ನಂದೀಶ್ ಭದ್ರಾವತಿ
ದಾವಣಗೆರೆ: ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯಿಂದ ಒಂದು ಕರೆ ಬಂದಿತ್ತು.ಗಾಡಿಯೊಂದರ ಫೈನ್ ಡಿವ್ಯೂ ಇತ್ತು.ಅವರು ದಾವಣಗೆರೆಗೆ ಬಂದು ಫೈನ್ ಹಣ ಪಾವತಿ ಮಾಡಬೇಕಿತ್ತು ಈಗ ಅಂಚೆ ಕಚೇರಿಯಲ್ಲಿ ಪಾವತಿಯ ಅವಕಾಶ ಲಭ್ಯವಾದ ಕಾರಣ ಆ ಸವಾರರು ಬಾಗಲಕೋಟೆಯ ಅಂಚೆ ಕಚೇರಿಯಲ್ಲಿ ಫೈನ್ ಪಾವತಿಸಿದರು.ಇದರಿಂದ ಇಷ್ಟು ದೂರ ಬರಬೇಕಾದ ಸಮಯ ಹಾಗೂ ಹಣ ಉಳಿತಾಯವಾಯಿತು.
ಸಂಚಾರಿ ನಿಯಮ ಪಾಲಿಸದ ಸಾರ್ವಜನಿಕರು ಅಂಚೆ ಇಲಾಖೆಯಲ್ಲಿ ಚಲನ್ ಪಾವತಿಯ ವ್ಯವಸ್ಥೆ ಕಲ್ಪಿಸಲಾಗಿದ್ದು ಈ ಕುರಿತ ಕಥೆಯ ಹೂರಣವನ್ನು ದಾವಣಗೆರೆ ಜಿಲ್ಲಾ ಅಂಚೆ ಅಧೀಕ್ಷಕ ಚಂದ್ರಶೇಖರ್ ಹೇಳಿದರು.
ಇದೊಂದು ನಿದರ್ಶನವಷ್ಟೇ, ಇಂತಹ ಸಾಕಷ್ಟು ನಿದರ್ಶನಗಳಿವೆ.ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂಚೆ ಇಲಾಖೆ ಪೋಲಿಸ್ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಟ್ರಾಫಿಕ್ ಫೈನ್ ಪಾವತಿಸುವ ವ್ಯವಸ್ಥೆ ಕಲ್ಪಿಸಿದೆ ಎಂದರು.
ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಸಾರ್ವಜನಿಕರಿಂದ ಕೇವಲ ಒಂದು ತಿಂಗಳಲ್ಲೇ ಒಂದು ಲಕ್ಷದ ಎಪ್ಪತ್ತು ಸಾವಿರ ಫೈನ್ ಹಣ ಪಾವತಿಯಾಗಿದ.
ಅಂಚೆಕಚೇರಿಯಲ್ಲಿ ಟ್ರಾಫಿಕ್ ಸಿಗ್ನಲ್ ಉಲ್ಲಂಘನೆಯ ದಂಡ ಪಾವತಿಯಲ್ಲಿ ಕರ್ನಾಟಕದಲ್ಲೇ ದಾವಣಗೆರೆ ಎರಡನೇ ಸ್ಥಾನದಲ್ಲಿದೆ.
ಮೊದಲ ಸ್ಥಾನ ಮಂಗಳೂರು ಪಡೆದಿದೆ. ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದವರ ಮನೆಗೆ ಫೈನ್ ಚಲನ್ ತಲುಪುತ್ತದೆ. ಟ್ರಾಫಿಕ್ ಪೋಲಿಸರು ನಿಯಮ ಉಲ್ಲಂಘನೆ ಮಾಡಿದವರ ಲೀಸ್ಟ್ ನೀಡುತ್ತಾರೆ. ನಂತರ ಅಂಚೆ ಕಚೇರಿಯ ಸೀಲು ಇರುವ ಚಲನ್ನ್ನು ನಿಯಮ ಉಲ್ಲಂಘನೆ ಮಾಡಿರುವವರ ಮನೆಗೆ ತಲುಪಿಸುತ್ತೇವೆ. ಅವರು ಅಂಚೆ ಕಚೇರಿಯಲ್ಲಿ ಬಂದು ದಂಡ ಪಾವತಿ ಮಾಡುವಂತೆ ಮೇಸೇಜ್ ಕೂಡ ಬರುತ್ತದೆ ಎಂದು ಎಸ್ಪಿ ಹೇಳಿದರು.
