತಮ ಸಾಧನೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಕಳೆದ ವರ್ಷ 1000/927 ಅನುಪಾತದೊಂದಿಗೆ 13ನೇ ಸ್ಥಾನದಲ್ಲಿದ್ದ ದಾವಣಗೆರೆ ಜಿಲ್ಲೆಯ ಲಿಂಗಾನುಪಾತದಲ್ಲಿ ದೊಡ್ಡ ಮಟ್ಟದ ಸುಧಾರಣೆ ಕಂಡುಬAದಿದೆ. ಪ್ರಸ್ತುತ ಈ ಜಿಲ್ಲೆಯಲ್ಲಿ 1000 ಪುರುಷರಿಗೆ 966 ಮಹಿಳೆಯರಿದ್ದಾರೆ.
ಇನ್ನು ಆರ್ಥಿಕವಾಗಿ, ಹೂಡಿಕೆಯಲ್ಲಿ ಮತ್ತು ಅಭಿವೃದ್ಧಿಯಲ್ಲಿ ಶರವೇಗದಲ್ಲಿ ಸಾಗುತ್ತಿರುವ ಬೆಂಗಳೂರು ನಗರ ಲಿಂಗಾನುಪಾತದ ಪಟ್ಟಿಯಲ್ಲಿ ಕಡೆಯ ಸ್ಥಾನ (31) ದಲ್ಲಿದೆ. ಬೆಂಗಳೂರು ಗ್ರಾಮಾಂತರ 30ನೇ ಸ್ಥಾನದಲ್ಲಿದೆ. ಎರಡೂ ಜಿಲ್ಲೆಗಳ ಲಿಂಗಾನುಪಾತ ಕ್ರಮವಾಗಿ 881 ಮತ್ತು 892 ಇದೆ. ಇದರೊಂದಿಗೆ ಗದಗ (898), ಕಲಬುರ್ಗಿ (900), ಮೈಸೂರು (900), (901). (901). ವಿಜಯಪುರ (902), ಚಿಕ್ಕಮಗಳೂರು (904), ರಾಯಚೂರು (906) ಜಿಲ್ಲೆಗಳಲ್ಲಿ ಹೆಣ್ಣುಮಕ್ಕಳ ಜನನ ಪ್ರಮಾಣ ಕುಸಿದಿದೆ.
ಕರ್ನಾಟಕದ ಒಟ್ಟಾರೆ ಲಿಂಗಾನುಪಾತ ಗಣತಿಯಲ್ಲಿ ಮಲೆನಾಡು ಶಿವಮೊಗ್ಗ ಜಿಲ್ಲೆ ಅತ್ಯುತ್ತಮ ಅನುಪಾತದೊಂದಿಗೆ ಅಗ್ರ ಸ್ಥಾನದಲ್ಲಿರುವುದು ಸಂತಸದ ವಿಷಯ. ಇನ್ನು ಆರ್ಥಿಕವಾಗಿ, ಹೂಡಿಕೆಯಲ್ಲಿ ಮತ್ತು ಅಭಿವೃದ್ಧಿಯಲ್ಲಿ ಶರವೇಗದಲ್ಲಿ ಸಾಗುತ್ತಿರುವ ಬೆಂಗಳೂರು ನಗರ ಲಿಂಗಾನುಪಾತದ ಪಟ್ಟಿಯಲ್ಲಿ ಕಡೆಯ ಸ್ಥಾನ (31) ದಲ್ಲಿದೆ.
——-
ಅಂಕಿ ಸಂಖ್ಯೆ
ಪ್ರತಿ ಸಾವಿರ ಗಂಡಿಗೆ ಎಷ್ಟು ಹೆಣ್ಣು..?
2022-2023 (ಏಪ್ರಿಲ್ ಟು ಮಾರ್ಚ್)-898
2023-2024(ಏಪ್ರಿಲ್ ಟು ಮಾರ್ಚ್) 905
2024-2025ಕ್ಕೆ (ಏಪ್ರಿಲ್ ಟು ನವೆಂಬರ್) ಮೂರು ತಿಂಗಳು ಬಾಕಿ ಇದೆ-914
——–
ಪ್ರಸ್ತುತ ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ಬೆಂಗಳೂರು ನಗರ, ಗ್ರಾಮಾಂತರ ಹಾಗೂ 900ರ ಆಸುಪಾಸು ಅನುಪಾತ ಹೊಂದಿರುವ ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.
–ಸಿ.ಕೆ. ಬಾಷಾ, ನಿವೃತ್ತ ವೈದ್ಯಾಧಿಕಾರಿ
—-
ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರ ಹಂತದಿAದ ವೈದ್ಯರವರೆಗೆ ನಿರಂತರವಾಗಿ ತರಬೇತಿ, ಮಾಹಿತಿ ಕಾರ್ಯಾಗಾರ ನಡೆಸಲಾಗಿದೆ. ತಾಲೂಕು ಮಟ್ಟದಲ್ಲಿ ತರಬೇತಿ ನೀಡಲಾಗಿದೆ. ಹೆಣ್ಣು ಭ್ರೂಣ ಹತ್ಯೆ ತಡೆ ಕುರಿತು ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮ ನಡೆಸಿದ್ದೇವೆ. ಇವೆಲ್ಲದರ ಪರಿಣಾಮ ಜಿಲ್ಲೆಯಲ್ಲಿ ಲಿಂಗಾನುಪಾತ ವೃದ್ಧಿಸಿದೆ.
–ಡಾ.ಎಂ.ಕೆ. ರುದ್ರಸ್ವಾಮಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ.
=====
ಬೆಂಗಳೂರಿನಲ್ಲಿ ಲಿಂಗಾನುಪಾತ ಎಷ್ಟು (ಪ್ರತಿ ಸಾವಿರ ಗಂಡಿಗೆ ಎಷ್ಟು ಹೆಣ್ಣು) (ಏಪ್ರಿಲ್ ಟು ಮಾರ್ಚ್)
ಬೆಂಗಳೂರು ಗ್ರಾಮಾಂತರ-2022-2023ಕ್ಕೆ-907
ಬೆಂಗಳೂರು; ನಗರ-2022-2023ಕ್ಕೆ-861
ಬೆಂಗಳೂರು ಗ್ರಾಮಾಂತರ-2023-2024 (ಏಪ್ರಿಲ್ ಟು ಮಾರ್ಚ್)-920
ಬೆಂಗಳೂರು ನಗರ-2023-2024(ಏಪ್ರಿಲ್ ಟು ಮಾರ್ಚ್)-863
ಬೆಂಗಳೂರುನಗರ-2024-2025 (ಏಪ್ರಿಲ್ ಟು ನವೆಂಬರ್)-892
ಬೆAಗಳೂರು ಗ್ರಾಮಾಂತರ-2024-2025(ಏಪ್ರಿಲ್ ಟು ಮಾರ್ಚ್)-881
———————————————————————
ಜಿಲ್ಲಾವಾರು ಲಿಂಗಾನುಪಾತ (ಸಾವಿರ ಗಂಡಿಗೆ)
ಶಿವಮೊಗ್ಗ-972
ದಾವಣಗೆರೆ-966
ಉಡುಪಿ-964
ರಾಮನಗರ-957
ಕೋಲಾರ-955