ಭದ್ರಾವತಿ: ಹಳೇ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಯನ್ಸ್ ಕ್ಲಬ್‌ನ ಪ್ರಾಂತೀಯ ಸಮ್ಮೇಳನದ ನೆನಪಿಗಾಗಿ 3 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ವಿಶ್ರಾಂತಿ ತಾಣವನ್ನು ಲಯನ್ಸ್ ರಾಜ್ಯಪಾಲ ಮೀರಿ ಕಾನ್ ನಿಯೋ ಉದ್ಘಾಟಿಸಿದರು.
ರೋಗಿಗಳ ಸಂಬಂಧಿಕರು, ಪರೀಕ್ಷೆಗೆ ಬಂದವರು ಕುಳಿತು ವಿಶ್ರಾಂತಿ ಪಡೆಯಲು ನಿರ್ಮಿಸಿರುವ ತಾಣವನ್ನು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಎಸ್ ರಾಜೇಶ್, ಹೆಬ್ಬಂಡಿ ನಾಗರಾಜ್, ಡಾ.ಎಂ ರವೀಂದ್ರ ನಾಥ್, ಹೆಚ್. ಭುವನೇಶ್ವರ್, ಜಿ.ಶ್ರೀನಿವಾಸ್, ಡಾ.ನಾಗರಾಜ್ ವಿ.ಭೈರಿ ಪ್ರೊ.ರಾಮಚಂದ್ರಗೌಡ, ಎಲ್. ದೇವರಾಜ್, ವಿಶ್ರಾಂತಿ ತಾಣದ ದಾನಿ ಕೆ.ಎನ್. ಭೈರಪ್ಪ ಗೌಡ, ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ. ಶಿವಪ್ರಕಾಶ್, ಎಸ್.ಶ್ರೀನಿವಾಸ್, ಬಿ. ದಿವಾಕರ ಶೆಟ್ಟಿ, ರಾಮುಮೂರ್ತಿ ಹಾಗೂ ಇತರರು ಉಪಸ್ಥಿತರಿದ್ದರು.