ಅಂಚೆ ಇಲಾಖೆಯೊಂದಿಗೆ ಒಡಂಬಡಿಕೆ ವ್ಯವಸ್ಥೆ ಮೊದಲು ಚೆನೈನಲ್ಲಿ ಅಳವಡಿಸಲಾಗಿದೆ. ನಂತರ ಕರ್ನಾಟಕದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಕಳೆದೊಂದು ತಿಂಗಳಿನಿಂದ ಎಲ್ಲಾ ಅಂಚೆಕಚೇರಿಯಲ್ಲಿ ಟ್ರಾಫಿಕ್ ಫೈನ್ ನ್ನು ಪಾವತಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ಪೋಲೀಸ್ ಇಲಾಖೆಯಿಂದ ಅಂಚೆ ಇಲಾಖೆಗೆ ಚಲನ್ ನೀಡಲಾಗುತ್ತದೆ. ಚಲನ್ ನೀಡುವಾಗಲೇ ಅಂಚೆ ಕಚೇರಿಯ ಸೀಲ್ ಕೂಡ ಲಗತ್ತಿಸಲಾಗಿರುತ್ತದೆ.
ಉತ್ತಮ ಆದಾಯ
ಇದುವರೆಗೆ ಅಂಚೆ ಇಲಾಖೆಯಲ್ಲಿ 320 ಬಿಲ್ ಕಲೆಕ್ಟ್ ಆಗಿದೆ.ಸುಮಾರು 1,70,000 ಫೈನ್ ಹಣ ಪಾವತಿಯಾಗಿದೆ.ಇದರಿಂದ ಅಂಚೆಇಲಾಖೆಗೆ ಉತ್ತಮ ಆದಾಯ ಬಂದಿದೆ.
ಈ ಮೊದಲೆಲ್ಲಾ ಪೋಲಿಸ್ ಕಚೇರಿಗೆ ಹೋಗಿ ಫೈನ್ ಬಿಲ್ ಪಾವತಿ ಮಾಡಬೇಕಾಗಿತ್ತು.ಅದರಲ್ಲೂ ಕ್ಯೂ ನಿಂತು ಪಾವತಿ ಮಾಡುವ ಅನಿರ್ವಾಯತೆ ಇತ್ತು.ಆದರೀಗ ಅಂಚೆ ಇಲಾಖೆಯಲ್ಲಿ ಯಾವ ತೊಂದರೆ ಇಲ್ಲದಂತೆ ಪಾವತಿ ಮಾಡಬಹುದಾಗಿದೆ ಎಂದರು.
ಆನ್ ಲೈನ್ ವ್ಯವಸ್ಥೆ ಇಲ್ಲ
ಟ್ರಾಫಿಕ್ ಫೈನ್ ನ್ನು ಆನ್ ಲೈನ್ ನಲ್ಲಿ ಪಾವತಿ ಮಾಡುವ ವ್ಯವಸ್ಥೆ ಇಲ್ಲ.ಖುದ್ದಾಗಿ ಬಂದು ಪಾವತಿ ಮಾಡಬೇಕಿದೆ ಎಂದು ಮಾಹಿತಿ ನೀಡಿದರು.ನಂತರ ಫೈನ್ ಮೊತ್ತವನ್ನು ಈ ಪೇಮೆಂಟ್ಮೂಲಕ ಪೋಲಿಸ್ ಇಲಾಖೆಗೆ ಪಾವತಿ ಮಾಡಲಾಗುತ್ತದೆ.ಪ್ರತಿನಿತ್ಯ 15 ರಿಂದ 20 ರಸೀದಿ ಪಾವತಿಯಾಗುತ್ತಿದೆ.ಸಾರ್ವಜನಿಕರಿಗೆ ಫೈನ್ ಮೊತ್ತ ಪಾವತಿ ಮಾಡುವುದು ಈಗ ಸುಲಭವಾಗಿದೆ ಅಂಚೆ ಕಚೇರಿಯಲ್ಲಿ ಪಾವತಿ ಸುಲಭವಾಗಿದೆ ಎಂದರು.
300 ಬಿಲ್ ಪಾವತಿ
ದಾವಣಗೆರೆಯಲ್ಲಿಯೇ ಇಲ್ಲಿಯವರೆಗೆ 300 ಬಿಲ್ ಪಾವತಿಯಾಗಿದೆ. ಫೈನ್ ಪಾವತಿ ಮಾಡಿದ ನಂತರ ಅಂಚೆ ಇಲಾಖೆಯ ಸೀಲು ಹಾಗೂ ಸಹಿಯೊಂದಿಗೆ ರಸೀದಿ ನೀಡಲಾಗುತ್ತದೆ ಎಂದರು